ಮಂಗಳವಾರ, ಏಪ್ರಿಲ್ 29, 2025
HomeCinemaPushpa-2 Samantha : ಪುಷ್ಪ-2 ಗೆ ಸಮಂತಾ ಸ್ಪೆಷಲ್ ಎಂಟ್ರಿ : ಸುಕುಮಾರನ್ ಹೇಳಿದ್ದೇನು ಗೊತ್ತಾ

Pushpa-2 Samantha : ಪುಷ್ಪ-2 ಗೆ ಸಮಂತಾ ಸ್ಪೆಷಲ್ ಎಂಟ್ರಿ : ಸುಕುಮಾರನ್ ಹೇಳಿದ್ದೇನು ಗೊತ್ತಾ

- Advertisement -

ಒಂದೇ ಹಾಡಿನಿಂದ ವೃತ್ತಿಬದುಕಿನ ಉತ್ತುಂಗಕ್ಕೇರಿದ ಬೆಡಗಿ ಸಮಂತಾ ಈಗ ಸಖತ್ ಬ್ಯೂಸಿ ಆರ್ಟಿಸ್ಟ್. ಸಿನೆಮಾದಿಂದ ಆರಂಭಿಸಿ ಜಾಹೀರಾತಿನ ತನಕ ಎಲ್ಲದರಲ್ಲೂ ಸಖತ್ ಬ್ಯುಸಿಯಾಗಿರೋ ಸಮಂತಾ ಸದ್ಯದಲ್ಲೇ ಮತ್ತೆ ಪುಷ್ಪ ತಂಡ ಸೇರ್ಪಡೆಗೊಳ್ಳಲಿದ್ದಾರಂತೆ.‌ ಹೌದು ಟಾಲಿವುಡ್ ನ ಮೋಸ್ಟ್ ಸಕ್ಸಸ್ ಫುಲ್ ಸಿನಿಮಾ ಪುಷ್ಪಾ (Pushpa-2 ) ಸಮಂತಾ (Samantha ) ಕೆರಿಯರ್ ಗೆ ಹೊಸ ವೇಗಕೊಟ್ಟಿದೆ. ಪುಷ್ಪ ಸಿನಿಮಾದಲ್ಲಿ ನಟಿ ಸಮಂತಾ ಊಂ ಅಂಟಾವಾ ಮಾವಾ ಉಹೂಂ ಅಂಟಾವಾ ಮಾವ ಅಂತ ಸೊಂಟ ಬಳುಕಿಸಿದ್ದೇ ತಡ ಟಾಲಿವುಡ್ ದಾಟಿ ಬಾಲಿವುಡ್ ತನಕ ಎಲ್ಲರೂ ಸಮಂತಾ ಅಂದ ಚೆಂದ ಹಾಗೂ ಕುಣಿತಕ್ಕೆ ಮರುಳಾಗಿ ಹೋಗಿದ್ದರು.

ಹೀಗಾಗಿ ಇದ್ದಕ್ಕಿದ್ದಂತೆ ಸಮಂತಾ ನ್ಯಾಶನಲ್ ಮಟ್ಟಕ್ಕೆ ಪಡ್ಡೆಗಳ ನಿದ್ದೆಗೆಡಿಸಿ ಮನೆಮಾತಾದ್ರು. ಈಗ ಬರ್ತಿರೋ ಲೆಟೇಸ್ಟ್ ಮಾಹಿತಿ ಪ್ರಕಾರ ಸಮಂತಾ ಸಿನಿ ಜರ್ನಿ ಪುಷ್ಪ ಸಿಕ್ವೆನ್ಸ್ ಟೂದಲ್ಲೂ ಮುಂದುವರೆಯಲಿದೆಯಂತೆ. ಸುಕುಮಾರನ್ ಹಾಗೂ ಅಲ್ಲೂ ಅರ್ಜುನ್ ಕಾಮಿನೇಶನ್ ನ ಪುಷ್ಪ-2 ದಲ್ಲೂ ಸಮಂತಾ ನಟಿಸಲಿದ್ದಾರಂತೆ.

ಆದರೆ ಈ ಬಾರಿ ಸಮಂತಾ ಮತ್ತೆ ಐಟಂ ಸಾಂಗ್ ನಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಬದಲಾಗಿ ವಿಶೇಷ ಪಾತ್ರವೊಂದಕ್ಕೆ ಸಮಂತಾ ಜೀವ ತುಂಬಲಿದ್ದಾರಂತೆ. ಪುಷ್ಪ ಸಿನಿಮಾದಲ್ಲಿ ಐಟಂ ಸಾಂಗ್ ನಲ್ಲಿ ಸಮಂತಾ ಫರ್ಪರ್ಮೆನ್ಸ್ ನೋಡಿರೋ ನಿರ್ದೇಶಕ ಸುಕುಮಾರನ್ ಪುಷ್ಪ ಎರಡನೇ ಭಾಗದಲ್ಲಿ ಸಮಂತಾಗಾಗಿಯೇ ಸ್ಪೆಶಲ್ ಎಂಟ್ರಿ ಪಾತ್ರವೊಂದನ್ನು ಸೃಷ್ಟಿಸಿದ್ದಾರಂತೆ‌.

ಸಿನಿಮಾದ ನಾಯಕ ಅಲ್ಲೂ ಅರ್ಜುನ್ ಪಾತ್ರಕ್ಕೆ ಜೀವತುಂಬಿ ಸಿನಿಮಾಕ್ಕೊಂದು ಟರ್ನಿಂಗ್ ಪಾಯಿಂಟ್ ಕೊಡೋವಂತ ಪಾತ್ರದಲ್ಲಿ ಸಮಂತಾ ನಟಿಸಿದ್ದಾರಂತೆ. ಹೀಗಾಗಿ ಪುಷ್ಪ ಸಿನಿಮಾದಲ್ಲಿ ಸಮಂತಾ ನಟನೆ ನೋಡಿ ಮೆಚ್ಚಿದ ಅಭಿಮಾನಿಗಳು ಪುಷ್ಪ ಸಿಕ್ವೆನ್ಸ್ 2 ದಲ್ಲೂ ಸಮಂತಾ ನಟನೆ ನೋಡಿ ಸಂಭ್ರಮಿಸಲು ಅವಕಾಶ ಸಿಕ್ಕಂತಾಗಿದೆ.

ಪುಷ್ಪ ೨ ಮಾತ್ರವಲ್ಲದೇ ಸದ್ಯ ಶಾಕುಂತಲಂ ಸೇರಿದಂತೆ ಹಲವು ಸಿನಿಮಾ ಸಮಂತಾ ಕೈಯಲ್ಲಿದೆ. ಕೆಲ ತಿಂಗಳ ಹಿಂದೆಯಷ್ಟೇ ವಿವಾಹ ವಿಚ್ಚೇಧನ ಪಡೆದು ಅಕ್ಕಿನೇನಿ ಕುಟುಂಬದಿಂದ ಹೊರಬಂದ ಸಮಂತಾ ಆರಂಭದಲ್ಲಿ ಎಲ್ಲದರಿಂದ ಅಂತರ ಕಾಯ್ದುಕೊಂಡಿದ್ದರು. ಆದರೆ ಬಳಿಕ ಚೇತರಿಸಿಕೊಂಡ ಸಮಂತಾ ತಮ್ಮ ಕೆರಿಯರ್ ಹಾಗೂ ವೈಯಕ್ತಿಕ ಬದುಕಿನ ಬಗ್ಗೆ ಹೆಚ್ಚು ಗಮನ ನೀಡುತ್ತಿದ್ದು ಟ್ರಿಪ್, ಯೋಗ ವ್ಯಾಯಾಮದಲ್ಲಿ ತೊಡಗಿಸಿಕೊಂಡಿದ್ದಾರೆ.

ಇದನ್ನೂ ಓದಿ : ಕಮಲ್ ಸಿನಿಮಾ ಮುಗೀತು! ನಾಯಕಿ ಯಾರು ಅನ್ನೋದು ಗುಪ್ತ್ ಗುಪ್ತ್

ಇದನ್ನೂ ಓದಿ : Aamir Khan : ಕಳೆದ ವರ್ಷ ಚಿತ್ರರಂಗ ತೊರೆಯುವ ತೀರ್ಮಾನ ಮಾಡಿದ್ದೆ! ಮನದಾಳದ ಮಾತು ಬಿಚ್ಚಿಟ್ಟ ಬಾಲಿವುಡ್‌ ನಟ ಅಮೀರ್‌ ಖಾನ್‌

Samantha Ruth Prabhu Special Entry to Pushpa-2 Sukumaran knows what she said

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular