ಕೇವಲ ನಟನೆ ಮಾತ್ರವಲ್ಲ ಸೌಂದರ್ಯ,ವರ್ಕೌಟ್,ಪ್ರಾಣಿಪ್ರೇಮ ಹಾಗೂ ಬೋಲ್ಡ್ ನಡೆಯಿಂದಲೇ ಹೆಸರು ಗಳಿಸಿದ ಬೆಡಗಿ ಸೌತ್ ಯೂತ್ ಐಕಾನ್ ಸಮಂತಾ (Samantha Ruth Prabhu ). ಬೋಲ್ಡ್ ಪೋಟೋ ಶೂಟ್ ಗಳಿಂದಲೇ ಸದ್ದು ಮಾಡ್ತಿದ್ದ ಸಮಂತಾ ಈಗ ಬೇಗಂ ಅವತಾರದಲ್ಲಿ ಕಾಣಿಸಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ. ಸದಾ ಹಾಟ್ ಆ್ಯಂಡ್ ಬೋಲ್ಡ್ ಲುಕ್ ಗಳಲ್ಲಿ ಕಾಣಿಸಿಕೊಳ್ತಿದ್ದ ಸಮಂತಾ ಈ ಭಾರಿ ಬೇಗಂ ಡ್ರೆಸ್ ನಲ್ಲಿ ಮಿಂಚಿದ್ದಾರೆ. ಡಾರ್ಕ್ ರೆಡ್ ಮುಸ್ಲಿಂ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡಿರೋ ಸಮಂತಾ, ಮೊಘಲ ಶೈಲಿಯ ಸಾಂಪ್ರದಾಯಿಕ ಆಭರಣಗಳನ್ನು ಧರಿಸಿ ಮತ್ತಷ್ಟು ಮಿಂಚಿದ್ದಾರೆ.

ನ್ಯೂ ಲುಕ್ ಪೋಟೋಗಳು ಫೇಸ್ ಬುಕ್, ಟ್ವೀಟರ್, ಇನ್ ಸ್ಟಾ ಸೇರಿದಂತೆ ಎಲ್ಲೆಡೆ ಸಖತ್ ವೈರಲ್ ಅಗ್ತಿದೆ. ಅಭಿಮಾನಿಗಳು ಸಮಂತಾರ ಈ ಬೋಲ್ಡ್ ಲುಕ್ ನೋಡಿ ಖುಷಿ ಆಗಿದ್ದಾರೆ. ಇತ್ತೀಚೆಗಷ್ಟೇ ತೆರೆ ಕಂಡ ಕಾತುವಾಕುಲ ಎರಡು ಕಾದಲ್ ಸಿನಿಮಾದಲ್ಲಿ ಸಮಂತಾ ಖತಿಜಾ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. ಈ ಚಿತ್ರದಲ್ಲಿ ಸಮಂತಾ ಪಾತ್ರದ ಲುಕ್ ರಿವೀಲ್ ಆಗಿರಲಿಲ್ಲ. ಈಗ ಅದೇ ಸಿನಿಮಾದ ಖತಿಜಾ ಪಾತ್ರದ ಲುಕ್ ಇದು ಎನ್ನಲಾಗಿದ್ದು, ಪೋಟೋ ಸಖತ್ ವೈರಲ್ ಆಗಿದೆ.

ಇದಕ್ಕೂ ಮುನ್ನ ಸಮಂತಾ (Samantha Ruth Prabhu ) ಶಾಕುಂತಲಂ ಸಿನಿಮಾದಲ್ಲೂ ಸಮಂತಾ ಟ್ರೆಡಿಶನಲ್ ಉಡುಗೆಯಲ್ಲಿ ಮಿಂಚಿದ್ದರು. ಸದ್ಯ ಸಮಂತಾ ತೆಲುಗು ತಮಿಳು ಸಿನಿಮಾಗಳ ಜೊತೆ ಹಾಲಿವುಡ್ ಸಿನಿಮಾ ಗೂ ಸಹಿ ಹಾಕಿದ್ದಾರೆ. ಕಳೆದ ವರ್ಷ ವಿವಾಹ ವಿಚ್ಚೇಧನದ ಕಾರಣಕ್ಕೆ ಸಮಂತಾ ಸುದ್ದಿಯಾಗಿದ್ದರು. ಆದರೆ ಅದಾದ ಬಳಿಕ ವೃತ್ತಿ ಬದುಕಿನಲ್ಲಿ ಸಮಂತಾ ಫುಲ್ ಬ್ಯುಸಿಯಾಗಿದ್ದು ಒಂದಾದ ಮೇಲೊಂದರಂತೆ ಬೋಲ್ಡ್ ಪಾತ್ರಗಳಲ್ಲಿ ಕಾಣಿಸಿಕೊಳ್ತಿದ್ದಾರೆ.

ಅದರಲ್ಲೂ ಪುಷ್ಪ ಸಿನಿಮಾದ ಊ ಅಂಟಾವಾ ಉಹೂಂ ಅಂಟಾವಾ ಹಾಡಿನ ಬಳಿಕವಂತೂ ಸಮಂತಾ (Samantha Ruth Prabhu ) ಬೇಡಿಕೆ ಹೆಚ್ಚಿದೆ. ಕೇವಲ ನಟನೆ ಮಾತ್ರವಲ್ಲ ಐಟಂ ಸಾಂಗ್ ನಿಂದಲೂ ಈಗ ಸಮಂತಾ ಅಭಿಮಾನಿಗಳ ಮನಗೆದ್ದಿದ್ದಾರೆ. ಆದರೆ ಸಮಂತಾ ಮಾತ್ರ ಈ ಗೆಲುವಿನ ಬಳಿಕ ಸಖತ್ ಚ್ಯೂಸಿಯಾಗಿದ್ದು ಐಟಂ ಸಾಂಗ್ ವೊಂದಕ್ಕೆ ಯೆಸ್ ಎನ್ನದೇ ಗುಣಾತ್ಮಕ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ತಿದ್ದಾರಂತೆ. ಕೇವಲ ನಟನೆ ಮಾತ್ರವಲ್ಲ ವರ್ಕೌಟ್ ವಿಡಿಯೋಗಳಿಂದಲೂ ಸಮಂತಾ ಸಖತ್ ಫೇಮಸ್ ಆಗ್ತಿದ್ದು ಯಾವ ಬಾಡಿ ಬಿಲ್ಡರ್ ಗಳನ್ನು ನಾಚಿಸುವಂತೆ ವರ್ಕೌಟ್ ಮಾಡ್ತಿದ್ದಾರೆ.
ಇದನ್ನೂ ಓದಿ : Yash : ಛತ್ರಪತಿ ಶಿವಾಜಿ ಬಯೋಪಿಕ್ ನಲ್ಲಿ ಯಶ್: ಇಲ್ಲಿದೆ ವೈರಲ್ ಪೋಟೋದ ಅಸಲಿ ಸತ್ಯ
ಇದನ್ನೂ ಓದಿ : ವೈವಾಹಿಕ ಜೀವನಕ್ಕೆ ಕಾಲಿರಿಸಿದ ಕನ್ಯಾಕುಮಾರಿ ಖ್ಯಾತಿಯ ನಟಿ ರಶ್ಮಿತಾ ಜೆ ಶೆಟ್ಟಿ
Samantha Ruth Prabhu in begum Look Photoshoot