PRK Week in Amazon Prime :ಅಪ್ಪು ಫ್ಯಾನ್ಸ್​ಗೆ ಗುಡ್​ನ್ಯೂಸ್​; ಪಿಆರ್​ಕೆ ಈ ವಾರ ಹೊತ್ತು ತರಲಿದೆ 3 ಸಿನಿಮಾ

ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ನಮ್ಮನ್ನೆಲ್ಲ ಅಗಲಿ ಕೆಲ ಸಮಯಗಳೇ ಕಳೆದರೂ ಸಹ ಇನ್ನೂ ಕೂಡ ಅಭಿಮಾನಿಗಳ ಎದೆಯಲ್ಲಿ ಜೀವಂತವಾಗಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ನಟಿಸಬೇಕಿದ್ದ ಕರುನಾಡಿನ ಪ್ರೀತಿಯ ಅಪ್ಪು ಬಾರದ ಲೋಕಕ್ಕೆ ತೆರಳಿದ್ದಾರೆ. ನಟ ಪುನೀತ್​ ಕೇವಲ ಅಭಿನಯ ಮಾತ್ರವಲ್ಲದೇ ಸಿನಿಮಾ ನಿರ್ಮಾಣವನ್ನೂ ಮಾಡುತ್ತಿದ್ದರು ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಅಪ್ಪು ಕನಸಿನ ಕೂಸು ಪಿಆರ್​ಕೆ ಸಂಸ್ಥೆಗೆ ವಿಶೇಷ ಗೌರವ ಸಲ್ಲಿಸುವ ಸಲುವಾಗಿ ಅಮೆಜಾನ್​ ಪ್ರೈಮ್ (PRK Week in Amazon Prime)​ ಹೊಸದೊಂದು ಪ್ರಯತ್ನವನ್ನು ಮಾಡಿದೆ

ಪುನೀತ್​ ರಾಜ್​ಕುಮಾರ್​ ಹುಟ್ಟು ಹಾಕಿರುವ ಸಂಸ್ಥೆ ಪಿಆರ್​ಕೆ ಪ್ರೊಡಕ್ಷನ್​ನಲ್ಲಿ ನಾಲ್ಕು ಸಿನಿಮಾಗಳನ್ನು ನಿರ್ಮಾಣ ಮಾಡಲಾಗಿದೆ. ಮೂರು ಸಿನಿಮಾಗಳು ಸದ್ಯ ಅಮೆಜಾನ್​ ಪ್ರೈಮ್​ನಲ್ಲಿ ರಿಲೀಸ್​ ಆಗುತ್ತಿದೆ. ವಾರಕ್ಕೆ ಒಂದರಂತೆ ಮೂರು ವಾರಗಳ ಕಾಲ ಪಿಆರ್​ಕೆ ಪ್ರೊಡಕ್ಷನ್​ನ ಒಂದೊಂದೇ ಸಿನಿಮಾಗಳು ಅಮೆಜಾನ್​ ಪ್ರೈಮ್​ನಲ್ಲಿ ರಿಲೀಸ್​ ಆಗಲಿದೆ. ಇದಕ್ಕೆ ಪಿಆರ್​ಕೆ ವಾರ ಎಂದು ಹೆಸರಿಡಲಾಗಿದೆ.

ಪಿಆರ್​ಕೆ ವಾರ ಎಂಬ ಹೆಸರನ್ನು ಕೇಳುತ್ತಿದ್ದಂತೆಯೇ ಅಭಿಮಾನಿಗಳು ಸಖತ್​ ಖುಷ್​ ಆಗಿದ್ದು ಸಿನಿಮಾಗಳ ರಿಲೀಸ್​ಗೆ ಕಾತುರರಾಗಿದ್ದಾರೆ. ಪುನೀತ್​ ರಾಜ್​ಕುಮಾರ್​ಗೆ ವಿಶೇಷ ನಮನ ಸಲ್ಲಿಸಲು ಮುಂದಾಗಿರುವ ಅಮೆಜಾನ್​ ಪ್ರೈಮ್​ ಪ್ರಯತ್ನಕ್ಕೆ ಕರುನಾಡು ಯಾವ ರೀತಿಯಲ್ಲಿ ರೆಸ್ಪಾನ್ಸ್​ ನೀಡುತ್ತೆ ಅನ್ನೋದನ್ನು ಕಾದು ನೋಡಬೇಕಿದೆ.

ಪಿಆರ್​ಕೆ ಪ್ರೊಡಕ್ಷನ್​ನಲ್ಲಿ ಫ್ಯಾಮಿಲಿ ಪ್ಯಾಕ್​, ಮ್ಯಾನ್​ ಆಫ್​ ದಿ ಮ್ಯಾಚ್​ , ಓ2 ಸಿನಿಮಾಗಳು ನಿರ್ಮಾಣ ಹಂತದ್ದಲಿವೆ. ಈ ಸಿನಿಮಾಗಳು ಒಂದೇ ತಿಂಗಳಲ್ಲಿ ರಿಲೀಸ್​ ಆಗಲಿವೆ ಎಂಬುದು ವಿಶೇಷ. ಈ ಹಿಂದೆ ಪಿಆರ್​ಕೆ ಪ್ರೊಡಕ್ಷನ್​ನ ಕವಲುದಾರಿ, ಮಾಯಾಬಜಾರ್​ 2016, ಲಾ ಮತ್ತ ಫ್ರೆಂಚ್​ ಬಿರಿಯಾನಿ ಕೂಡ ಅಮೆಜಾನ್​ ಪ್ರೈಮ್​ನಲ್ಲಿಯೇ ರಿಲೀಸ್​ ಆಗಿತ್ತು. ಪಿಆರ್​ಕೆ ಬ್ಯಾನರ್​ನಡಿಯಲ್ಲಿ ನಿರ್ಮಾಣವಾದ ಗಂಧದ ಗುಡಿ ಮಾತ್ರ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ.

ಇದನ್ನು ಓದಿ : Bharajarangi-2 : ಪ್ರೀತಿಯ ಅಪ್ಪುಗೆ ‘ಭರ್ಜರಂಗಿ-2’ ಅರ್ಪಿಸಿದ ಶಿವಣ್ಣ

ಇದನ್ನೂ ಓದಿ : Athiya Shetty : ಬಾಡಿ ಶೇಮಿಂಗ್​ ಮಾಡುವವರ ವಿರುದ್ಧ ಖಡಕ್​ ಹೇಳಿಕೆ ಕೊಟ್ಟ ನಟಿ ಆಥಿಯಾ ಶೆಟ್ಟಿ

prk productions movies family pack man of the match o2 movie will be releasing in amazon prime video

Comments are closed.