ಮಂಗಳವಾರ, ಏಪ್ರಿಲ್ 29, 2025
HomeCinemaSamantha Hollywood : ಡಿವೋರ್ಸ್ ಬೆನ್ನಲ್ಲೇ ಸಮಂತಾಗೇ ಖುಲಾಯಿಸಿದ ಅದೃಷ್ಟ: ಹಾಲಿವುಡ್ ಗೆ ಹಾರಿದ ಸುಂದರಿ

Samantha Hollywood : ಡಿವೋರ್ಸ್ ಬೆನ್ನಲ್ಲೇ ಸಮಂತಾಗೇ ಖುಲಾಯಿಸಿದ ಅದೃಷ್ಟ: ಹಾಲಿವುಡ್ ಗೆ ಹಾರಿದ ಸುಂದರಿ

- Advertisement -

ಟಾಲಿವುಡ್ ಬೆಡಗಿ ಸಮಂತಾ ವೈಯಕ್ತಿಕ ಬದುಕಿನ ಏರಿಳಿತಗಳ ಬಳಿಕ ಈಗ ತಮ್ಮ ಕೆರಿಯರ್ ನಲ್ಲಿ ಬ್ಯುಸಿಯಾಗಿದ್ದಾರೆ. ವಿಚ್ಛೇಧನದ ಬಳಿಕ ಒಂದಾದ ಮೇಲೊಂದು ಬೋಲ್ಡ್ ಸ್ಪೆಪ್ ತಗೋತಿರೋ ಸಮಂತಾ ಇದೇ ಮೊದಲ ಬಾರಿಗೆ ಹಾಲಿವುಡ್ ಸಿನಿಮಾಗೆ (Samantha Hollywood) ಹಾರಿದ್ದಾರೆ. ತಮ್ಮ ಕೆರಿಯರ್ ನಲ್ಲಿ ಮೈಚಳಿ ಬಿಟ್ಟು ನಟಿಸಲು ಹಿಂದೇಟು ಹಾಕ್ತಿದ್ದ ಸಮಂತಾ ಈಗ ಬೋಲ್ಡ್ ಪಾತ್ರಗಳಿಗೆ ಜೈ ಎನ್ನುತ್ತಿದ್ದಾರೆ. ಪುಷ್ಪ ಸಿನಿಮಾದಲ್ಲಿ ಐಟಂ ಸಾಂಗ್ ವೊಂದಕ್ಕೆ ಹೆಜ್ಜೆ ಹಾಕಲು ಮುಂದಾಗಿರುವ ಸಮಂತಾ ಇದರ ಬೆನ್ನಲ್ಲೇ ಹಾಲಿವುಡ್ ಗೆ ಕಾಲಿಟ್ಟಿದ್ದಾರೆ.

ಇಂಗ್ಲೀಷ್ ಸಿನಿಮಾದಲ್ಲಿ ಇದೇ ಮೊದಲ ಬಾರಿಗೆ ಸಮಂತಾ ಬೈ ಸೆಕ್ಸುವಲ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸ್ವತಃ ಸಮಂತಾ ಈ ಸಂಗತಿಯನ್ನು ಹಂಚಿಕೊಂಡಿದ್ದಾರೆ. ಬಾಫ್ಟಾ ಪ್ರಶಸ್ತಿ ವಿಜೇತ ಜನಪ್ರಿಯ ಹಾಲಿವುಡ್ ನಿರ್ದೇಶಕ ಫಿಲಿಪ್ ಜೋನ್ ನಿರ್ದೇಶಿಸುತ್ತಿರುವ ಇಂಗ್ಲೀಷ್ ಸಿನಿಮಾದ ವಿಭಿನ್ನ ಪಾತ್ರದಲ್ಲಿ ಸಮಂತಾ ಕಾಣಿಸಿಕೊಳ್ಳಲಿದ್ದಾರೆ.

ತಮ್ಮ ಹಾಲಿವುಡ್ ಜರ್ನಿ ಬಗ್ಗೆ ಎಕ್ಸೈಟೆಡ್ ಅಗಿರೋ ಸಮಂತಾ, 12 ವರ್ಷಗಳ ಹಿಂದೆ ಏ ಮಾಯ ಚೇಸಾವೆ ಸಿನಿಮಾಕ್ಕೆ ನಾನು ಅಡಿಷನ್ ನೀಡಿದ್ದೆ. ಅದಾದ ಬಳಿಕ ನಾನು ಈಗಲೇ ಆಡಿಷನ್ ನೀಡಿದ್ದು. ಅಂದು ಎಷ್ಟು ನರ್ವಸ್ ಆಗಿದ್ದೇನೋ ಇಂದು ಅಷ್ಟೇ ನವರ್ಸ್ ಆಗಿದ್ದೇನೆ ಎಂದಿದ್ದಾರೆ. ಮಾತ್ರವಲ್ಲ ಭಾಪ್ಟಾ ಪ್ರಶಸ್ತಿ ವಿಜೇತ ಅತ್ಯುತ್ತಮ ನಿರ್ದೇಶಕ ನನ್ನ ಮೆಚ್ಚಿನ ಡೌನ್ ಟೌನ್ ಅಬೆ ಸರಣಿಯ ನಿರ್ದೇಶಕ ಫಿಲಿಪ್ ಜಾನ್ ನನ್ನನ್ನು ನಿಮ್ಮ ಸಿನಿಮಾಕ್ಕೆ ಆಯ್ಕೆ ಮಾಡಿದ್ದಕ್ಕೆ ಧನ್ಯವಾದ ಎಂದಿದ್ದಾರೆ.

ಫಿಲಿಪ್ ಜಾನ್ ಅರೇಂಜಮೆಂಟ್ಸ್ ಆಫ್ ಲವ್ ಹೆಸರಿನ ಕಾದಂಬರಿಯನ್ನು ಅದೇ ಹೆಸರಿನ ಸಿನಿಮಾ ಮಾಡುತ್ತಿದ್ದು ಇದರಲ್ಲಿ ಉಭಯಲಿಂಗಿ ಹಾಗೂ ಖಾಸಗಿ ಪತ್ತೆದಾರಿ ಲುಕ್‌ನಲ್ಲೂ ಕಾಣಿಸಿಕೊಳ್ಳಲಿದ್ದಾರಂತೆ. ಕೇವಲ ಪತ್ತೆದಾರಿ ಮಾತ್ರವಲ್ಲ ಸಾಕಷ್ಟು ಬೋಲ್ಡ್ ಅವತಾರದಲ್ಲೂ ಸಮಂತಾ ಕಾಣಿಸಿಕೊಳ್ಳಲಿದ್ದಾರಂತೆ.

ಪುಷ್ಪ ಸಿನಿಮಾದಲ್ಲಿ ಅಲ್ಲೂ ಅರ್ಜುನ್ ಜೊತೆ ಸೊಂಟ ಬಳುಕಿಸಲು ಸಮಂತಾ ಭರ್ಜರಿ ಸಂಭಾವನೆ ಪಡೆದಿದ್ದಾರಂತೆ. ಇದರ ಬೆನ್ನಲ್ಲೇ ಹಾಲಿವುಡ್ ಗೆ ಅವಕಾಶ ದಕ್ಕಿಸಿ ಕೊಂಡಿದ್ದಾರೆ. ಇತ್ತೀಚೆಗಷ್ಟೇ ಸಮಂತಾ ಬದುಕಿನಲ್ಲಿ ಬಿರುಗಾಳಿ ಬೀಸಿದ್ದು ಸಮಂತಾ ಹಾಗೂ ನಾಗಚೈತನ್ಯ ಅಕ್ಕಿನೇನಿ ತಮ್ಮ ನಾಲ್ಕು ವರ್ಷಗಳ ವೈವಾಹಿಕ ಬದುಕಿಗೆ ಅಂತ್ಯ ಹಾಡಿದ್ದರು. 2017 ಎಲ್ಲಿ ಮದುವೆಯಾಗಿದ್ದ ಈ ಜೋಡಿ 2010 ರಿಂದ ಪ್ರೀತಿಸುತ್ತಿದ್ದರು.

ಇದನ್ನೂ ಓದಿ : ಅಂಡರ್ ವಾಟರ್ ನಲ್ಲಿ ಲಿಪ್ ಲಾಕ್ : ಗರ್ಭಿಣಿ ನಟಿಯ ಸಾಹಸಕ್ಕೆ ಅಚ್ಚರಿಗೊಂಡ ಅಭಿಮಾನಿಗಳು

ಇದನ್ನೂ ಓದಿ : ಹಾಟ್ ಡ್ರೆಸ್ ತೊಟ್ಟು ಟ್ರೋಲಿಗರಿಗೆ ಟಾಂಗ್ ಕೊಟ್ಟ ಸಮಂತಾ

(Good luck to Samantha after her divorce, a chance at a Hollywood movie)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular