Dhruva Sarja : ಆರೋಗ್ಯಕ್ಕಾಗಿ ಆರ್ಯುವೇದ : ವೈರಲ್ ಆಯ್ತು ಧ್ರುವ ಸರ್ಜಾ ಜಲನೇತಿ ವೀಡಿಯೋ

Dhruva Sarja : ಸ್ಯಾಂಡಲ್ ವುಡ್ ನ ಪಕ್ಕಾ ಫ್ಯಾಮಿಲಿ ಮೆನ್ ಧ್ರುವ ಸರ್ಜಾ ವರ್ಕೌಟ್ ವಿಡಿಯೋಗಳ ಜೊತೆ ಆಗಾಗ ಫ್ಯಾಮಿಲಿ ಪೋಟೋನು ಹಂಚಿಕೊಂಡು ಸಂಭ್ರಮಿಸುತ್ತಾರೆ. ಈಗ ಧ್ರುವ ಸರ್ಜಾ (Dhruva Sarja) ತಮ್ಮ ಸೋಷಿಯಲ್ ಮೀಡಿಯಾ ದಲ್ಲಿ ಅಪರೂಪದ ವಿಡಿಯೋವೊಂದನ್ನು ಹಂಚಿಕೊಂಡು ಗಮನ ಸೆಳೆದಿದ್ದಾರೆ. ಅದೇನು ವಿಡಿಯೋ ಇಲ್ಲಿದೆ ಎಕ್ಸಕ್ಲೂಸಿವ್ ಮಾಹಿತಿ.

ಸ್ಯಾಂಡಲ್ ವುಡ್ ಇರಲಿ, ಬಾಲಿವುಡ್ ಇರಲಿ ನಟ-ನಟಿಯರು ಅಂದ್ರೇ ಸಹಜವಾಗಿಯೇ ವರ್ಕೌಟ್ ಹಾಗೂ ಜಿಮ್ ಮೂಲಕ ಮೈತೂಕ ಕರಗಿಸಿಕೊಳ್ಳೋದು, ಹೆಚ್ಚಿಸಿಕೊಳ್ಳೋದು ಮಾಡ್ತಾರೆ. ಆದರೆ ಸನಾತನವಾದ ಯೋಗ ಹಾಗೂ ಆರ್ಯುವೇದಗಳ ಮೊರೆ ಹೋಗೋದು ಅಪರೂಪ. ಆದರೆ ಸ್ಯಾಂಡಲ್ ವುಡ್ ನ ಆಕ್ಷ್ಯನ್ ಪ್ರಿನ್ಸ್ ಧ್ರುವ ಸರ್ಜಾ ಮಾತ್ರ ಜಲನೇತಿ ಅಭ್ಯಾಸ ಮಾಡೋ ಮೂಲಕ ಪುರಾತನ ಆರ್ಯುವೇದ ಪದ್ಧತಿಯ ಮಹತ್ವ ಸಾರಿದ್ದಾರೆ.

ಯೋಗದಲ್ಲಿ ಅತ್ಯಂತ ಕ್ಲಿಷ್ಟಕರ ಹಾಗೂ ಅಷ್ಟೇ ಆರೋಗ್ಯಕರವಾದ ಜಲನೇತಿಯನ್ನು ಪ್ರಯೋಗ ಮಾಡುವುದು ಅಪಾಯಕಾರಿ. ಅಷ್ಟೇ ಅನುಭವ, ಸೂಕ್ತ ಗುರುವಿನ ಮಾರ್ಗದರ್ಶನ ಹಾಗೂ ಅಭ್ಯಾಸ ಬೇಕು. ಅಂತಹ ಜಲನೇತಿಯನ್ನು ಅತ್ಯಂತ ಸಹಜವಾಗಿ ಮಾಡುವ ನಟ ಧ್ರುವ ಸರ್ಜಾ ವಿಡಿಯೋವನ್ನು ತಮ್ಮ ಸೋಷಿಯಲ್ ಮೀಡಿಯಾ ದಲ್ಲಿ ಹಂಚಿಕೊಂಡಿದ್ದಾರೆ.

ದೇಹದಲ್ಲಿ ಮೇದಸ್ ಮತ್ತು ಕಫ ಅಧಿಕವಾಗಿದ್ದಾಗ ಧೌತಿ, ಬಸ್ತಿ, ನೇತಿ, ತ್ರಾಟಕ, ನೌಲಿ ಮತ್ತು ಕಪಾಲ ಭಾತಿಯನ್ನು ಅಭ್ಯಾಸ ಮಾಡಬಹುದು ಎಂದು ಆರ್ಯುವೇದ ಹೇಳುತ್ತದೆ. ಇವುಗಳನ್ನು ಈ ಜಲನೇತಿ ಕಫದ ಅಸ್ವಸ್ಥತೆಯನ್ನು ನಿವಾರಿಸುತ್ತದೆ. ಅಲ್ಲದೇ ಸೈನಸ್, ಅಸ್ತಮಾ ಸಮಸ್ಯೆಯನ್ನು ನಿವಾರಿಸುತ್ತದೆ. ಈ ಜಲನೇತಿಯನ್ನು ಧ್ರುವ ಸರ್ಜಾ ಹಲವು ವರ್ಷಗಳಿಂದ ಅಭ್ಯಾಸ ಮಾಡುತ್ತಿದ್ದು, ಆಗಾಗ ತಮ್ಮ ಆರೋಗ್ಯ ವನ್ನು ಕಾಪಾಡಲು ಜಲನೇತಿಯನ್ನು ಪ್ರಯೋಗಿಸುತ್ತಿರುತ್ತಾರಂತೆ. ಧ್ರುವ ಸರ್ಜಾ ಈ ವೀಡಿಯೋ ಸಖತ್ ವೈರಲ್ ಆಗಿದ್ದು, ಧ್ರುವ ಸರ್ಜಾ ಅಭಿಮಾನಿಗಳು ವಿಡಿಯೋ ನೋಡಿ ಖುಷಿ ಪಡುತ್ತಿದ್ದಾರೆ.

ಈ ಜಲನೇತಿಯನ್ನು ಯಾರು ಎಲ್ಲಿಬೇಕಾದರೂ ಅಭ್ಯಾಸ ಮಾಡಬಾರದು.ಅಧಿಕ ರಕ್ತದೊತ್ತಡ,ಸೈನಸ್ ಅಥವಾ ಮೈಗ್ರೇನ್ ಸಮಸ್ಯೆ ಇರೋರು, ಗರ್ಭಿಣಿಯರು, ಶಸ್ತ್ರ ಚಿಕಿತ್ಸೆಯಾದ ಮಹಿಳೆಯರು, ಮುಟ್ಟಿನ ಸಮಯದಲ್ಲಿ ಅಭ್ಯಾಸ ಮಾಡಬಾರದು. ಈಗ ಸದ್ಯ ಧ್ರುವ ಸರ್ಜಾ ಮಾರ್ಟಿನ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗೆ ರಿಲೀಸ್ ಆದ ಮಾರ್ಟಿನ್ ಸಿನಿಮಾದ ಟೀಸರ್ ಸಂಚಲನ ಮೂಡಿಸಿದ್ದು, ಸಿನಿಮಾ ಸದ್ಯದಲ್ಲೇ ರಿಲೀಸ್ ಆಗಲಿದೆ. ಅಲ್ಲದೇ ಸಿನಿಮಾ ಯಶಸ್ಸು ಕಾಣುವ ಭರವಸೆ ಮೂಡಿಸಿದೆ.

ಇದನ್ನೂ ಓದಿ : “ಕಬ್ಜ” ಸಿನಿಮಾ ಟಿಕೆಟ್‌ ಬುಕಿಂಗ್‌ ಎಲ್ಲೆಲ್ಲಿ ಲಭ್ಯ ಎಂದು ಮಾಹಿತಿ ಕೊಟ್ಟ ಆರ್‌ ಚಂದ್ರು

ಇದನ್ನೂ ಓದಿ : Samantha Ruth Prabhu : ಲಿಂಗಭೈರವಿ ದೇವಿ ಮೊರೆ ಹೋದ ಸಮಂತಾ: ಪೂಜೆ ಪೋಟೋ ವೈರಲ್

Comments are closed.