thulasi leaf : ಮುಖದ ಸೌಂದರ್ಯಕ್ಕೆ ತುಳಸಿ ಎಲೆ ನೈಸರ್ಗಿಕ ಟೋನರ್

ತುಳಸಿ ಗಿಡವನ್ನು ಪ್ರತಿ ಹಿಂದೂ ಸಂಪ್ರದಾಯಸ್ಥರ ಮನೆಯಂಗಳದಲ್ಲಿ ಕಾಣಬಹುದು. ತುಳಸಿಗೆ ದಿನ ಪೂಜೆ ಮಾಡುವುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ತುಳಸಿಯಲ್ಲೂ (thulasi leaf ) ಸೌಂದರ್ಯದ ರಹಸ್ಯ ಅಡಗಿದೆ ಅಂತ ಹೆಚ್ಚಿನವರಿಗೆ ತಿಳಿದಿಲ್ಲದ ಸತ್ಯ. ತುಳಸಿ ಎಲೆಯಲ್ಲಿ ಔಷದಿಯ ಗುಣದ ಜೊತೆಗೆ ಸೌಂದರ್ಯ ವೃದ್ಧಿಸುವ ಗುಣವು ಇದೆ.

ಮುಖದ ಮೇಲೆ ಮೊಡವೆ, ಕಲೆಗಳು ಕಾಣಿಸಿಕೊಳ್ಳಲು ರೋಗಾಣುಗಳು ಮುಖ್ಯ ಕಾರಣವಾಗುತ್ತವೆ. ಅವುಗಳು ಕಣ್ಣಿಗೆ ಕಾಣಿಸುವುದಿಲ್ಲ. ನೀರು ಅಥವಾ ಸೋಪ್ ನಿಂದ ಮುಖ ತೊಳೆದ್ರೂ ಅವು ಹೋಗುವುದಿಲ್ಲ. ತುಳಸಿ ಎಲೆಗಳು ಇದಕ್ಕೆ ಮದ್ದು. ಇದ್ರಿಂದ ಮುಖದ ಚರ್ಮ ಸ್ವಚ್ಛವಾಗುತ್ತದೆ. ತುಳಸಿ ಎಲೆಗಳು ನೈಸರ್ಗಿಕ ಟೋನರ್ ಆಗಿ ಕೆಲಸ ಮಾಡುತ್ತವೆ.

ಇದನ್ನೂ ಓದಿ: Curd Beauty Secrets : ಮೊಸರಿನಿಂದ ತ್ವಚೆಯ ಅಂದವನ್ನು ಹೀಗೂ ಹೆಚ್ಚಿಸ ಬಹುದು…!!!

ತುಳಸಿ ಎಲೆಯಿಂದ ಮನೆ ಮದ್ದು ಮಾಡಲು, 10 ರಿಂದ 15 ತುಳಸಿ ಎಲೆಗಳು, 1 ಕಪ್ ನೀರು ಬೇಕಾಗುತ್ತದೆ. ಒಂದು ಪಾತ್ರೆಯಲ್ಲಿ 1 ಕಪ್ ನೀರನ್ನು ಹಾಕಿ ಬಿಸಿ ಮಾಡಿ. ನೀರು ಚೆನ್ನಾಗಿ ಕುದಿಯಬೇಕು. ನಂತ್ರ ಈ ನೀರಿಗೆ ತುಳಸಿ ಎಲೆಗಳನ್ನು ಹಾಕಿ ಕುದಿಸಿ. ಐದು ನಿಮಿಷಗಳ ನಂತರ ಗ್ಯಾಸ್ ಬಂದ್ ಮಾಡಿ. ಈ ನೀರನ್ನು ಫಿಲ್ಟರ್ ಮಾಡಿ. ನೀರು ತಣ್ಣಗಾದ ಮೇಲೆ ಮುಖಕ್ಕೆ ಹಚ್ಚಿ.

ಇದನ್ನೂ ಓದಿ: ಪ್ರತಿದಿನ ಮಲಗುವ ಮುನ್ನ ಪಾದಗಳಿಗೆ ಮಾಡಿ ಮಸಾಜ್‌ : ಬೆನಿಫಿಟ್ಸ್‌ ಕೇಳಿದ್ರೆ ನೀವೂ ಖಂಡಿತಾ ಮಿಸ್‌ ಮಾಡಲ್ಲ

ಈ ನೀರು, ಬ್ಯಾಕ್ಟೀರಿಯಾ ಮತ್ತು ಇತರ ಹಾನಿಕಾರಕ ಸೂಕ್ಷ್ಮಜೀವಿಗಳಿಂದ ರಕ್ಷಣೆ ನೀಡುತ್ತದೆ. ಚರ್ಮವು ಬಿಗಿಯಾಗುತ್ತದೆ. ಮುಖವನ್ನು ರಿಫ್ರೆಶ್ ಮಾಡುತ್ತದೆ. ಮುಖದಲ್ಲಿರುವ ಎಣ್ಣೆ, ಮೇಕಪ್ ಮತ್ತು ಕೊಳೆಯನ್ನು ತೆಗೆದು ಹಾಕುತ್ತದೆ. ಮುಖದ ತೇವಾಂಶವನ್ನು ಕಾಪಾಡುತ್ತದೆ.

(The thulasi leaf is a natural toner for the beauty of the face)

Comments are closed.