ಬುಧವಾರ, ಏಪ್ರಿಲ್ 30, 2025
HomeCinemaSamantha Ruth Prabhu : ಲಿಂಗಭೈರವಿ ದೇವಿ ಮೊರೆ ಹೋದ ಸಮಂತಾ: ಪೂಜೆ ಪೋಟೋ ವೈರಲ್

Samantha Ruth Prabhu : ಲಿಂಗಭೈರವಿ ದೇವಿ ಮೊರೆ ಹೋದ ಸಮಂತಾ: ಪೂಜೆ ಪೋಟೋ ವೈರಲ್

- Advertisement -

Samantha Ruth Prabhu : ಸಖತ್ ಬೋಲ್ಡ್ ಪಾತ್ರಗಳ ಮೂಲಕವೇ ಗಮನ ಸೆಳೆದಿದ್ದ ನಟಿ ಸಮಂತಾ ರುತ್ ಪ್ರಭು, ಒಂದಿಷ್ಟು ದಿನಗಳ ಕಾಲ ತಮ್ಮ ವೈಯಕ್ತಿಕ ಜೀವನದ ಕಾರಣಕ್ಕೆ ಸುದ್ದಿಯಲ್ಲಿದ್ದರು. ಆದರೆ ಇತ್ತೀಚಿಗೆ ಅನಾರೋಗ್ಯವೇ ಸಮಂತಾ ಅಭಿಮಾನಿಗಳ ಪಾಲಿಗೆ ದುಃಖದಾಯಕ ಸಂಗತಿಯಾಗಿತ್ತು. ಇದೆಲ್ಲವನ್ನು ದೂರ ಮಾಡಿಕೊಳ್ಳೋಕೆ ದೇವರ ಮೊರೆ ಹೋದ ಶಾಕುಂತಲಾ ಹೊಸ ಪೋಟೋವೊಂದನ್ನು ಅಪ್ಡೇಟ್ ಮಾಡಿದ್ದಾರೆ.

ಅಕ್ಕಿನೇನಿ ಕುಟುಂಬದಿಂದ ವೈವಾಹಿಕ ಬಂಧವನ್ನು ಮುರಿದುಕೊಂಡು ಹೊರಬಂದ ಸಮಂತಾ (Samantha Ruth Prabhu) ಬಳಿಕ ಬ್ಯಾಕ್ ಟೂ ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರು. ವರ್ಕೌಟ್ ಹಾಗೂ ಸಿನಿಮಾದ ಬೋಲ್ಡ್ ಪಾತ್ರಗಳ ಬಗ್ಗೆಯೂ ಸಮಂತಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಸದಾ ಅಪ್ಡೇಟ್ ನೀಡುತ್ತಿದ್ದರು. ಆಗಾಗ ಪಾಸಿಟಿವ್ ಕೋಟ್ ಗಳನ್ನು‌ ಹಂಚಿಕೊಳ್ತಿದ್ದ ಸಮಂತಾ ಹಾಲಿವುಡ್ ಸಿನಿಮಾದಲ್ಲೂ ಕೂಡ ಅವಕಾಶ ಪಡೆದುಕೊಂಡಿದ್ದರು. ಆದರೆ ಇದೆಲ್ಲದರ ಮಧ್ಯೆಯೇ ಸಮಂತಾ ಅಪರೂಪದ ಸ್ನಾಯುಸೆಳೆತದ ಸಮಸ್ಯೆಗೆ ತುತ್ತಾಗಿದ್ದರು. ಈ ವಿಚಾರವನ್ನು ಸ್ವತಃ ಸಮಂತಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಚಿಕಿತ್ಸೆ ಪಡೆಯುತ್ತಿದ್ದೇನೆ. ಈ ನೋವಿನ‌ ಕ್ಷಣಗಳನ್ನು ಗೆದ್ದು ಬರುತ್ತೇನೆ ಎಂದಿದ್ದರು.

ಇತ್ತೀಚಿಗೆ ಚಿಕಿತ್ಸೆಯಿಂದ ಚೇತರಿಸಿಕೊಂಡ ಸಮಂತಾ, ವರ್ಕೌಟ್ ಕೂಡ ಆರಂಭಿಸಿದ್ದರು. ಈಗ ಲಿಂಗಭೈರವಿ ದೇವಿಯನ್ನು ಆರಾಧಿಸುವ ಪೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮಾತ್ರವಲ್ಲ ಅದರೊಂದಿಗೆ ಪಾಸಿಟಿವ್ ವಾಕ್ಯಗಳನ್ನು ಹಂಚಿಕೊಂಡಿದ್ದಾರೆ. ಕೆಲವೊಮ್ಮೆ ಬದುಕಿನಲ್ಲಿ ಅತಿಯಾದ ಶಕ್ತಿ ಏನು ಬೇಕಾಗೋದಿಲ್ಲ. ನೀವು ಬಯಸಿದ್ದನ್ನು ಪಡೆಯಲು ನಂಬಿಕೆ ಇರಬೇಕಷ್ಟೇ. ನಂಬಿಕೆ ನಿಮಗೆ ಶಕ್ತಿಯನ್ನು ಕೊಡುತ್ತದೆ. ನಂಬಿಕೆ ನಿಮ್ಮನ್ನು ಶಾಂತವಾಗಿರಿಸಿತ್ತದೆ. ನಂಬಿಕೆಯೇ ನಿಮ್ಮ ಗುರುವಾಗುತ್ತದೆ. ಮತ್ತು ಅದೇ ನಿಮ್ಮ ಉತ್ತಮ ಸ್ನೇಹಿತನಾಗಿರುತ್ತದೆ. ಇದೇ ನಂಬಿಕೆಯೇ ನಿಮ್ಮನ್ನು ಸೂಪರ್ ಹ್ಯೂಮನ್ ಮಾಡುತ್ತದೆ ಎಂದಿದ್ದಾರೆ.

ಸಮಂತಾ ಈ ಆತ್ಮವಿಶ್ವಾಸದ ಮಾತು ಹಾಗೂ ಸೋಷಿಯಲ್ ಮೀಡಿಯಾ ಪೋಸ್ಟ್ ಸಖತ್ ವೈರಲ್ ಆಗಿದೆ. ಮಾತ್ರವಲ್ಲ ಸಮಂತಾಗೆ ಲಕ್ಷಾಂತರ ಅಭಿಮಾನಿಗಳು ಕಮೆಂಟ್ ಮೂಲಕ ಶುಭಹಾರೈಸಿದ್ದಾರೆ. ಇನ್ನೊಂದೆಡೆ ಸಮಂತಾ ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದವರಲ್ಲವೇ? ಅವರು ಹೇಗೆ ಮತ್ತು ಯಾಕೆ ಹಿಂದೂ ಧರ್ಮದ ದೇವರನ್ನು ಪೂಜಿಸಿದರು? ಎಂದೆಲ್ಲ ಕೆಲವರು ಪ್ರಶ್ನಿಸುತ್ತಿದ್ದಾರೆ. ಇದೇ ಮೊದಲಲ್ಲ ಈ ಹಿಂದೆಯೂ ಸಮಂತಾ, ದೇವಾಲಯಕ್ಕೆ ಭೇಟಿ ನೀಡಿ, ಪೂಜಿಸಿ ಅಚ್ಚರಿ ಮೂಡಿಸಿದ್ದರು. ಒಟ್ಟಿನಲ್ಲಿ ಸಮಂತಾ ಹೊಸ ಪೋಟೋ ಅಭಿಮಾನಿಗಳ ಖುಷಿ ಗೆ ಕಾರಣವಾಗಿದೆ.

ಇದನ್ನೂ ಓದಿ : Oscars 2023 : ಆಸ್ಕರ್‌ ಅವಾರ್ಡ್‌ನಲ್ಲಿ RRR ನಾಟು ನಾಟು ಹಾಡಿಗೆ ಹೆಜ್ಜೆ ಹಾಕಲಿದ್ದಾರೆ ನಟಿ ಲಾರೆನ್ ಗಾಟ್ಲೀಬ್

ಇದನ್ನೂ ಓದಿ : ನಟ ಗಣೇಶ್‌, ಪ್ರೀತಂ ಗುಬ್ಬಿ ಕಾಂಬಿನೇಷನ್‌ ‘ಬಾನ ದಾರಿಯಲ್ಲಿ’ಸಾಂಗ್‌ ರಿಲೀಸ್

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular