777 Charlie : ರಕ್ಷಿತ್‌ ಶೆಟ್ಟಿ ಅಭಿಮಾನಿಗಳಿಗೆ ನಿರಾಸೆ : ಸದ್ಯ ತೆರೆಗೆ ಬರ್ತಿಲ್ಲ 777 ಚಾರ್ಲಿ

ಸ್ಯಾಂಡಲ್ ವುಡ್ ನಲ್ಲಿ ಸದ್ಯ ಮಾಸ್ ಚಿತ್ರಗಳ ಜೊತೆ ಸದಬಿರುಚಿಯ ಸಿನಿಮಾಗಳು ಸದ್ದು ಮಾಡುತ್ತಿವೆ. ಈ ಪೈಕಿ ಕುತೂಹಲ ಮೂಡಿಸಿರುವುದು ರಕ್ಷಿತ್ ಶೆಟ್ಟಿ (Rakshith Shetty) ಯವರ 777 ಚಾರ್ಲಿ. ಆದರೆ ಈ ವರ್ಷಾಂತ್ಯಕ್ಕೆ 777 ಚಾರ್ಲಿ (777 Charlie )ಕಣ್ತುಂಬಿಕೊಳ್ಳುವ ಖುಷಿಯಲ್ಲಿದ್ದ ಅಭಿಮಾನಿಗಳಿಗೆ ನಿರಾಸೆ ಎದುರಾಗಿದೆ.

ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಸಿನಿಮಾ ಎಲ್ಲ ಅಂದುಕೊಂಡಂತೆ ಆಗಿದ್ದರೇ ಈ ವರ್ಷಾಂತ್ಯಕ್ಕೆ ಅಂದ್ರೇ 2021 ರ ಡಿಸೆಂಬರ್ 31 ಕ್ಕೆ ರಿಲೀಸ್ ಆಗಬೇಕಿತ್ತು. ಆದರೆ ಸಿನಿಮಾ ಬಹುಭಾಷೆಯಲ್ಲಿ ರಿಲೀಸ್ ಆಗ್ತಿರೋದರಿಂದ ಸಿನಿಮಾ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ ಎಂದು ಚಿತ್ರ ತಂಡ ಮಾಹಿತಿ ನೀಡಿದೆ. 777 ಚಾರ್ಲಿ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾವಾಗಿ ಮೂಡಿಬಂದಿದ್ದು ಕನ್ನಡದ ಜೊತೆ ಹಿಂದಿ, ತಮಿಳು, ತೆಲುಗಿನಲ್ಲೂ ತೆರೆಗೆ ಬರಲಿದೆ. ಹೀಗಾಗಿ ಸಿನಿಮಾ ರಿಲೀಸ್ ಗೆ ಹಲವು ಲೆಕ್ಕಾಚಾರ ಹಾಕಬೇಕಾದ ಸವಾಲು ಚಿತ್ರತಂಡದ ಮುಂದಿದೆ.

ಕನ್ನಡದಲ್ಲಿ ಮಾತ್ರವಲ್ಲದೇ ಬೇರೆ ಭಾಷೆಗಳಲ್ಲೂ ಸಿನಿಮಾ ಒಂದೇ ಸಮಯದಲ್ಲಿ ರಿಲೀಸ್ ಆಗಬೇಕಾಗಿರೋದರಿಂದ ಆಯಾ ಭಾಷೆಗಳ ಪ್ರಮುಖ ಸಿನಿಮಾಗಳ ರಿಲೀಸ್ ಡೇಟ್ ಕೂಡ ಚೆಕ್ ಮಾಡಿಕೊಳ್ಳಬೇಕು. ಹೀಗಾಗಿ ಇನ್ನು ಸಿನಿಮಾ ರಿಲೀಸ್ ಡೇಟ್ ಫೈನಲ್ ಆಗಿಲ್ಲ. ಇದಲ್ಲದೇ ಚಾರ್ಲಿ ಸಿನಿಮಾ ವಿತರಣೆ ಹಕ್ಕು ಹಿಂದಿ ಹಾಗೂ ತೆಲುಗಿನ ಪ್ರತಿಷ್ಟಿತ ನಿರ್ಮಾಣಗಳ ಸಂಸ್ಥೆಗಳ ಕೈ ಸೇರಿದೆ. ಹೀಗಾಗಿ ಎಲ್ಲ ಲೆಕ್ಕಾಚಾರದ ಬಳಿಕ 777 ಚಾರ್ಲಿ (777 Charlie) ರಿಲೀಸ್ ಡೇಟ್ ಅಂತಿಮವಾಗಲಿದೆ.

ಡಿಸೆಂಬರ್ ನಲ್ಲಿ ಅಲ್ಲೂ ಅರ್ಜುನ್ ಅಭಿನಯದ ಬಹುನೀರಿಕ್ಷಿತ ಸಿನಿಮಾ ಪುಷ್ಪಾ ರಿಲೀಸ್ ಆಗಲಿದೆ. ಇದಾಗಿ ಕೆಲವೇ ವಾರದಲ್ಲಿ ಜನವರಿ 7 ಕ್ಕೆ ಆರ್ ಆರ್ ಆರ್ ಸಿನಿಮಾ ರಿಲೀಸ್ ಆಗಲಿದೆ. ಹೀಗಾಗಿ ಇದರ ಮಧ್ಯೆ 777 ಚಾರ್ಲಿ ರಿಲೀಸ್ ಆದಲ್ಲಿ ಪ್ರದರ್ಶನಕ್ಕೆ ಜಾಸ್ತಿ ಕಾಲಾವಲಾಶ ದೊರೆಯೋದಿಲ್ಲ. ಇದೇ ಕಾರಣಕ್ಕೆ ಸಿನಿಮಾ ರಿಲೀಸ್ ಡೇಟ್ ಮುಂದೂಡಲಾಗಿದೆ.

ಲೋಕದ ಜಂಜಾಟಗಳನ್ನು ಏಕಾಂಗಿಯಾಗಿ ಎದುರಿಸುತ್ತಿರುವ ನಾಯಕನ ಬದುಕಿನಲ್ಲಿ ಶ್ವಾನವೊಂದು ಎಂಟ್ರಿಕೊಟ್ಟ ಮೇಲೆ ಏನೆಲ್ಲ ಬದಲಾವಣೆಗಳಾಗುತ್ತವೇ ಎಂಬುದೇ 777 ಚಾರ್ಲಿ ಸಿನಿಮಾದ ಕತೆಯಾಗಿದೆ. ಈಗಾಗಲೇ ರಿಲೀಸ್ ಆಗಿರೋ ಟ್ರೇಲರ್,ಹಾಡುಗಳು ಜನಮೆಚ್ಚುಗೆ ಗಳಿಸಿವೆ. ಕಿರಣ್ ರಾಜ್ ನಿರ್ದೇಶನದ ಈ ಸಿನಿಮಾ ಪರವಂ ಸ್ಟುಡಿಯೋದಲ್ಲಿ ನಿರ್ಮಾಣವಾಗುತ್ತಿದ್ದು, ಸಂಗೀತಾ ಶೃಂಗೇರಿ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ : ಸಿಂಪಲ್ ಸ್ಟಾರ್ ಧರ್ಮಸಂಕಟಕ್ಕೆ ಸಖತ್ ಬೇಡಿಕೆ: 3.3 ಮಿಲಿಯನ್ ವೀವ್ಸ್ ಪಡೆದ ಟಾರ್ಚರ್ ಸಾಂಗ್

ಇದನ್ನೂ ಓದಿ : ರಕ್ಷಿತ್ ಶೆಟ್ಟಿ ಅಭಿಮಾನಿಗಳಿಗೆ ಸಿಹಿಸುದ್ದಿ….!ಪಂಚ ಭಾಷೆಗಳಲ್ಲಿ ತೆರೆಗೆ ಬರಲಿದೆ 777 ಚಾರ್ಲಿ …!!

( Rakshith Shetty is a huge disappointment for fans, 777 Charlie kannada movie relese postpone)

Comments are closed.