ನನ್ನನ್ನು ಬೆಳೆಸಿರೋ ಜನ ನನ್ನ ಬಗ್ಗೆ, ನನ್ನ ಮಾತುಗಳನ್ನು ನಂಬುತ್ತಾರೆ ಅಂತಾ ನಂಬಿದ್ದೀನಿ. ಆರೋಪ ಏನೇ ಇದ್ದರೂ ತಪ್ಪು ಸರಿಗಳ ಲೆಕ್ಕಾ ಆ ಭಗವಂತನ ಬಳಿ ಇದ್ದೇ ಇರುತ್ತೆ ಅಂತಾನೂ ನಂಬಿದ್ದೇನೆ ಎಂದು ಸ್ಯಾಂಡಲ್‌ವುಡ್ ನಟಿ ಡಿಂಪಲ್ ಕ್ವೀನ್ ರಚಿತಾರಾಮ್ ಪೋಸ್ಟ್ ಮಾಡಿದ್ದಾರೆ.

ಸ್ಯಾಂಡಲ್‌ವುಡ್‌ನಲ್ಲಿ ನಿರೀಕ್ಷೆ ಹುಟ್ಟಿಸಿದ್ದ ಐಲವ್‌ಯೂ ರಚ್ಚು ಸಿನಿಮಾ ವಿವಾದಕ್ಕೆ ಸಿಲುಕಿದೆ. ಸಹ ಫೈಟರ್ ವಿವೇಕ್ ಹೈ ಟೆನ್ಷನ್ ವಯರ್ ತಗುಲಿ ಮೃತಪಟ್ಟದ್ದ. ಇದರ ಬೆನ್ನಲ್ಲೇ ಚಿತ್ರ ತಂಡದ ವಿರುದ್ದ ಸಾಮಾಜಿಕ ಜಾಲತಾಣಗಳಲ್ಲಿ ಬಾರೀ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲೀಗ ನಟಿ ರಚಿತಾ ರಾಮ್ ತಡವಾಗಿ ಸ್ಪಷ್ಟನೆ ನೀಡುವ ಕಾರ್ಯವನ್ನು ಮಾಡಿದ್ದಾರೆ.

ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ನೀವೆಲ್ಲಾ ಕ್ಷೇಮವಾಗಿದ್ದೀರಿ ಅಂತಾ ನಂಬಿದ್ದೇನೆ. ದಯವಿಟ್ಟು ಎಲ್ಲರೂ ಹುಷಾರಾಗಿರಿ. ಲವ್ ಯೂ ರಚ್ಚು ಸಿನಿಮಾ ಸೆಟ್‌ನಲ್ಲಿ ನಡೆಯಬಾರದ ಘಟನೆ ನಡೆದಿದೆ. ಇದರಿಂದಾಗಿ ಆ ಆಘಾತ ನನ್ನನ್ನು ಸೈಲೆಂಟ್ ಆಗಿರುವಂತೆ ಮಾಡಿದೆ. ನನ್ನ ಮೌನ ಕೆಲವರಿಗೆ ತಪ್ಪಾಗಿ ಅರ್ಥವಾಗಿದೆ. ಅಲ್ಲದೇ ತಪ್ಪಾಗಿ ಬಳಕೆಯೂ ಆಗುತ್ತಿದೆ. ಇದು ನನಗೆ ನೋವನ್ನು ಕೊಟ್ಟಿದೆ ಎಂದು ಬರೆದುಕೊಂಡಿದ್ದಾರೆ.
ಘಟನೆಯ ನಡೆದಾಗ ನಾನು ಐಲವ್ ಯೂ ರಚ್ಚು ಸಿನಿಮಾ ಸೆಟ್‌ನಲ್ಲಿ ಇರಲಿಲ್ಲ. ಅಗಸ್ಟ್ 2 ರಂದು ನಾನು ಮೈಸೂರಿನಲ್ಲಿ ಶಬರಿ ಸಿನಿಮಾದ ಶೂಟಿಂಗ್‌ನಲ್ಲಿ ಇದ್ದಿದ್ದೆ. ಸತ್ಯವನ್ನು ಒಂದೇ ಒಂದು ಸಲ ಪುನರ್ ವಿಮರ್ಷೆ ಮಾಡಿದ್ರೆ ನನ್ನ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡೋ ಪ್ರಮೇಯ ಒದಗಿ ಬರುತ್ತಿರಲಿಲ್ಲ. ನಾನು ಆ ಜಾಗದಲ್ಲಿ ಇಲ್ಲದಿದ್ದರೂ ಕೂಡ ನಮ್ಮ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದ ಸಹೋದ್ಯೋಗಿಯೊಬ್ಬರು ದುರ್ಘನೆಯಲ್ಲಿ ಬಲಿಯಾದ ನೋವು ನನ್ನನ್ನೂ ಕಾಡುತ್ತಿದೆ. ಆ ಕುಟುಂಬಕ್ಕೆ ಆಗಿರುವ ನಷ್ಟಕ್ಕೆ ನನ್ನ ವಿಷಾದವಿದೆ. ದೇವರು ಆ ಕುಟುಂಬಕ್ಕೆ ದುಖಃವನ್ನು ಭರಿಸೋ ಶಕ್ತಿಯನ್ನು ಕೊಡಲಿ ಅಂತಾ ನಾನು ಬೇಡಿಕೊಳ್ತೀನಿ ಎಂದು ಬರೆದುಕೊಂಡಿದ್ದಾರೆ.