ಭಾನುವಾರ, ಜೂನ್ 15, 2025
HomeCinemaSamantha treatment: ಮತ್ತಷ್ಟು ಬಿಗಡಾಯಿಸಿದೆಯಾ ನಟಿ ಸಮಂತಾ ಕಾಯಿಲೆ..? ಸೌತ್ ಕೊರಿಯಾದಲ್ಲಿ ಹೆಚ್ಚಿನ ಚಿಕಿತ್ಸೆ..

Samantha treatment: ಮತ್ತಷ್ಟು ಬಿಗಡಾಯಿಸಿದೆಯಾ ನಟಿ ಸಮಂತಾ ಕಾಯಿಲೆ..? ಸೌತ್ ಕೊರಿಯಾದಲ್ಲಿ ಹೆಚ್ಚಿನ ಚಿಕಿತ್ಸೆ..

- Advertisement -

ಕಳೆದ ಕೆಲ ದಿನಗಳಿಂದ ಮಯೋಸಿಟಿಸ್ ಕಾಯಿಲೆಯಿಂದ ಬಳಲುತ್ತಿರುವ ನಟಿ ಸಮಂತಾ (Samantha treatment) ಅವರ ಆರೋಗ್ಯ ಮತ್ತಷ್ಟು ಹದಗೆಟ್ಟಿದೆ ಎಂದು ಹೇಳಲಾಗುತ್ತಿದೆ. ಈ ಕಾರಣದಿಂದಾಗಿ ಅವರು ಹೆಚ್ಚಿನ ಚಿಕಿತ್ಸೆಗಾಗಿ ದಕ್ಷಿಣ ಕೊರಿಯಾಗೆ ತೆರಳಿದ್ದಾರಂತೆ.

ಕಳೆದ ಕೆಲ ದಿನಗಳ ಹಿಂದೆ ಸಮಂತಾ ಅವರಿಗೆ ಮಯೋಸಿಟಿಸ್ ಕಾಯಿಲೆ ಇರುವ ಬಗ್ಗೆ ಪ್ರಚಾರವಾಗಿತ್ತು. ನಟಿ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದೇ ಮೊದಲು ಸುದ್ದಿ ಆಗಿತ್ತು. ಅದನ್ನು ಅವರ ಮ್ಯಾನೇಜರ್ ಅಲ್ಲಗಳೆದಿದ್ದರು. ಬಳಿಕ ಕೆಲ ಸಮಯದ ನಂತರ ಸಮಂತಾ ಅವರೇ ಖುದ್ದು ತಮಗಿರುವ ಮಯೋಸಿಟಿಸ್ ಕಾಯಿಲೆ ಬಗ್ಗೆ ಇನ್ ಸ್ಟಾಗ್ರಾಂನಲ್ಲಿ ನೋವನ್ನು ಹಂಚಿಕೊಂಡಿದ್ದರು. ತಾವು ಚಿಕಿತ್ಸೆ ಪಡೆಯುತ್ತಿರುವ ಬಗ್ಗೆ ಫೋಟೋ ಕೂಡಾ ಅಪ್ ಲೋಡ್ ಮಾಡಿದ್ದರು.

ಇದನ್ನೂ ಓದಿ: Abhishek Ambarish wedding : ಅಭಿಷೇಕ್‌ ಅಂಬರೀಶ್‌ ಮದುವೆ ಫಿಕ್ಸ್‌ : ಹುಡುಗಿ ಯಾರು? ಮದುವೆ ಯಾವಾಗ ಗೊತ್ತಾ ?

ಇದಾದ ಬಳಿಕ ಅವರು ಯಶೋದಾ ಸಿನಿಮಾದ ಕೆಲಸದಲ್ಲಿ ತೊಡಗಿಕೊಂಡರು. ಕೈಗೆ ಡ್ರಿಪ್ಸ್ ಹಾಕಿಕೊಂಡೇ ಯಶೋದಾ ಸಿನಿಮಾದ ಡಬ್ಬಿಂಗ್ ಮುಗಿಸಿದ್ದರು. ಆ ಸಿನಿಮಾ ಕೂಡಾ ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಗಳಿಕೆ ಕಂಡಿತ್ತು. ಸಿನಿಮಾ ರಿಲೀಸ್ ಆಗುತ್ತಿದ್ದಂತೆ ಅವರ ಆರೋಗ್ಯದ ಬಗ್ಗೆ ಮತ್ತೆ ಚರ್ಚೆಗಳು ಶುರುವಾದವು. ಈ ಬೆನ್ನಲ್ಲೇ ಮತ್ತೆ ಅವರ ಮ್ಯಾನೇಜರ್ ನಟಿ ಆರೋಗ್ಯವಾಗಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದರು. ಅಲ್ಲದೇ ಸಮಂತಾ ಕೂಡಾ ತಾನು ರೋಗದ ವಿರುದ್ಧ ಹೋರಾಡುತ್ತಿರುವುದಾಗಿ ಹಾಗೂ ಶೀಘ್ರದಲ್ಲೇ ಗುಣಮುಖರಾಗುವ ವಿಶ್ವಾಸವನ್ನು ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತಪಡಿಸಿದ್ದರು. ಆದರೆ ಸಿನಿಮಾ ರಿಲೀಸ್ ಆದ ಸಂದರ್ಭದಲ್ಲಿ ನಟಿ ಸಮಂತಾ ಸುದ್ದಿಗೋಷ್ಠಿಯಲ್ಲೂ ಕಾಣಿಸಿಕೊಂಡಿರಲಿಲ್ಲ. ಕ್ಯಾಮೆರಾ ಮುಂದೆಯೂ ಬಂದಿರಲಿಲ್ಲ. ಇದು ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿತ್ತು.

ಮೊದಲಿಗೆ ನಟಿ ಅಮೆರಿಕಾದಲ್ಲಿ ಚಿಕಿತ್ಸೆ ಪಡೆದರು. ಅಲ್ಲಿಂದ ಮರಳಿ ಭಾರತದಲ್ಲಿ ಆಯುರ್ವೇದ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ ಇಲ್ಲಿನ ಚಿಕಿತ್ಸೆಯೂ ಫಲಕಾರಿಯಾಗದ ಹಿನ್ನೆಲೆ ದಕ್ಷಿಣ ಕೊರಿಯಾಗೆ ತೆರಳಿದ್ದಾರೆ. ಅಲ್ಲಿಯೇ ಹೆಚ್ಚಿನ ಚಿಕಿತ್ಸೆಯನ್ನು ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ನಟಿ ಸಮಂತಾ ಕಡೆಯಿಂದ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ.

ಇದನ್ನೂ ಓದಿ: Kriti who dated Prabhas : ಪ್ರಭಾಸ್ ಜೊತೆ ಡೇಟಿಂಗ್ : ವದಂತಿ ಬಗ್ಗೆ ಮೌನ ಮುರಿದ ಕೃತಿ ಸನೋನ್

Samantha treatment: Actress Samantha Ruth Prabhu Headed To South Korea For Advance Myositis Treatment

RELATED ARTICLES

Most Popular