Sulli Deals App Creator : ದೆಹಲಿ ಪೊಲೀಸರಿಂದ ಸುಲ್ಲಿ ಡೀಲ್ಸ್ ಆ್ಯಪ್ ಕ್ರಿಯೇಟರ್‌ ಬಂಧನ

ನವದೆಹಲಿ: ಮುಸ್ಲಿಂ ಸಮುದಾಯದ ಪ್ರಖ್ಯಾತರಾದ ಸುಮಾರು ನೂರು ಮಹಿಳೆಯರ (Muslim women)ರ ಭಾವಚಿತ್ರವನ್ನು ಹಾಕಿ ಹರಾಜಿಗಿದ್ದಾರೆಂದು ಅಪಮಾನ ಮಾಡಿದ ಆಪಾದನೆ ಮೇಲೆ “ಸುಲ್ಲಿ ಡೀಲ್ಸ್” ಆ್ಯಪ್‌ (Sulli Deals App Creator) ಕ್ರಿಯೇಟರ್ ಓಂಕಾರೇಶ್ವರ ಠಾಕೂರ್(Aumkareshwar Thakur) (26), ಎಂಬುವನನ್ನು ದೆಹಲಿ ಪೊಲೀಸರು ಮಧ್ಯಪ್ರದೇಶದ ಇಂದೋರ್‌ನಲ್ಲಿ ಬಂಧಿಸಿದ್ದಾರೆ.

ಬಿಸಿಎ ಪದವೀಧರನಾದ ಈತನೇ ‘ಸುಲ್ಲಿ ಡೀಲ್ಸ್’ ಆ್ಯಪ್ ರಚನೆಯ ಪ್ರಮುಖ ಆರೋಪಿ ಎನ್ನಲಾಗಿದೆ. ಒಂದು ವರ್ಷದಿಂದ ಸಕ್ರಿಯವಾಗಿರುವ ‘ಸುಲ್ಲಿ ಡೀಲ್ಸ್’ ಆ್ಯಪ್ ರಚಿಸಿ ಇದನ್ನು ಟ್ವೀಟರ್‌ನಲ್ಲಿ ಹಂಚಿಕೊಂಡಿದ್ದ ಎಂದು ದೆಹಲಿಯ ಗುಪ್ತಚರ ಫ್ಯೂಷನ್ ವಿಭಾಗದ ಉಪ ಆಯುಕ್ತ ಕೆ.ಪಿ.ಎಸ್.ಮಲ್ಹೋತ್ರಾ ಹೇಳಿದ್ದಾರೆ. ಬಂಧಿಸುವುದಕ್ಕೂ ಮುನ್ನ ಓಂಕಾರೇಶ್ವರ ಠಾಕೂರ್, ತನ್ನ ಹೆಸರಿನಲ್ಲಿದ್ದ ಸಾಮಾಜಿಕ ಜಾಲತಾಣದ ಖಾತೆಯನ್ನು ಡಿಲೀಟ್ ಮಾಡಿದ್ದಾನೆ ಎಂದೂ ತಿಳಿಸಿದ್ದಾರೆ. ಆದರೆ, ಓಂಕಾರೇಶ್ವರ ಠಾಕೂರ್ ತಂದೆ ಅಖಿಲೇಶ್ ಠಾಕೂರ್ ತಮ್ಮ ಮಗನ ಮೇಲೆ ಮಾಡಲಾಗಿರುವ ಆರೋಪವನ್ನು ನಿರಾಕರಿಸಿದ್ದಾರೆ. ತಮ್ಮ ಮಗ ಅಮಾಯಾಕನಾಗಿದ್ದು, ಅವನನ್ನು ಪೊಲೀಸರು ಸಿಲುಕಿಸಿದ್ದಾರೆಂದು ಆರೋಪಿಸಿದ್ದಾರೆ ಎಂದಿದ್ದಾರೆ.

‘ಬುಲ್ಲಿ ಬಾಯ್’ ಆ್ಯಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಮೂಲದ ಎಂಜಿನಿಯರಿಂಗ್ ವಿದ್ಯಾರ್ಥಿ ವಿಶಾಲ್ ಕುಮಾರ್ ಝಾ ಮತ್ತು ಅಸ್ಸಾಂನ ಯುವಕ ನೀರಜ್ ಬಿಷ್ಣೋಯ್ ಎಂಬ ಬಿಟೆಕ್ ಪದವಿ ಕಲಿಯುತ್ತಿರುವ ಯುವಕ ಹಾಗೂ ಪ್ರಮುಖ ಆರೋಪಿ ಎನ್ನಲಾದ ಉತ್ತರಾಖಂಡದ ಯುವತಿಯನ್ನು ಈಗಾಗಲೇ ಬಂಧಿಸಲಾಗಿದೆ. ಈ ಆ್ಯಪ್‌ಗಳನ್ನು ಬಲಪಂಥೀಯ ಮೂಲಭೂತವಾದಿಗಳು ಬಂಧಿಸಿದ್ದಾರೆಂದು ಹೇಳಲಾಗಿದೆ.

‘ಸುಲ್ಲಿ ಡೀಲ್ಸ್’ ಮತ್ತು ‘ಬುಲ್ಲಿಬಾಯ್’ ಆ್ಯಪ್‌ಗಳನ್ನು ಮೈಕ್ರೋಸಾಫ್ಟ್‌ನ ‘ಗಿಟ್‌ಹಬ್’ (ಪ್ಲೇಸ್ಟೋರ್ ಮಾದರಿಯ ವೇದಿಕೆ)ನಿಂದ ಡೌನ್ಲೋಡ್ ಮಾಡಿಕೊಂಡು ತಮಗೆ ಬೇಕಾದಂತೆ ರಚಿಸಿಕೊಳ್ಳಬಹುದಾಗಿದೆ. ಇದನ್ನೇ ಈ ಆರೋಪಿಗಳೂ ಮಾಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣದ ಬಗ್ಗೆ ಮೊದಲು ಪತ್ರಕರ್ತೆಯೊಬ್ಬರು ದೂರು ನೀಡಿದ್ದರು. ನಂತರ ಶಿವಸೇನೆಯ ಸಂಸದೆ ಪ್ರಿಯಾಂಕಾ ಚತುರ್ವೇದಿ ಟ್ವೀಟ್ ಮಾಡಿ, ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಗಮನಸೆಳೆದಿದ್ದರು. ತದನಂತರ ಈ ಆ್ಯಪ್‌ಗಳನ್ನು ಸರ್ಕಾರ ನಿಷೇಧಿಸಿತ್ತು.

ಇದನ್ನೂ ಓದಿ: IT Raids on Liquor Businessman Home: ಮಧ್ಯಪ್ರದೇಶದ ಉದ್ಯಮಿ ಮನೆ ಮೇಲೆ ಐಟಿ ದಾಳಿ: 8 ಕೋಟಿ ವಶ

(Sulli Deals App Creator Arrested by Delhi Police)

Comments are closed.