Megha Shetty : ಲಾಟರಿ ಹೊಡೆದ್ರು ಅನುಸಿರಿಮನೆ : ಪ್ಯಾನ್ ಇಂಡಿಯಾ ಮೂವಿಯಲ್ಲಿ ಮೇಘಾ ಶೆಟ್ಟಿ

ಕಿರುತೆರೆ ಇರಲಿ ಹಿರಿ ತೆರೆ ಇರಲಿ ಒಮ್ಮೆ ಸ್ಕ್ರೀನ್ ಗೆ ಬರೋ ಹಿರೋಯಿನ್ ಗಳಿಗೆ ಮತ್ತೆ ‌ಮತ್ತೆ ಸಿನಿಮಾ ಅವಕಾಶ ಸಿಗೋದು ಕಾಮನ್. ಆದರೆ ಕೆಲವರಿಗೆ ಮಾತ್ರ ಬ್ಯಾಕ್ ಟೂ ಬ್ಯಾಕ್ ಒಳ್ಳೊಳ್ಳೆ ಸಿನಿಮಾಗಳು ಸಿಗ್ತಾವೇ ಈ ಸಾಲಿಗೆ ಅನು ಸಿರಿಮನೆ ಅಲಿಯಾಸ್ ಮೇಘಾ ಶೆಟ್ಟಿ (Megha Shetty) ಮೊದಲಿಗರು. ಧಾರಾವಾಹಿ ಜೊತೆಯಲ್ಲೇ ಎರಡು ಮೂರು ಸಿನಿಮಾಗಳಿಗೆ ಸಹಿ ಹಾಕಿರುವ ಮೇಘಾ ಶೆಟ್ಟಿ ಈಗ ಮೊದಲ ಬಾರಿಗೆ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದು ಅವರ ಮೊದಲ ಪ್ಯಾನ್ ಇಂಡಿಯಾ ಪೋಸ್ಟರ್ ರಿಲೀಸ್ ಆಗಿದೆ.

ಜೊತೆ ಜೊತೆಯಲಿ ಸಿನಿಮಾ ದಿನಕ್ಕೊಂದು ತಿರುವು ಪಡೆಯುತ್ತಿದ್ದು ಅಭಿಮಾನಿಗಳು ಸಖತ್ ಟ್ವಿಸ್ಟ್ ನಿಂದ ಕೂಡಿದ ಈ ಧಾರಾವಾಹಿಗೆ ಮನಸೋತಿದ್ದಾರೆ. ಹೀಗಿರುವಾಗಲೇ ಜೊತೆ ಜೊತೆಯಲಿ ಸಿನಿಮಾದ ಜೀವಾಳ‌ ಎನ್ನಿಸಿರೋ ಅನುಸಿರಿಮನೆ ಅಲಿಯಾ ಮೇಘಾ ತಮ್ಮ ಅಭಿಮಾನಿಗಳಿಗೆ ಮತ್ತೊಂದು ಸಿಹಿಸುದ್ದಿ ನೀಡಿದ್ದಾರೆ. ಆಫ್ಟರ್ ಆಫರೇಶನ್ ಲಂಡನ್ ಕೆಫೆ ಎಂಬ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಮೇಘಾ ಶೆಟ್ಟಿ (Megha Shetty) ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೇಘಾ ಶೆಟ್ಟಿ ಇಂದು ರಿಲೀಸ್ ಆಗಿರೋ ಈ ಸಿನಿಮಾದ ಪೋಸ್ಟರ್ ಹಂಚಿಕೊಂಡಿದ್ದು ತಮ್ಮ ಪಾತ್ರದ ಬಗ್ಗೆ ಮಾತ್ರ ಯಾವುದೇ ಹಿಂಟ್ ನೀಡಿಲ್ಲ.

ಆಫ್ಟರ್ ಆಫರೇಶನ್ ಲಂಡನ್ ಕೆಫೆ ಸಿನಿಮಾಗೆ ಕವೀಶ್ ಶೆಟ್ಟಿ ನಾಯಕರಾಗಿದ್ದಾರೆ. ಅವರ ಹುಟ್ಟುಹಬ್ಬದ ಪ್ರಯುಕ್ತ ಸಿನಿಮಾದ ಮೊದಲ ಪೋಸ್ಟರ್ ರಿಲೀಸ್ ಮಾಡಲಾಗಿದೆ. ಇದೊಂದು ಆಕ್ಷ್ಯನ್, ಸಸ್ಪೆನ್ಸ್‌ ಥ್ರಿಲ್ಲರ್ ಚಿತ್ರ ಎಂಬುದು ಪೋಸ್ಟರ್ ನಿಂದಲೇ ಗೊತ್ತಾಗ್ತಿದ್ದು, ಕವೀಶ್ ಶೆಟ್ಟಿ ಗನ್ ಹಿಡಿದು ನಿಲ್ಲುವ ಮೂಲಕ ಮಾಸ್ ಲುಕ್ ನಲ್ಲಿ ಮಿಂಚಿದ್ದಾರೆ.

ಇನಿಯ, ನಾನು ನನ್ನ ಕನಸು,ರಾಜರಾಜೇಂದ್ರದಂತಹ ಸಿನಿಮಾಗಳನ್ನು ನಿರ್ದೇಶಿಸಿದ ಸಡಗರ‌ ರಾಘವೇಂದ್ರ ಅವರೇ ಲಂಡನ್ ಕೆಫೆ‌ ಸಿನಿಮಾಕ್ಕೆ ಡೈರೈಕ್ಷನ್ ಮಾಡ್ತಿದ್ದಾರೆ. ಕನ್ನಡ, ಮರಾಠಿ, ಹಿಂದಿ, ತಮಿಳು, ತೆಲುಗು ಹಾಗೂ ಮಲೆಯಾಳಂನಲ್ಲಿ ಚಿತ್ರ ಮೂಡಿ ಬರುತ್ತಿದೆ. ಈ ಸಿನಿಮಾದಲ್ಲಿ ಮೇಘಾ ಶೆಟ್ಟಿ ನಟಿಸುತ್ತಿರುವ ಸಂಗತಿ ಬಯಲಾಗುತ್ತಿದ್ದಂತೆ ಸೋಷಿಯಲ್ ಮೀಡಿಯಾದಲ್ಲಿ ಮೇಘಾ ಶೆಟ್ಟಿ ಫ್ಯಾನ್ಸ್ ಅವರಿಗೆ ಶುಭಹಾರೈಸುತ್ತಿದ್ದು, ಸಿನಿಮಾದಲ್ಲಿ ನಿಮ್ಮ‌ಪಾತ್ರದ ಬಗ್ಗೆ ಅಪ್ಡೇಟ್ ಮಾಹಿತಿ ಕೊಡಿ ಎಂದೆಲ್ಲ ಕೇಳ್ತಿದ್ದಾರೆ. ಆಫ್ಟರ್‌ ಆಫರೇಶನ್ ಲಂಡನ್ ಕೆಫೆ ಮಾತ್ರವಲ್ಲ, ಪ್ರತಿಭಾವಂತ ನಟಿ ಮೇಘಾ ಶೆಟ್ಟಿ ಕೈಯಲ್ಲಿ ಇನ್ನೂ ಹಲವು ಸಿನಿಮಾಗಳಿದ್ದು, ಡಾರ್ಲಿಂಗ್ ಕೃಷ್ಣ ಜೊತೆ ದಿಲ್ ಪಸಂದ್ ಸಿನಿಮಾದಲ್ಲೂ ನಟಿಸುತ್ತಿದ್ದಾರೆ.

ಇದನ್ನೂ ಓದಿ : Sophie Choudry : ಈಕೆಗೆ ಬೆಸ್ಟ್ ಬಟ್ಟೇ ಅಂದ್ರೇ ಬಿಕನಿಯಂತೆ : ಸೋಷಿಯಲ್‌ ಮೀಡಿಯಾದಲ್ಲಿ ಸೋಫಿಯಾ ರಂಗು

ಇದನ್ನೂ ಓದಿ : Kubra Sait : ನನ್ನನ್ನು ಚುಂಬಿಸಿದ ಬಳಿಕ ಕನ್ಯತ್ವ ಕಳೆದ : ಬೆಂಗಳೂರಿನ ಕರಾಳತೆ ಬಿಚ್ಚಿಟ್ಟ ನಟಿ ಕುಬ್ರಾ ಸೇಠ್

Jothe Jotheyali Megha Shetty Acting Pan India Movie

Comments are closed.