Fire accident-6 died: ಭೀಕರ ಅಗ್ನಿ ದುರಂತ: 4 ಮಕ್ಕಳು ಸೇರಿ 6 ಮಂದಿ ಸಜೀವ ದಹನ

ಉತ್ತರ ಪ್ರದೇಶ: (Fire accident-6 died) ಕಟ್ಟಡವೊಂದರಲ್ಲಿ ಬೆಂಕಿ ಅವಘಡ ಸಂಭವಿಸಿದ ಕಾರಣ ನಾಲ್ವರು ಮಕ್ಕಳು ಸೇರಿ ಆರು ಮಂದಿ ಸಜೀವ ದಹನವಾಗಿದ್ದು, ಮೂವರು ಗಾಯಗೊಂಡಿರುವ ಘಟನೆ ಉತ್ತರಪ್ರದೇಶದ ಫಿರೋಜಾಬಾದ್‌ ನಲ್ಲಿ ನಲ್ಲಿ ಮಂಗಳವಾರ ಸಂಜೆ ನಡೆದಿದೆ. ಘಟನೆಯಲ್ಲಿ ಗಾಯಗೊಂಡಿರುವವರನ್ನು ರಕ್ಷಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮನೆಯ ಕೆಳಭಾಗದಲ್ಲಿ ಎಲೆಕ್ಟ್ರಾನಿಕ್‌ ವಸ್ತುಗಳ ಘಟಕವೊಂದಿದ್ದು, ಅದರಲ್ಲಿ ಬೆಂಕಿ (Fire accident-6 died) ಹೊತ್ತಿಕೊಂಡಿದೆ. ನಂತರದಲ್ಲಿ ಮೇಲಿದ್ದ ಮನೆಗೂ ಬೆಂಕಿ ವ್ಯಾಪಿಸಿದೆ. ಬೆಂಕಿಯಿಂದ ದಟ್ಟ ಹೊಗೆ ವ್ಯಾಪಿಸಿಕೊಂಡಿದ್ದ ಪರಿಣಾಮ ಮನೆಮಂದಿಗಳಿಗೆ ಮನೆಯಿಂದ ಹೊರಬರಲಾಗದೇ ಬೆಂಕಿಗೆ ಸಿಲುಕಿ ಸಜೀವ ದಹನವಾಗಿದ್ದಾರೆ ಎಂದು ಫಿರೋಜಾಬಾದ್‌ ನ ಪೊಲೀಸ್‌ ವರಿಷ್ಠಾದಿಕಾರಿ ಆಶಿಶ್‌ ತಿವಾರಿ ತಿಳಿಸಿದ್ದಾರೆ.

ಘಟನೆಯಲ್ಲಿ ಮೂವರು ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ನಡೆದ ಸ್ಥಳಕ್ಕೆ ಹದಿನೆಂಟು ಅಗ್ನಿಶಾಮಕ ದಳಗಳು ಧಾವಿಸಿದ್ದು, ಸತತ ಎರಡೂವರೆ ಘಂಟೆಗಳ ಪ್ರಯತ್ನದ ನಂತರ ಬೆಂಕಿ ಹತೋಟಿಗೆ ಬಂದಿದೆ. ನಂತರದಲ್ಲಿ ಕಟ್ಟಡದಲ್ಲಿದ್ದ ಮೃತದೇಹಗಳನ್ನು ಹೊರ ತೆಗೆಯಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ : Vikram Kirloskar: ಟೊಯೋಟ ಕಿರ್ಲೋಸ್ಕರ್‌ ಮೋಟಾರ್‌ ಉಪಾಧ್ಯಕ್ಷ ವಿಕ್ರಮ್‌ ಕಿರ್ಲೋಸ್ಕರ್‌ ನಿಧನ

ಇದನ್ನೂ ಓದಿ : Kumble Sundar Rao: ಹಿರಿಯ ಯಕ್ಷಗಾನ ಕಲಾವಿದ, ಮಾಜಿ ಶಾಸಕ ಕುಂಬ್ಳೆ ಸುಂದರ್‌ ರಾವ್‌ ವಿಧಿವಶ

ಮೇಲ್ನೋಟಕ್ಕೆ ಇದು ಶಾರ್ಟ್‌ ಸರ್ಕ್ಯೂಟ್ ನಿಂದ ಸಂಭವಿಸಿರಬಹುದು, ಸಮಗ್ರ ತನಿಖೆಯ ಬಳಿಕವಷ್ಟೇ ಸ್ಪಷ್ಟ ಮಾಹಿತಿಗಳು ತಿಳಿಯುತ್ತದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನೂ ಈ ಘಟನೆಯ ಕುರಿತು ಫರೋಜಾಬಾದ್‌ ನ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿಲಾಗಿದೆ.

(Fire accident-6 died) Due to a fire accident in a building, six people including four children were burnt alive and three were injured in the incident which took place on Tuesday evening in Firozabad, Uttar Pradesh. Officials said that those injured in the incident are being rescued and treated.

Comments are closed.