ಸದ್ಯ ವಿಶ್ವದಾದ್ಯಂತ ಕರ್ನಾಟಕ ಸಿನಿಮಾಗಳಿಂದಲೇ ಸದ್ದು ಮಾಡುತ್ತಿದೆ. ಕೆಜಿಎಫ್-2 ನ ಅಭೂತಪೂರ್ವ ಯಶಸ್ಸಿನಬಳಿಕ ಈಗ ಮತ್ತೊಂದು ಪ್ಯಾನ್‌ಇಂಡಿಯಾ ಸಿನಿಮಾ ಮೋಡಿ ಮಾಡಲು ಸಿದ್ಧವಾಗಿದೆ. ವಿಕ್ರಾಂತ್ ರೋಣದ ಮೂಲಕ ಸುದೀಪ್ ಗ್ರ್ಯಾಂಡ್ ಎಂಟ್ರಿಕೊಡಲು ಸಿದ್ಧವಾಗಿದ್ದಾರೆ. ಬಹುಭಾಷಾ ನಟರಾಗಿ ಬೆಳೆದು ನಿಂತಿರೋ ಕಿಚ್ಚ್ ಸುದೀಪ್ ಈ ಗ್ರ್ಯಾಂಡ್ ಹಾಗೂ ರಾಯಲ್ ಎಂಟ್ರಿಗೆ ಈಗ ಆನೆಬಲ ಬಂದಿದ್ದು, ಬಾಲಿವುಡ್ ಬ್ಯಾಡ್ ಬಾಯ್ ಖ್ಯಾತಿಯ ಸಲ್ಮಾನ್ ಖಾನ್ (Salman Khan) ಸುದೀಪ್ (Sudeep) ಗೆ ಬಲತುಂಬಿದ್ದಾರೆ.

ಹೌದು ಈಗಾಗಲೇ ಕೆಜಿಎಫ್-2 ಬಾಕ್ಸಾಫೀಸ್ ನಲ್ಲಿ ಮೋಡಿ ಮಾಡಿದ್ದರೇ ವಿಕ್ರಾಂತ್ ರೋಣಾ ಕೂಡಾ ಅಷ್ಟೇ ಸದ್ದು ಮಾಡಲು ಸಿದ್ಧವಾಗುತ್ತಿದೆ. ಅನೂಪ್ ಭಂಡಾರಿ ಹಾಗೂ ಸುದೀಪ್ ಕಾಮಿನೇಶನ್ ನ ಈ ಸಿನಿಮಾ ರಿಲೀಸ್ ಗೂ ಮುನ್ನವೇ ಮೇಕಿಂಗ್, ಟ್ರೇಲರ್, ಟೀಸರ್ ಸೇರಿದಂತೆ ಹಲವು ಕಾರಣಕ್ಕೆ ಅಭಿಮಾನಿಗಳ ಮನಗೆದ್ದಿದೆ. ಬಹುಭಾಷೆಯಲ್ಲಿ ರಿಲೀಸ್ ಗೆ ಸಿದ್ಧವಾಗಿರೋ ಈ ಸಿನಿಮಾ ಈಗಾಗಲೇ ಪೋಸ್ಟ್ ಪ್ರೊಡಕ್ಷನ್ ಕೆಲಸ ಎಲ್ಲ ಮುಗಿಸಿದ್ದು, ಪ್ರಮೋಶನ್ ಗೆ ಚಿತ್ರತಂಡ ಸಜ್ಜಾಗುತ್ತಿದೆ.

ಈ ಮಧ್ಯೆ ಸಿನಿಮಾ ರಿಲೀಸ್ ಗೆ ಸಿದ್ಧತೆ ನಡೆಸುತ್ತಿರುವಾಗಲೇ ಚಿತ್ರತಂಡಕ್ಕೆ ಆನೆಬಲ ಸಿಕ್ಕಿದೆ. ಹಿಂದಿ ಸೇರಿದಂತೆ ಹಲವು ಭಾಷೆಯಲ್ಲಿ ಏಕಕಾಲಕ್ಕೆ ರಿಲೀಸ್ ಆಗ್ತಿರೋ ಸಿನಿಮಾಗೆ ಬಾಲಿವುಡ್ ನ ಬ್ಯಾಡ್ ಬಾಯ್ ಸಲ್ಲೂ ಮಿಯಾ ಕೈಜೋಡಿಸಿ ಬಲ ತುಂಬಿದ್ದಾರೆ.

ವಿಕ್ರಾಂತ್ ರೋಣ ಹಿಂದಿ ಸಿನಿಮಾದ ವಿತರಣೆಯ ಹೊಣೆಯನ್ನು ಸ್ವತಃ ಸಲ್ಮಾನ್ ಖಾನ್ ಹೊತ್ತುಕೊಂಡಿದ್ದು, ಈ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿ ದ್ದಾರೆ. ಉತ್ತರ ಭಾರತದಾದ್ಯಂತ ಸಲ್ಮಾನ್ ಖಾನ್ ಫಿಲ್ಮ್ಸ್ ವಿಕ್ರಾಂತ್ ರೋಣ ಸಿನಿಮಾವನ್ನು ರಿಲೀಸ್ ಮಾಡಲಿದ್ದು, ಆ ಮೂಲಕ ಬಾಲಿವುಡ್ ನಲ್ಲಿ ಕನ್ನಡದ ಮತ್ತೊಂದು ಸಿನಿಮಾ 110 ಕೋಟಿ ಗಳಿಸೋದು ಬಹುತೇಕ ಖಚಿತ ಎನ್ನಲಾಗ್ತಿದೆ.
The biggest entertainer of India @BeingSalmanKhan will present @VikrantRona (Hindi) – the biggest 3D experience in Indian cinema. Honour to be associating with @SKFilmsOfficial@anupsbhandari @JackManjunath @shaliniartss @InvenioF @ZeeStudios_ #VRonJuly28 #VRin3D pic.twitter.com/P5aZzHgsPI
— Kichcha Sudeepa (@KicchaSudeep) May 16, 2022
ಜುಲೈ 28 ರಂದು ಸಿನಿಮಾ ವಿಕ್ರಾಂತ್ ರೋಣ ರಿಲೀಸ್ ಆಗಲಿದ್ದು, ಈ ವೇಳೆ ಯಾವುದೇ ರಜಾದಿನಗಳು ಇಲ್ಲ. ಅಲ್ಲದೇ ಬಾಲಿವುಡ್ ನಲ್ಲೂ ಈ ಸಿನಿಮಾ ರಿಲೀಸ್ ವೇಳೆಯೇ ಅಜಯ್ ದೇವಗನ್ ಸಿನಿಮಾ ಕೂಡ ರಿಲೀಸ್ ಆಗಲಿದೆ. ಹೀಗಾಗಿ ಸಿನಿಮಾದ ಮುಂದೇ ಹಲವು ಸವಾಲುಗಳು ಇದೆ. ಆದರೆ ಈ ಸಿನಿಮಾ ಸಂಪೂರ್ಣ ತ್ರೀಡಿಯಲ್ಲಿ ಪ್ರದರ್ಶನಗೊಳ್ಳಲಿರೋದರಿಂದ ಸಿನಿಮಾದ ಮೇಲೆ ನೀರಿಕ್ಷೆ ಮತ್ತಷ್ಟು ಹೆಚ್ಚಿದೆ. ಎಲ್ಲ ಅಂದುಕೊಂಡಂತೆ ಆದರೇ ಈ ಸಿನಿಮಾ ಕೂಡ ಕೆಜಿಎಫ್-2 ನಂತೆ ಸಾವಿರ ಕೋಟಿ ಕ್ಲಬ್ ಸೇರೋದು ಖಚಿತ ಎನ್ನಲಾಗ್ತಿದೆ.
The Devil will arrive on July 28th, 2022. #VikrantRonaJuly28 worldwide in 3D
— VikrantRona (@VikrantRona) April 2, 2022
All Languages Release Teaser – https://t.co/bXAhggx9CM@KicchaSudeep @anupsbhandari @nirupbhandari @neethaofficial @Asli_Jacqueline @JackManjunath @ZeeStudios_ @shaliniartss #VikrantRona
ಇದನ್ನೂ ಓದಿ : ಸ್ನೇಹಿತೆಯ ಮದುವೆಯಲ್ಲಿ ರಶ್ಮಿಕಾ ಮಿಂಚಿಂಗ್ : ಕೊಡವರ ಶೈಲಿಯ ಸೀರೆ ಧರಿಸಿದ ಕಿರಿಕ್ ಬೆಡಗಿ
ಇದನ್ನೂ ಓದಿ : amazon prime KGF 2 : ಕೆಜಿಎಫ್-2 ನೋಡೋಕೆ 199 ರೂಪಾಯಿ : ಅಮೇಜಾನ್ ಪ್ರೈಂ ವಿರುದ್ಧ ಸುಲಿಗೆ ಆರೋಪ
Salman Khan will be distributing the Sudeep Vikrant Rona movie