ಬಾಲಿವುಡ್ ನಟ ಸಲ್ಮಾನ್ ಖಾನ್(Salman Khan) ಸೋಮವಾರ ಸೋಶಿಯಲ್ ಮೀಡಿಯಾದಲ್ಲಿ ಫೋಟೋವನ್ನು ಶೇರ್ ಮಾಡಿದ್ದರು. ಹಾಗೂ ಫೋಟೋದಲ್ಲಿ ಕಾಣುತ್ತಿರುವ ಕ್ಯಾಪ್ ಹೇಗಿದೆ ಎಂದು ಅಭಿಮಾನಿಗಳನ್ನು ಪ್ರಶ್ನೆ ಮಾಡಿದ್ದರು. ವಿಶೇಷ ಅಂದರೆ ಈ ಫೋಟೋಗೆ ಸಲ್ಮಾನ್ ಖಾನ್ ಮಾಜಿ ಗೆಳತಿ ಸಂಗೀತಾ ಬಿಜಲಾನಿ ರಿಯಾಕ್ಟ್ ಮಾಡಿದ್ದಾರೆ.
ಜಿಮ್ನಲ್ಲಿರುವ ಫೋಟೋ ಶೇರ್ ಮಾಡಿದ ಸಲ್ಮಾನ್ ಖಾನ್, ಬೀಯಿಂಗ್ ಹ್ಯೂಮನ್ನ ಈ ಕ್ಯಾಪ್ ಚೆನ್ನಾಗಿದೆಯೇ..?ಎಂದು ಶೀರ್ಷಿಕೆ ನೀಡಿದ್ದರು.
ಈ ಫೋಟೋಗೆ ನಟಿ ಸಂಗೀತಾ ಬಿಜಲಾನಿ ಬೆಂಕಿ ಇಮೋಜಿಯನ್ನು ಕಮೆಂಟ್ ಮಾಡಿದ್ದಾರೆ. ಸಲ್ಮಾನ್ ಖಾನ್ ಅಭಿಮಾನಿಗಳು ಸಹ ಈ ಫೋಟೋಗೆ ಪ್ರತಿಕ್ರಿಯಸಿದ್ದಾರೆ. ಓರ್ವ ಅಭಿಮಾನಿಯಂತೂ, ಖಾನ್ ಜಿ ನೀವು ಶರ್ಟ್ಲೆಸ್ ಆದರೆ ಯಾವ ಬೆವಕೂಫ್ ನಿಮ್ಮ ಟೊಪ್ಪಿಯನ್ನು ನೋಡುತ್ತಾನೆ ಎಂದು ಪ್ರಶ್ನೆ ಮಾಡಿದ್ದಾರೆ.
ಮತ್ತೊಬ್ಬ ಅಭಿಮಾನಿ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ವಿವಾಹದ ಬಳಿಕ ಸಲ್ಮಾನ್ ಖಾನ್ರನ್ನು ಟ್ರೋಲ್ ಮಾಡುತ್ತಿದ್ದವರೆಲ್ಲ ಈಗ ಎಲ್ಲಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ. ಯಾರು ಎಷ್ಟೇ ಟ್ರೋಲ್ ಮಾಡಿದರೂ ಸಹ ಸಲ್ಮಾನ್ ಖಾನ್ ತನ್ನದೇ ಆದ ರೀತಿಯಲ್ಲಿ ಎಲ್ಲರಿಗೂ ತಿರುಗೇಟು ನೀಡ್ತಾರೆ ಎಂದು ಮತ್ತೊಬ್ಬ ಫ್ಯಾನ್ ಕಮೆಂಟ್ ಮಾಡಿದ್ದಾರೆ .
ಸಂಗೀತಾ ಬಿಜಲಾನಿ ಹಾಗೂ ಸಲ್ಮಾನ್ ಖಾನ್ ಕೆಲ ವರ್ಷಗಳ ಕಾಲ ಡೇಟಿಂಗ್ ಮಾಡಿದ್ದರು. 90 ರ ದಶಕದಲ್ಲಿಯೇ ಈ ಜೋಡಿ ಬ್ರೇಕಪ್ ಮಾಡಿಕೊಂಡಿತ್ತು. ಇದಾದ ಬಳಿಕ ಸಂಗೀತಾ ಕ್ರಿಕೆಟಿಗ ಮೊಹಮ್ಮದ್ ಅಝರುದ್ದೀನ್ನ್ನು ವಿವಾಹವಾಗಿದ್ದರು. ಆದರರ 2010ರಲ್ಲಿ ವೈವಾಹಿಕ ಸಂಬಂಧವನ್ನು ಮುರಿದುಕೊಂಡಿದ್ದರು.
ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಸಲ್ಮಾನ್ ಖಾನ್ ತಾವು ಸಂಗೀತಾರನ್ನು ಮದುವೆಯಾಗಲು ಇಚ್ಚಿಸಿದ್ದ ಬಗ್ಗೆ ಹೇಳಿಕೊಂಡಿದ್ದರು. ಒಂದು ಸಮಯದಲ್ಲಿ ನಾನು ಮದುವೆಯಾಗಬೇಕು ಎಂದುಕೊಂಡಿದ್ದೆ ಆದರೆ ಬಳಿಕ ಅದು ಸಾಧ್ಯವಾಗಲಿಲ್ಲ. ನಾನು ಅತಿಯಾಗಿ ಹಚ್ಚಿಕೊಳ್ತೇನೆ. ಅವರೆಲ್ಲ ನಾನು ಒಳ್ಳೆಯ ಬಾಯ್ಫ್ರೆಂಡ್ ಆದರೆ ಆದರೆ ನನ್ನನ್ನು ಜೀವಮಾನ ಪೂರ್ತಿಸಹಿಸಿಕೊಳ್ಳುವುದು ತುಂಬಾನೇ ಕಷ್ಟ ಎಂದು ಭಾವಿಸಬಹುದು. ಸಂಗೀತಾ ಹಾಗೂ ನನ್ನ ಮದುವೆಯ ಕಾರ್ಡ್ ಕೂಡ ಪ್ರಿಂಟ್ ಆಗಿತ್ತು ಹೇಳಿದ್ದರು.
Salman Khan shares shirtless photo from gym, Sangeeta Bijlani reacts with fiery comment. See here
ಇದನ್ನು ಓದಿ :Bharajarangi-2 : ಪ್ರೀತಿಯ ಅಪ್ಪುಗೆ ‘ಭರ್ಜರಂಗಿ-2’ ಅರ್ಪಿಸಿದ ಶಿವಣ್ಣ
ಇದನ್ನೂ ಓದಿ :Bajrangi Bhaijaan 2 : ಭಜರಂಗಿ ಭಾಯಿಜಾನ್ 2 ಸಿನಿಮಾ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ಕಬೀರ್ ಖಾನ್..!