Gnanavapi Model Survey : ಮಂಡ್ಯದಲ್ಲೂ ನಡೆಯುತ್ತಾ ಗ್ಯಾನವಾಪಿ ಮಾದರಿ ಸರ್ವೇ: ಡಿಸಿ ಬರೆದ ಪತ್ರದಲ್ಲೇನಿದೆ ಗೊತ್ತಾ ?

ಮಂಡ್ಯ : ರಾಜ್ಯದಲ್ಲಿ ಧರ್ಮದಂಗಲ್ ತೀವ್ರ ಸ್ವರೂಪ ಪಡೆದುಕೊಳ್ತಿದೆ. ಇಷ್ಟು ದಿನಗಳ ಕಾಲ ಹಿಜಾಬ್, ಹಲಾಲ್ ಕಟ್ ಗಾಗಿ ಹೋರಾಟ ನಡೆಸಿದ ಹಿಂದೂಪರ ಸಂಘಟನೆಗಳು ಈಗ ಮಸೀದಿಗಳ ಅಡಿಯಲ್ಲಿ ಅಡಗಿದ ಮಂದಿರಗಳನ್ನು ಹುಡುಕಲು ಆರಂಭಿಸಿದ್ದಾರೆ. ಇದರ ಅಂಗವಾಗಿ ಮಂಡ್ಯದ ಜಾಮಿಯಾ ಮಸೀದಿಯ (Mandya Jamiya Masjid) ಅಡಿಯಲ್ಲಿರೋ ಹನುಮ ದೇವಾಲಯವನ್ನು ಹುಡುಕಲು ಮಂಡ್ಯದ ಹಿಂದೂಪರ ಸಂಘಟನೆಗಳು ಮುಂದಾಗಿವೆ. ಹಿಂದೂಪರ ಸಂಘಟನೆಗಳ ಒತ್ತಾಯಕ್ಕೆ ಈಗ ಡಿಸಿ ಧ್ವನಿಗೂಡಿಸಿದ್ದು, ಜಾಮಿಯಾ ಮಸೀದಿ ವಿಡಿಯೋ ಸರ್ವೇ (Gnanavapi Model Survey) ಗೆ ಡಿಸಿ ಪತ್ರ ಬರೆದಿದ್ದಾರೆ.

ಜಾಮಿಯಾ ಮಸೀದಿ ವಿಡಿಯೋ ಸರ್ವೆ ಸಾಧ್ಯತೆಯಿದ್ದು ಹಿಂದೂಪರ ಸಂಘಟನೆಗಳ ಬೇಡಿಕೆಗೆ ಬೆಲೆ ಬರುವಂತಿದೆ. ಜಾಮಿಯಾ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ. ಮಂಡ್ಯದ ಡಿಸಿ ಅಶ್ವಥಿ, ದೆಹಲಿಯ ಆರ್ಕ್ಯಾಲಜಿಕಲ್ ಡಿಪಾರ್ಟ್ಮೆಂಟ್ ಹಾಗೂ ರಾಜ್ಯ ಪುರಾತತ್ವ ಇಲಾಖೆಗೆ ಪತ್ರ ಬರೆದಿದ್ದಾರೆ. ಮಂಡ್ಯದ ಶ್ರೀರಂಗಪಟ್ಟಣದಲ್ಲಿರುವ ಜಾಮಿಯಾ ಮಸೀದಿ ಯನ್ನು ಹನುಮ ಮಂದಿರದ ಮೇಲೆ ನಿರ್ಮಿಸಲಾಗಿದೆ ಎಂದು ಹಿಂದು ಸಂಘಟನೆಗಳ ವಾದಿಸುತ್ತಿವೆ.

ಜಾಮಿಯಾ ಮಸೀದಿಯಲ್ಲಿ ಮದರ ನಡೆಸಲಾಗ್ತಿದೆ. ಅಲ್ಲಿ ಅನಧಿಕೃತವಾಗಿ ವಾಸ ಮಾಡಲಾಗ್ತಿದೆ, ಅಲ್ಲದೇ ಅಲ್ಲಿ ಹಿಂದು ದೇವರ ಕುರುಹುಗಳನ್ನ ವಿರೂಪಗೊಳಿಸಲಾಗ್ತಿದೆ. ಗ್ಯಾನ ವ್ಯಾಪಿ ಮಾದರಿ ವಿಡಿಯೋ ಸರ್ವೆ ಮಾಡಬೇಕು ಎಂದು ಹಿಂದು ಸಂಘಟನೆಗಳ ಮನವಿ ಮಾಡಿವೆ ಎಂಬುದನ್ನು ಅಶ್ವಥಿ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರಂತೆ.

ಜಾಮಿಯಾ ಮಸೀದಿ ಒಳಭಾಗದಲ್ಲಿ ಹಿಂದೂ ಮಾದರಿಯ ದೇಗುಲ ಪತ್ತೆಯಾದ ಹಿನ್ನೆಲೆಯಲ್ಲಿ ಕಳೆದ ತಿಂಗಳು 20 ರಂದು ಹಲವು ಹಿಂದೂಪರ ಸಂಘಟನೆಗಳು ಡಿಸಿ ಸೇರಿದಂತೆ ಸಂಬಂಧಿಸಿದ ಇಲಾಖೆಗೆ ಮನವಿ ಮಾಡಿದ್ದು, ಸರ್ವೇ ನಡೆಸಿ ಜಾಮಿಯಾ ಮಸೀದಿಯ ಅಡಿಯಲ್ಲಿರುವ ದೇಗುಲವನ್ನು ರಕ್ಷಿಸಿ ಪೂಜೆ ಸಲ್ಲಿಸಲು ಅವಕಾಶ ನೀಡಬೇಕೆಂದು ಮನವಿ ಮಾಡಿದ್ದರು. ಈ ಮಧ್ಯೆ ತಮ್ಮ ಬೇಡಿಕೆಗೆ ಮಹತ್ವ ನೀಡದ ಹಿನ್ನೆಲೆಯಲ್ಲಿ ಜೂನ್ 4ಕ್ಕೆ ಶ್ರೀರಂಗಪಟ್ಟಣ ಚಲೋ ಹೋರಾಟಕ್ಕೆ ವಿಎಚ್‌ಪಿ ಮತ್ತು ಭಜರಂಗದಳ ಕರೆ ನೀಡಿದೆ.

Gnanavapi Model Survey in Mandya Jamiya Masjid dc letter

ಈ ಹಿನ್ನೆಲೆಯಲ್ಲಿ ಹನುಮ ಭಕ್ತರಿಂದ ಜಾಮಿಯಾ ಮಸೀದಿ ಪ್ರವೇಶಕ್ಕೆ‌ ಸಿದ್ದತೆ ನಡೆದಿರೋದರನ್ನು ಅರಿತ ಮಂಡ್ಯ ಡಿಸಿ ಅಶ್ವಥಿಯಿಂದ ದೆಹಲಿ ಮತ್ತು ರಾಜ್ಯ ಆರ್ಕ್ಯಾಲಜಿಕಲ್ ಡಿಪಾರ್ಟ್ಮೆಂಟ್ ಗೆ ಪತ್ರ ಬರೆದಿದ್ದಾರಂತೆ. ಹಿಂದೂ ಸಂಘಟನೆಗಳ ಮನವಿಯಂತೆ ನಿಯಮಾನುಸಾರ ಕಾನೂನು ಕ್ರಮ ಕೈಗೊಳ್ಳುವಂತೆ ಪತ್ರ ಬರೆದಿದ್ದು ಡಿಸಿ ಪತ್ರದ ಹಿನ್ನೆಲೆಯಲ್ಲಿ ದೆಹಲಿಯಿಂದ ಸರ್ವೇ ಮಾಡಲು ಅಧಿಕಾರಿಗಳ ತಂಡ ಬರುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ಕೇವಲ ಮಂಡ್ಯ ಮಾತ್ರವಲ್ಲದೇ ಮಂಗಳೂರಿನಲ್ಲೂ ಮಸೀದಿ ಅಡಿಯಲ್ಲಿ ದೇವಾಲಯ ಇದೆ ಎಂಬ ಮಾತು‌ಕೇಳಿಬಂದಿದ್ದು ವೀಳ್ಯದೆಲೆ ಭವಿಷ್ಯ ಸೇರಿದಂತೆ ಹಲವು ಪ್ರಕ್ರಿಯೆ ನಡೆದಿದೆ.

ಇದನ್ನೂ ಓದಿ : ಕರ್ನಾಟಕಕ್ಕೆ ಮತ್ತೆ ಕೊರೊನಾ ಭಯ : ಆರೋಗ್ಯ ಸಚಿವ ಡಾ.ಸುಧಾಕರ್‌ಗೆ ಕೊರೊನಾ ಸೋಂಕು ದೃಢ

ಇದನ್ನೂ ಓದಿ : ಪಕ್ಷಕ್ಕಾಗಿ ಮಹಾತ್ಯಾಗ 2023 ರಲ್ಲೂ ಸಿಎಂ ಆಗಲ್ವಾ ಡಿ.ಕೆ.ಶಿವಕುಮಾರ್‌ : ಏನಿದು ಕಾಂಗ್ರೆಸ್‌ ರಹಸ್ಯ ಒಪ್ಪಂದ

Gnanavapi Model Survey in Mandya Jamiya Masjid dc letter

Comments are closed.