ಭಾನುವಾರ, ಏಪ್ರಿಲ್ 27, 2025
HomeCinemaRRR ಸಿನಿಮಾಗಿರೋ ಬೆಲೆ ಪುನೀತ್ ಗಿಲ್ವಾ ? ಸರಕಾರದ ವಿರುದ್ದ ಅಪ್ಪು ಫ್ಯಾನ್ಸ್‌ ಗರಂ

RRR ಸಿನಿಮಾಗಿರೋ ಬೆಲೆ ಪುನೀತ್ ಗಿಲ್ವಾ ? ಸರಕಾರದ ವಿರುದ್ದ ಅಪ್ಪು ಫ್ಯಾನ್ಸ್‌ ಗರಂ

- Advertisement -

ನಾಳೆ ಕರುನಾಡಿನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬದ ಸಂಭ್ರಮ‌.‌ಈ ಸಂಭ್ರಮವನ್ನು ಹಬ್ಬದಂತೆ ಅಚರಿಸಲು ಅಭಿಮಾನಿಗಳು, ಚಂದನವನ ಸಜ್ಜಾಗಿದೆ. ಆದರೆ ಈಗ ಈ ಸಂಭ್ರಮಾಚರಣೆಗೆ ನಿಷೇಧಾಜ್ಞೆ ಅಡ್ಡಿ ಉಂಟು ಮಾಡಿದ್ದು ಪೊಲೀಸ್ ಇಲಾಖೆ ವಿರುದ್ಧ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪುನೀತ್ ಇಲ್ಲದ ಹೊತ್ತಿನಲ್ಲಿ ಪವರ್ ಸ್ಟಾರ್ ಮೊದಲ ಬರ್ತಡೇ ಬಂದಿದೆ. ಅಂದೇ ಜೇಮ್ಸ್ ಚಿತ್ರ ಸಹ ತೆರೆ ಕಾಣಲಿದೆ. ಅಪ್ಪು ಇಲ್ಲದ ನೋವಿನಲ್ಲೂ ಅಭಿಮಾನಿಗಳು ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಿದ್ದಾರೆ. ಆದರೆ ನಿಷೇಧಾಜ್ಞೆಯ ನೆಪ ಹೇಳಿರುವ ಸರಕಾರ ಆರ್‌ಆರ್‌ಆರ್‌ ಸಿನಿಮಾ ಪ್ರೀ ರಿಲೀಸ್‌ ( RRR vs James) ಈವೆಂಟ್‌ಗೆ ಅವಕಾಶ ನೀಡಿರುವುದು ಅಪ್ಪು ಫ್ಯಾನ್ಸ್‌ ಆಕ್ರೋಶಕ್ಕೆ ಕಾರಣವಾಗಿದೆ.

ಇಂದು ಮಧ್ಯರಾತ್ರಿ ಅಪ್ಪು ಸಮಾಧಿ ಬಳಿ ಕೇಕ್ ಕಟ್ಟಿಂಗ್, ವೀರೇಶ್ ಸೇರಿದಂತೆ ಹಲವು ಚಿತ್ರಮಂದಿರಗಳ ಬಳಿ ಅಪ್ಪು ಕಟೌಟ್, ಅಪ್ಪು ಕಟೌಟ್ ಗೆ ಹೆಲಿಕ್ಯಾಪ್ಟರ್ ನಿಂದ ಪುಷ್ಪಾರ್ಚನೆ ಹೀಗೆ ಇನ್ನೆಂದೂ ಕಾಣದ ಅದ್ದೂರಿ ತನದಿಂದ ಅಪ್ಪು ಬರ್ತಡೇಗೆ ಫ್ಯಾನ್ಸ್ ಟೀಂ ಪ್ಲ್ಯಾನ್ ಮಾಡಿದೆ. ಆದರೆ ಈಗ ಈ ಎಲ್ಲ ಕಾರ್ಯಕ್ರಮಗಳಿಗೆ ನಗರದಲ್ಲಿ ಜಾರಿಯಾಗಿರೋ ನಿಷೇಧಾಜ್ಞೆ ಅಡ್ಡಿಯಾಗಿದೆ. ಮಂಗಳವಾರ ಹೈಕೋರ್ಟ್ ನಲ್ಲಿ ಹಿಜಾಬ್ ತೀರ್ಪು ಪ್ರಕಟ ಗೊಂಡ ಹಿನ್ನೆಲೆಯಲ್ಲಿ ನಗರ ಪೊಲೀಸ್ ಇಲಾಖೆ ಒಂದು ವಾರಗಳ ಕಾಲ ನಗರದಲ್ಲಿ ನಿಷೇಧಾಜ್ಞೆ ಜಾರಿ ಮಾಡಿದೆ.

ಹೀಗಾಗಿ ಪುನೀತ್ ಬರ್ತಡೇ ಆಚರಣೆಗೆ ಅಭಿಮಾನಿಗಳಿಗೆ ಅವಕಾಶ ಸಿಗುತ್ತಿಲ್ಲ.‌ಅದ್ದೂರಿ ಮೆರವಣಿಗೆ ಕೇಕ್ ಕತ್ತರಿಸೋದು, ಅನ್ನದಾನ, ರಕ್ತದಾನ ಹೀಗೆ ಯಾವುದೇ ಕಾರ್ಯಕ್ರಮ ಮಾಡೋದಿಕ್ಕೂ ನಿಷೇಧಾಜ್ಞೆಯಲ್ಲಿ ಅವಕಾಶವಿಲ್ಲ. ಪೊಲೀಸ್ ಇಲಾಖೆಯ ನಿಯಮದಿಂದ ನಿರಾಸೆಗೊಂಡಿರೋ ಅಪ್ಪು ಅಭಿಮಾನಿಗಳು ವಿರೇಶ್ ಚಿತ್ರಮಂದಿರ ಸೇರಿದಂತೆ ಎಲ್ಲೆಡೆ ಪೊಲೀಸ್ ಇಲಾಖೆ ವಿರುದ್ದ ಪ್ರತಿಭಟನೆಗೆ ಮುಂದಾಗಿದ್ದಾರೆ.

ಚಿಕ್ಕಬಳ್ಳಾಪುರ ದಲ್ಲಿ ಟಾಲಿವುಡ್ ಸಿನಿಮಾ ಆರ್ ಆರ್ ಆರ್ ಫ್ರೀ ರಿಲೀಸ್ ಇವೆಂಟ್ ಇದೆ‌. ಅಲ್ಲೂ ಕೂಡ ಹಿಜಾಬ್ ಕಾರಣಕ್ಕೆ ನಿಷೇಧಾಜ್ಞೆ ಜಾರಿಯಾಗಿತ್ತು. ಆದರೆ 15 ರಿಂದ 20 ರವರೆಗೆ ಎಂದು ಆದೇಶ ನೀಡಿದ ಕೆಲವೇ ಗಂಟೆಗಳಲ್ಲಿ ಈ ಆದೇಶವನ್ನು 15 ರಿಂದ 17 ರವರೆಗೆ ಎಂದು ಬದಲಾಯಿಸಲಾಗಿದೆ. ಅಲ್ಲಿ ಸಾಧ್ಯವಾಗಿರೋದು ನಗರದಲ್ಲಿ ಯಾಕೆ ಸಾಧ್ಯವಿಲ್ಲ? ಪರಭಾಷೆ ಚಿತ್ರಗಳಿಗೆ ಸಿಗೋ ಪ್ರಾಮುಖ್ಯತೆ ನಮ್ಮ ನಟರಿಗೆ, ನಮ್ಮ ನಟ ಕಾರ್ಯಕ್ರಮಗಳಿಗೆ ಯಾಕಿಲ್ಲ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೇವಲ ಅಭಿಮಾನಿಗಳು ಮಾತ್ರವಲ್ಲಿ ಫಿಲ್ಮಂ ಚೆಂಜರ್ ನ ಸಾ.ರಾ.ಗೋವಿಂದು ಸಹ ಈ ತಾರತಮ್ಯದ ವಿರುದ್ಧ ಆಕ್ರೋಶ ಹಾಗೂ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ: ಸ್ಯಾಂಡಲ್ ವುಡ್ ಖ್ಯಾತ ನಟಿ ಸಹೋದರ ಅರೆಸ್ಟ್

ಇದನ್ನೂ ಓದಿ : ರಾಕಿಂಗ್ ಸ್ಟಾರ್ ಯಶ್ ಗೆ ಎದುರಾಳಿಯಾದ ನಟ ವಿಜಯ್ : ಕೆಜಿಎಫ್-2 ಗೆ ಟಕ್ಕರ್ ಕೊಡುತ್ತಾ ಬೀಸ್ಟ್

( RRR vs James : Puneeth Raj kumar Fans did not permission for James Movie Celebration )

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular