ಒಂದಿಷ್ಟು ಕಾಲ ವೈವಾಹಿಕ ಬದುಕಿನ ಏರಿಳಿತಗಳಿಂದ ಕಂಗೆಟ್ಟಿದ್ದ ಸೌತ್ ಇಂಡಿಯಾದ ಬಹುಬೇಡಿಕೆಯ ನಟಿ ಸಮಂತಾ ( samantha ruth prabhu ) ಈಗ ಸಖತ್ ಹಾಟ್ ಆಗಿದ್ದಾರೆ. ವೃತ್ತಿ ಬದುಕಿನ ಉತ್ತುಂಗದಲ್ಲಿರೋ ಸಮಂತಾ ಒಂದಕ್ಕಿಂತ ಒಂದು ಮೈ ಬಿಸಿಯೇರಿಸುವ ಪೋಟೋಗಳ ಜೊತೆ ಈಗ ಸೋಷಿಯಲ್ ಮೀಡಿಯಾಕ್ಕೆ ಬೆಂಕಿ ಹಚ್ಚಿದ್ದಾರೆ. ಡಿವೋರ್ಸ್ ಬಳಿಕ ಸ್ಯಾಮ್ ಲಕ್ಕು ಮತ್ತು ಲುಕ್ಕು ಎರಡೂ ಬದಲಾಗಿದೆ ಅಂತ ಅಭಿಮಾನಿಗಳು ಮಾತಾಡ್ತಿದ್ದಾರೆ. ಇದು ಸತ್ಯ ಎಂಬಂತೆ ಸಮಂತಾ ಒಂದಾದ ಮೇಲೊಂದರಂತೆ ಸಿನಿಮಾಗಳಲ್ಲಿ ಹೆಸರು ಗಳಿಸುತ್ತಿದ್ದಾರೆ.

ಅದರಲ್ಲೂ ತೆಲುಗು ಚಿತ್ರರಂಗಕ್ಕೆ ಕಿಚ್ಚು ಹಚ್ಚಿದ ಪುಷ್ಪ ಸಿನಿಮಾದ ಊಂ ಅಂಟಾವಾ ಮಾವಾ ಊಹೂಂ ಅಂಟಾವಾ ಮಾವಾ ಹಾಡಿನ ಮೂಲಕವಂತೂ ಪಡ್ಡೆ ಹೈಕಳ ನಿದ್ದೆಗೆಡಿಸಿದರು. ಊ ಅಂಟಾವಾ ಐಟಂ ಸಾಂಗಿನಲ್ಲಿ ಸಮಂತಾ ಮೈಬಣ್ಣ, ನಡು ಬಳುಕಿಸಿ ಕುಣಿದ ಪರಿ ನೋಡಿದ ಮೇಲಂತೂ ಸಮಂತಾ ಅಭಿಮಾನಿಗಳ ಸಂಖ್ಯೆ ದುಪ್ಪಟ್ಟಾಯಿತು.

ಈ ಮಧ್ಯೆ ಸಾಕಷ್ಟು ಹೊಸ ಸಿನಿಮಾದಲ್ಲಿ ಬ್ಯುಸಿಯಾಗಿರೋ ಮೊನ್ನೆ ಮೊನ್ನೆ ಬೇಗಂ ಅವತಾರದಲ್ಲಿ ಮೈ ತುಂಬ ಬಟ್ಟೆ ಧರಿಸಿ ಗಮನಸೆಳೆದಿದ್ದರು. ಆದರೆ ಈಗ ಅದಕ್ಕೆ ತದ್ವಿರುದ್ಧ ವಾಗಿ ಮೈ ಚಳಿ ಬಿಟ್ಟು ಬಿಕನಿ ತೊಟ್ಟು ಅಭಿಮಾನಿಗಳ ಎದೆಬಡಿತ ಏರುಪೇರಾಗುವಂತೆ ಮಾಡಿದ್ದಾರೆ. ಕಪ್ಪು ಬಿಕನಿಯಲ್ಲಿ ದೇಹದಂಡಿಸಿ ಅಂದ ಹೆಚ್ಚಿಸಿಕೊಂಡ ಸಮಂತಾರ ಶಿಲಾಬಾಲಿಕೆಯಂತ ಮೈಕಟ್ಟು ಅನಾವರಣಗೊಂಡಿದೆ.

ಸೋಷಿಯಲ್ ಮೀಡಿಯಾದಲ್ಲಿ ಸಮಂತಾ ( samantha ruth prabhu )ಹಂಚಿಕೊಂಡಿರೋ ಈ ಪೋಟೋಗೆ ಸಾವಿರಾರು ಕಮೆಂಟ್ಸ್ ಬಂದಿದ್ದು ಲಕ್ಷಾಂತರ ಜನರು ಲೈಕ್ಸ್ ಒತ್ತಿದ್ದಾರೆ. ಮೊದ ಮೊದಲು ಸಾರ್ವಜನಿಕ ಬದುಕಿನಿಂದ ಅಂತರ ಕಾಯ್ದುಕೊಂಡಿದ್ದ ಸಮಂತಾ ಅಕ್ಕಿನೇನಿ ಕುಟುಂಬದಿಂದ ಹೊರಬಂದ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದಾರೆ. ಮಾತ್ರವಲ್ಲ ತಮ್ಮ ಟೂರ್, ವರ್ಕೌಟ್ ಸೇರಿದಂತೆ ಎಲ್ಲ ಸಂದರ್ಭಗಳನ್ನೂ ಶೇರ್ ಮಾಡಿಕೊಳ್ತಿದ್ದಾರೆ.

ಈಗಲೂ ತಮ್ಮ ಹಾಟ್ ಹಾಟ್ ಬಿಕನಿ ಪೋಟೋವನ್ನು ಸಮಂತಾ ಸೋಷಿಯಲ್ ಮೀಡಿಯಾದಲ್ಲಿ ಶೇರ್‌ಮಾಡಿದ್ದಾರೆ. ಸದ್ಯ ಸಮಂತಾ ನಟನೆಯ ಶಾಕುಂತಲಂ ಸಿನಿಮಾ ರಿಲೀಸ್ ಗೆ ಸಿದ್ಧವಾಗಿದೆ. ಇದಾದ ಬಳಿಕ ಬಹುನೀರಿಕ್ಷಿತ ಪುಷ್ಪ ಸಿನಿಮಾದ ಸ್ಪೆಶಲ್ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗ್ತಿದೆ. ಸದ್ಯಕ್ಕಂತೂ ಸಮಂತಾ ಇನ್ ಸ್ಟಾಗ್ರಾಂನಲ್ಲಿ ಸಖತ್ ಹಾಟ್ ಪ್ಲೇಸ್ ಪಡೆದುಕೊಂಡಿದ್ದು 23.8 ಮಿಲಿಯನ್ ಇರೋ ಫ್ಯಾನ್ಸ್ ಸಂಖ್ಯೆ ದುಪ್ಪಟ್ಟಾಗೋ ನೀರಿಕ್ಷೆ ಇದೆ.
ಇದನ್ನೂ ಓದಿ : Kubra Sait : ನನ್ನನ್ನು ಚುಂಬಿಸಿದ ಬಳಿಕ ಕನ್ಯತ್ವ ಕಳೆದ : ಬೆಂಗಳೂರಿನ ಕರಾಳತೆ ಬಿಚ್ಚಿಟ್ಟ ನಟಿ ಕುಬ್ರಾ ಸೇಠ್
ಇದನ್ನೂ ಓದಿ : Megha Shetty : ಲಾಟರಿ ಹೊಡೆದ್ರು ಅನುಸಿರಿಮನೆ : ಪ್ಯಾನ್ ಇಂಡಿಯಾ ಮೂವಿಯಲ್ಲಿ ಮೇಘಾ ಶೆಟ್ಟಿ
samantha ruth prabhu Bikini Photoshoot