iQOO 11 Pro ಬಿಡುಗಡೆಗೂ ಮೊದಲೇ ವೈಶಿಷ್ಟ್ಯಗಳು ಲೀಕ್‌; 200W ಫಾಸ್ಟ್‌ ಚಾರ್ಜಿಂಗ್‌, ಸ್ನ್ಯಾಪ್‌ಡ್ರಾಗನ್‌ 8 Gen2 Soc, 50 MP ಕ್ಯಾಮೆರಾ…

Vivo ಉಪ-ಬ್ರಾಂಡ್ ಆಗಿರುವ iQOO ತನ್ನ ಹೊಸ ಸ್ಮಾರ್ಟ್‌ಫೋನ್‌ iQOO 11 Pro ಶೀಘ್ರದಲ್ಲೇ ಜಗತ್ತಿನಾದ್ಯಂತ ಬಿಡುಗಡೆಮಾಡಲಿದೆ. ಕಂಪನಿಯು ಅಧಿಕೃತ ಬಿಡುಗಡೆಯ ದಿನಾಂಕ ಇನ್ನೂ ಘೋಷಿಸಿಲ್ಲ. ಆದರೂ ಈ ಸ್ಮಾರ್ಟ್‌ಫೋನ್‌ ಏನೆಲ್ಲಾ ವೈಶಿಷ್ಟ್ಯಗಳನ್ನು ಒಳಗೊಂಡಿರಬಹದು ಎಂಬ ಮಾಹಿತಿ ಲೀಕ್‌ ಆಗಿವುದರ ಮೂಲಕ ತಿಳಿದುಬಂದಿದೆ. ಮುಂಬರುವ iQOO 11 Pro ಸ್ಮಾರ್ಟ್‌ಫೋನ್‌ನಲ್ಲಿ 144Hz ರಿಫ್ರೆಶ್ ದರದೊಂದಿಗೆ 6.78-ಇಂಚಿನ 2K ಡಿಸ್ಪ್ಲೇ ಅನ್ನು ನಿರೀಕ್ಷಿಸಲಾಗಿದೆ. ಈ ಫೋನ್, ಸ್ನಾಪ್‌ಡ್ರಾಗನ್ 8 Gen 2 SoC ಚಿಪ್‌ಸೆಟ್‌ ಅನ್ನು 12GB RAM ಮತ್ತು 512GB ವರೆಗಿನ ಸಂಗ್ರಹಣೆಯೊಂದಿಗೆ ಜೋಡಿಸಬಹುದು ಅನ್ನಲಾಗುತ್ತಿದೆ. ವದಂತಿಗಳ ಪ್ರಕಾರ ಇದು ಮೂರು ಹಿಂಬದಿಯ ಕ್ಯಾಮೆರಾಗಳನ್ನು ಹೊಂದಿರುತ್ತದೆ. ಅದರಲ್ಲಿ 50MP ಪ್ರಾಥಮಿಕ ಸಂವೇದಕ ಕ್ಯಾಮೆರಾ ಅಳವಡಿಸರಬಹುದು. ಈ ಹ್ಯಾಂಡ್‌ಸೆಟ್ 4,700mAh ಬೆಂಬಲಿಸುವ ಬ್ಯಾಟರಿ ಘಟಕ ಮತ್ತು 200W ವೇಗದ ಚಾರ್ಜಿಂಗ್ ಇರಬಹುದು.

ಇದನ್ನೂ ಓದಿ : Bestselling Hatchback Cars : ಸೆಪ್ಟೆಂಬರ್‌ 2022 ನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್‌ 3 ಹ್ಯಾಚ್‌ಬ್ಯಾಕ್‌ ಕಾರುಗಳು

iQOO 11 Pro ಸ್ಮಾರ್ಟ್‌ಫೋನ್‌ ನ ವರದಿಯಾದ ವಿಶೇಷಣಗಳನ್ನು ಪ್ರಸಿದ್ಧ ಟಿಪ್‌ಸ್ಟರ್ ಯೋಗೇಶ್ ಬ್ರಾರ್ (@heyitsyogesh) ಟ್ವೀಟ್ ಮಾಡಿದ್ದಾರೆ. ಅವರ ಪ್ರಕಾರ ಹೊಸ ಸ್ಮಾರ್ಟ್‌ಫೋನ್ 144Hz ರಿಫ್ರೆಶ್ ದರದೊಂದಿಗೆ 6.78-ಇಂಚಿನ Samsung E6 2K LTPO ಪ್ಯಾನೆಲ್ ಅನ್ನು ಹೊಂದಿದೆ ಮತ್ತು Android 13 ಆಧಾರಿತ OriginOS ಬಳಸಿಕೊಂಡು ರನ್ ಆಗುತ್ತದೆ ಎಂದು ಅವರು ಹೇಳುತ್ತಾರೆ. ಇದು ಕ್ವಾಲ್ಕಂ ಸ್ನ್ಯಾಪ್‌ಡ್ರಾಗನ್‌ 8 Gen 2 SoC ಅನ್ನು ಪ್ಯಾಕ್ ಒಳಗೊಂಡಿರಬಹುದು ಮತ್ತು ಇದು V2 ಚಿಪ್ ಅನ್ನು ಸಹ ಹೊಂದಿರಬಹದು ಎಂದು ಹೇಳಲಾಗುತ್ತದೆ. ಇದರಲ್ಲಿ12 GB RAM ಮತ್ತು 512GB ವರೆಗೆ ಸಂಗ್ರಹಣೆ ಇರಬಹುದು ಅನ್ನಲಾಗುತ್ತಿದೆ.

ಇದು 50MP ಸೋನಿ IMX866 ಪ್ರಾಥಮಿಕ ಸಂವೇದಕ, 50MP ಅಲ್ಟ್ರಾ-ವೈಡ್ ಶೂಟರ್ ಮತ್ತು 14.6MP ಟೆಲಿಫೋಟೋ ಲೆನ್ಸ್ ಇರುವ ಟ್ರಿಪಲ್‌ ಕ್ಯಾಮೆರಾ ಸೆಟಪ್‌ ಒಳಗೊಂಡಿದೆ. ಮುಂಭಾಗದಲ್ಲಿ ಇದು ಸೆಲ್ಫಿ ಮತ್ತು ವೀಡಿಯೊ ಕರೆಗಳಿಗಾಗಿ 16MP ಸಂವೇದಕದ ಕ್ಯಾಮೆರಾ ಹೊಂದಿದೆ ಎಂದು ಹೇಳಲಾಗುತ್ತಿದೆ.

ವರದಿಗಳ ಪ್ರಕಾರ, iQOO 11 Pro ಸ್ಮಾರ್ಟ್‌ಫೋನ್‌ 8GB RAM ಅಥವಾ 12GB RAM ಮತ್ತು 256GB ಅಥವಾ 512GB ಸಂಗ್ರಹಣೆಯನ್ನು ಹೊಂದಿದೆ. ಇದಲ್ಲದೇ ಬಯೋಮೆಟ್ರಿಕ್ ಅಲ್ಟ್ರಾಸಾನಿಕ್ ಫಿಂಗರ್‌ಪ್ರಿಂಟ್ ಸಂವೇದಕವನ್ನು ಹೊಂದಿದೆ ಎಂಬ ವದಂತಿಯಿದೆ. ಇದು ಪವರ್‌ ಫುಲ್‌ ಬ್ಯಾಟರಿ ಮತ್ತು ವೇಗದ ಚಾರ್ಜಿಂಗ್‌ ಹೊಂದಿರಬಹದು. ಅಂದರೆ 4,700mAh ಬ್ಯಾಟರಿ ಹೊಂದಿರುವ ನಿರೀಕ್ಷೆಯಿದೆ. ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ಮತ್ತು 200W ವೇಗದ ವೈರ್ಡ್ ಚಾರ್ಜಿಂಗ್ ಅನ್ನು ಸಹ ಬೆಂಬಲಿಸಬಹುದು ಅನ್ನಲಾಗುತ್ತಿದೆ.

ಇದನ್ನೂ ಓದಿ :Diwali Tour Plan : ದೀಪಾವಳಿಯ ವಾರಾಂತ್ಯದ ರಜೆಯಲ್ಲಿ ಬೆಂಗಳೂರಿನಿಂದ ಪ್ರವಾಸ ಹೋಗಲು ಪ್ಲಾನ್‌ ಮಾಡ್ತಿದ್ರೆ ಇಲ್ಲಿ ಹೇಳಿರುವ ಸ್ಥಳಗಳನ್ನೊಮ್ಮೆ ಗಮನಿಸಿ…

(iQOO 11 Pro specification leaked, 200W fast charging, Snapdragon 8 Gen 2 SoC, 50 MP Camera many more)

Comments are closed.