Salman Khan down with dengue : ಕನ್ನಡದ ಬಿಗ್ಬಾಸ್ ಎಂದಾಕ್ಷಣ ಹೇಗೆ ಸುದೀಪ್ ನೆನಪಾಗುತ್ತಾರೋ ಅದೇ ರೀತಿ ಹಿಂದಿ ಆವೃತ್ತಿಯ ಬಿಗ್ಬಾಸ್ ಎಂದಾಕ್ಷಣ ಸಲ್ಮಾನ್ ಖಾನ್ ಕಣ್ಮುಂದೆ ಬರ್ತಾರೆ. ಸದ್ಯ ಹಿಂದಿಯಲ್ಲಿ 16ನೇ ಸೀಸನ್ನ ಬಿಗ್ಬಾಸ್ ನಡೆಯುತ್ತಿದೆ. ಈ ವೀಕೆಂಡ್ನ ಬಿಗ್ಬಾಸ್ ಶೋವನ್ನು ಬಾಲಿವುಡ್ ನಟ ಸಲ್ಮಾನ್ ಖಾನ್ ಹೋಸ್ಟ್ ಮಾಡಲಿಲ್ಲ. ಇದಾದ ಬಳಿಕ ಅನೇಕರು ಏಕೆ ಸಲ್ಮಾನ್ ಖಾನ್ ಬಿಗ್ಬಾಸ್ನಲ್ಲಿ ಕಾಣಿಸಿಕೊಂಡಿಲ್ಲ ಅಂತಾ ಆಶ್ಚರ್ಯಪಡ್ತಿದ್ದಾರೆ. ಆದರೆ ಮಾಧ್ಯಮಗಳ ವರದಿಗಳ ಪ್ರಕಾರ ಬ್ಯಾಡ್ ಬಾಯ್ ಸಲ್ಲು ಮಿಯಾ ಡೆಂಗ್ಯೂನಿಂದ ಬಳಲುತ್ತಿದ್ದಾಎಂತೆ. ಹೀಗಾಗಿ ವೀಕೆಂಡ್ ಕಾರ್ಯಕ್ರಮದ ನಿರೂಪಣೆ ಮಾಡಲು ಸಾಧ್ಯವಾಗಿಲ್ಲ ಎನ್ನಲಾಗಿದೆ. ಸಲ್ಮಾನ್ ಖಾನ್ ಡೆಂಗ್ಯೂನಿಂದ ಬಳಲುತ್ತಿದ್ದಾರೆ ಎಂಬುದರ ಬಗ್ಗೆ ಅಧಿಕೃತ ಮಾಹಿತಿ ಇನ್ನೂ ಹೊರ ಬಿದ್ದಿಲ್ಲ.
ನಿರ್ದೇಶಕ ಹಾಗೂ ನಿರ್ಮಾಪಕ ಕರಣ್ ಜೋಹರ್ ಬಿಗ್ಬಾಸ್ ಒಟಿಟಿ ಸೀಸನ್ ಕಾರ್ಯಕ್ರಮವನ್ನು ನಿರೂಪಿಸಿದ್ದು ಎಲ್ಲರಿಗೂ ತಿಳಿದೇ ಇದೆ. ಇದೀಗ ಸಲ್ಮಾನ್ ಖಾನ್ ಬದಲಾಗಿ ಬಿಗ್ಬಾಸ್ ಸೀಸನ್ 16ರ ವೀಕೆಂಡ್ ಕಾರ್ಯಕ್ರಮವನ್ನು ಕರಣ ಜೋಹರ್ ನಡೆಸಿಕೊಟ್ಟಿದ್ದಾರೆ.
ವೀಕೆಂಡ್ ಕಾ ವಾರ್ ಎಂಬ ಸಂಚಿಕೆಯಲ್ಲಿ ಸಲ್ಮಾನ್ ಖಾನ್ ಸ್ಪರ್ಧಿಗಳೊಂದಿಗೆ ಸಂಪೂರ್ಣ ವಾರದ ಕತೆಯನ್ನು ಚರ್ಚೆ ಮಾಡುವುದು ಹಾಗೂ ಮಾರ್ಗದರ್ಶನ ನೋಡೋದು ಮತ್ತು ಅವಶ್ಯಕತೆ ಬಿದ್ದಾಗ ಸ್ಪರ್ಧಿಗಳನ್ನು ತರಾಟೆಗೆ ತೆಗೆದುಕೊಳ್ತಾರೆ. ಮೊದಲು ವೀಕೆಂಡ್ ಕಾ ವಾರ್ ಶನಿವಾರದ ಸಂಚಿಕೆಯಲ್ಲಿ ಸಲ್ಮಾನ್ ಖಾನ್ ಕಾಣಿಸಿಕೊಳ್ಳುತ್ತಾರೆ ಎಂದು ಹೇಳಲಾಗಿತ್ತು. ಆದರೆ ಇದೀಗ ಸಲ್ಮಾನ್ ಖಾನ್ ಮುಂದಿನ ವಾರದ ವೀಕೆಂಡ್ ಸಂಚಿಕೆಯಲ್ಲಿ ಕಾಣಿಕೊಳ್ತಾರೆ ಎಂದು ವರದಿಯಾಗಿದೆ. ಈ ಬಗ್ಗೆ ಅಧಿಕೃತ ಹೇಳಿಕೆ ಈಗಷ್ಟೇ ಹೊರ ಬರಬೇಕಿದೆ. ಅಕ್ಟೋಬರ್ 25ರಿಂದ ಕಿಸಿ ಕಾ ಭಾತ್ ಕಿಸಿ ಕಾ ಜಾನ್ ಚಿತ್ರದ ಶೂಟಿಂಗ್ನಲ್ಲಿಯೂ ಭಾಗಿಯಾಗುವ ನಿರೀಕ್ಷೆಯಿದೆ. ಈ ವಾರ ಸುಂಬುಲ್ ತೌಕೀರ್ ಖಾನ್, ಮಾನ್ಯ ಸಿಂಗ್ ಹಾಗೂ ಶಾಲಿನ್ ಭಾನೋಟ್ ನಾಮಿನೇಟ್ ಆಗಿದ್ದಾರೆ.
ಇದನ್ನು ಓದಿ : Gujarath Traffic rules: ಈ ರಾಜ್ಯದಲ್ಲಿ 7 ದಿನ ಟ್ರಾಫಿಕ್ ರೂಲ್ಸ್ ಇರಲ್ವಂತೆ.. ವಾಹನ ಸವಾರರಿಗೆ ಸರ್ಕಾರದಿಂದ ದೀಪಾವಳಿ ಗಿಫ್ಟ್..!
ಇದನ್ನೂ ಓದಿ : Exclusive : ಟೀಮ್ ಇಂಡಿಯಾ ವಿಶ್ವಕಪ್ ಪಡೆಯಲ್ಲಿ ಮೂವರು ಕನ್ನಡಿಗರು, ಒಬ್ಬ ರಾಹುಲ್, ಇನ್ನೊಬ್ಬ ದ್ರಾವಿಡ್, ಮೂರನೆಯವರು ಯಾರು?
Salman Khan down with dengue, Bollywood star to return as Bigg Boss 16 host from THIS date: Reports