Corona Updates : ದೇಶದಲ್ಲಿ 36,083 ಮಂದಿಗೆ ಕೊರೊನಾ, 493 ಬಲಿ

ನವದೆಹಲಿ : ಭಾರತದಲ್ಲಿ ಕೊರೊನಾ ಸೋಂಕಿತ ಪ್ರಕರಣಗಳ ಸಂಖ್ಯೆ ನಿಧಾನಗಿತಿಯಲ್ಲಿ ಇಳಿಕೆಯನ್ನು ಕಾಣುತ್ತಿದೆ. ಕಳೆದ 24 ಗಂಟೆಗಳಲ್ಲಿ ಹೊಸದಾಗಿ 36,083 ಕೊರೊನಾ ಪ್ರಕರಣಗಳು ದಾಖಲಾಗಿದೆ. ಅಲ್ಲದೇ 493 ಮಂದಿ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಮಾಹಿತಿ ನೀಡಿದೆ.

ಕಳೆದ 24 ಗಂಟೆಗಳಲ್ಲಿ ಒಟ್ಟು 37,927 ಮಂದಿ ಗುಣಮುಖರಾಗಿದ್ದು, ಚೇತರಿಕೆಯ ಪ್ರಮಾಣ ಸುಮಾರು 97.46 ಶೇಕಡಾ ದಷ್ಟಿದೆ. ಅಲ್ಲದೇ ಇದುವರೆಗೆ ಭಾರತದಲ್ಲಿ ಒಟ್ಟು 3,13,76,015 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.

ಭಾರತದಲ್ಲಿ ಒಟ್ಟು 3,85,336 ಕೋವಿಡ್ -19 ರ ಒಟ್ಟು ಸಕ್ರಿಯ ಪ್ರಕರಣಗಳಿದ್ದು, ಇದುವರೆಗೆ ಒಟ್ಟು 4,31,225 ಮಂದಿ ಕೊರೊನಾ ಹೆಮ್ಮಾರಿಗೆ ಬಲಿಯಾಗಿದ್ದಾರೆ. 24 ಗಂಟೆಗಳಲ್ಲಿ 73 ಲಕ್ಷಕ್ಕೂ ಹೆಚ್ಚು ಲಸಿಕೆಗಳನ್ನು ನೀಡಲಾಗಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಪ್ರಕಾರ, ಕೋವಿಡ್ -19 ಗಾಗಿ ಆಗಸ್ಟ್ 14 ರವರೆಗೆ 49,36,24,440 ಮಾದರಿಗಳನ್ನು ಪರೀಕ್ಷಿಸಲಾಗಿದೆ.

ಇವುಗಳಲ್ಲಿ 19,23,863 ಮಾದರಿಗಳನ್ನು ಶನಿವಾರ ಪರೀಕ್ಷಿಸಲಾಗಿದೆ. ದೇಶದಲ್ಲಿ ನೀಡಲಾಗುವ ಸಂಚಿತ ಕೋವಿಡ್ -19 ಲಸಿಕೆ ಪ್ರಮಾಣ 54.38 ಕೋಟಿ ಮೀರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಭಾರತದಲ್ಲಿ ಈಗ ಒಟ್ಟು ವ್ಯಾಕ್ಸಿನೇಷನ್ 54,38,46,290 ಆಗಿದೆ. ಕೋವಿಡ್ -19 ಲಸಿಕೆಯ ಸಾರ್ವತ್ರಿಕರಣದ ಹೊಸ ಹಂತವು ಭಾರತದಲ್ಲಿ ಜೂನ್ 21 ರಿಂದ ಆರಂಭವಾಗಿದೆ. ಕೇರಳದಲ್ಲಿ ಅತೀ ಹೆಚ್ಚು ಪ್ರಮಾಣದಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಒಂದೇ 21,445 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : Covid Report : ಕೇರಳಿಗರಿಗೆ ಕೊರೊನಾ ಟೆಸ್ಟ್‌ ರಿಪೋರ್ಟ್‌ ಕಡ್ಡಾಯ : ಕೇಂದ್ರ, ರಾಜ್ಯ ಸರಕಾರಗಳಿಗೆ ಕೇರಳ ಹೈಕೋರ್ಟ್‌ ನೋಟಿಸ್‌

ಇದನ್ನೂ ಓದಿ : Mangalore : ಕರಾವಳಿಯ ಶಿಕ್ಷಣ ಸಂಸ್ಥೆಗಳಿಗೆ ಹೊಡೆತ ಕೊಟ್ಟ ಕೊರೊನಾ : ಮಕ್ಕಳನ್ನು ಕಾಲೇಜಿಗೆ ದಾಖಲಿಸಲು ಪೋಷಕರ ಹಿಂದೇಟು

Comments are closed.