ಸೋಮವಾರ, ಏಪ್ರಿಲ್ 28, 2025
HomeCinemaಸಮನ್ವಿ ಸಾವಿನ ಶೋಕದಲ್ಲಿದ್ದ ಕುಟುಂಬಕ್ಕೆ ಸಿಕ್ಕಿತು ಸಮಾಧಾನ: ಗಂಡು ಮಗುವಿನ ತಾಯಿಯಾದ ಅಮೃತಾ ರೂಪೇಶ್

ಸಮನ್ವಿ ಸಾವಿನ ಶೋಕದಲ್ಲಿದ್ದ ಕುಟುಂಬಕ್ಕೆ ಸಿಕ್ಕಿತು ಸಮಾಧಾನ: ಗಂಡು ಮಗುವಿನ ತಾಯಿಯಾದ ಅಮೃತಾ ರೂಪೇಶ್

- Advertisement -

ಸುಂದರವಾದ ಅನುಭೂತಿಯೊಂದಕ್ಕೆ ತೆರೆದುಕೊಳ್ಳುತ್ತಾ, ಎರಡನೇ ತಾಯ್ತನವನ್ನು ಸ್ವಾಗತಿಸಲು ಸಜ್ಜಾಗುತ್ತಾ, ಚಿಕ್ಕವಯಸ್ಸಿನಲ್ಲೇ ಮಗಳ ಜನಪ್ರಿಯತೆ ನೋಡುತ್ತಾ ಸಂಭ್ರಮಿಸುತ್ತಿದ್ದ ಕಿರುತೆರೆ‌ ನಟಿ ಅಮೃತಾ ರೂಪೇಶ್ (Samanvi Mother Amrutha Roopesh) ಬದುಕಿನಲ್ಲಿ ನಡೆದ ಆಘಾತ ಕರಾಳತೆಯನ್ನೇ ತುಂಬಿತ್ತು. ಈಗ ಆ ಕತ್ತಲೆಯಲ್ಲಿ ಬೆಳಕು ಮೂಡಿಸುವಂತೆ ನಟಿ ಅಮೃತಾ ಮತ್ತೊಮ್ಮೆ ತಾಯಿಯಾಗಿದ್ದು, ಮುದ್ದಾದ ಗಂಡುಮಗುವೊಂದು ಅಮೃತಾ ರೂಪೇಶ್ ಮಡಿಲೇರಿದೆ.

ಅಮೃತಾ ರೂಪೇಶ್ ತಮ್ಮ‌ ಮೊದಲ ಮಗುವನ್ನು ಕಳೆದುಕೊಂಡಿದ್ದರು. ಎರಡನೇ ಮಗಳು ಸಮನ್ವಿ ಅವರ ಎಲ್ಲ ನೋವುಗಳಿಗೆ ಉತ್ತರವಾಗಿದ್ದಳು. ಕಿರುತೆರೆಯ ನಮ್ಮಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮದ ಮೂಲಕ ಕರುನಾಡಿನ ಮನೆಮಾತಾಗಿದ್ದಳು. ಆದರೆ ದ್ವಿಚಕ್ರವಾಹನ ಅಪಘಾತದಲ್ಲ ಸಮನ್ವಿ ಇನ್ನೆಂದೂ ಬಾರದ ಲೋಕಕ್ಕೆ ತೆರಳಿದ್ದಳು. ಈ ಘಟನೆ ಅಮೃತಾ ರೂಪೇಶ್ ಅವರ ಬದುಕಿನಲ್ಲಿ ಕತ್ತಲೆ ಮೂಡಿಸಿತ್ತು.‌ ಸಮನ್ವಿ ಸಾಯುವಾಗ ಅಮೃತಾ ಎರಡು ತಿಂಗಳ ಗರ್ಭಿಣಿ ಯಾಗಿದ್ದು, ಈಗ ಸಮನ್ವಿ ಸಾವಿನ ಏಳು ತಿಂಗಳ ಬಳಿಕ ಅಮೃತಾ ಮುದ್ದಾದ ಗಂಡುಮಗುವಿಗೆ ಜನ್ಮನೀಡಿದ್ದಾರೆ.

ಈ ವಿಚಾರವನ್ನು ಸ್ವತಃ ಅಮೃತಾ ರೂಪೇಶ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ‌ ಹಂಚಿಕೊಂಡಿದ್ದಾರೆ. ನಮ್ಮ ಕಷ್ಟದ ಸಮಯದಲ್ಲಿ ನಿಮ್ಮೆಲ್ಲರ ಸಹಾಯ ಹಾಗೂ ಸಾಂತ್ವನಕ್ಕೆ ಧನ್ಯವಾದಗಳು. ಈಗ ಬದುಕು ಮತ್ತೊಂದು ಮಗ್ಗುಲಿಗೆ ಹೊರಳಿದೆ. ನಿಮ್ಮೆಲ್ಲರ ಹಾರೈಕೆಯಿಂದ ನಾನು ಹಾಗೂ ರೂಪೇಶ್ ಗಂಡುಮಗುವಿನ ಪೋಷಕರಾಗಿದ್ದೇವೆ ಎಂದಿದ್ದಾರೆ.

ಇನ್ನು ಅಮೃತಾ ಹಂಚಿಕೊಂಡ ಈ ಸುದ್ದಿಗೆ ಸಾವಿರಾರು ಲೈಕ್ಸ್ ಬಂದಿದ್ದು, ನೂರಾರು ಜನರು ಅಮೃತಾಗೆ ಶುಭಹಾರೈಸಿದ್ದಾರೆ. ಖ್ಯಾತ ಹರಿಕಥೆ ಕಲಾವಿದರಾದ ಗುರುರಾಜ್ ನಾಯ್ಡು ಅವರ ಮೊಮ್ಮಗಳಾದ ಅಮೃತಾ ನಾಯ್ಡು ಹರಿಕಥೆ ಕಲಾವಿದೆಯಾಗಿಯೂ ಖ್ಯಾತಿ ಗಳಿಸಿದ್ದರು. ಅಮೃತಾ ತಾಯಿ ಶೋಭಾ ನಾಯ್ಡು ಕೂಡ ಹರಿಕಥೆ ಕಲಾವಿದೆ.

ಕನ್ನಡದ ಹಲವು ಸಿನಿಮಾ ಹಾಗೂ ಕಿರುತೆರೆಯ ಹಲವು ಸೀರಿಯಲ್ ಗಳಲ್ಲಿ ನಟಿಸಿ ಸೈ ಎನ್ನಿಸಿಕೊಂಡಿರುವ ಅಮೃತಾ ರೂಪೇಶ್ ಕನ್ನಡ ಕಿರುತೆರೆಯ ನಮ್ಮಮ್ಮ ಸೂಪರ್ ಸ್ಟಾರ್ ಎಂಬ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಗಳ ಜೊತೆ ತಮ್ಮ ಪ್ರತಿಭೆ ಪ್ರದರ್ಶಿಸಿದ್ದರು. ಆದರೆ ಈ ಕಾರ್ಯಕ್ರಮ ನಡೆದ ಕೆಲವೇ ದಿನಗಳಲ್ಲಿ ರಸ್ತೆ ಅಪಘಾತದಲ್ಲಿ ಸಮನ್ವಿ ಸಾವನ್ನಪ್ಪಿದ್ದರು. ಈಗ ಮತ್ತೊಮ್ಮೆ ಅಮೃತಾ ಬದುಕಿನಲ್ಲಿ ಹೊಸ ಬೆಳಕು ಮೂಡಿದ್ದು, ಈ ಭಾರಿ ಅಮೃತಾ ತಮ್ಮ ಪುತ್ರನ ಜೊತೆ ಸುಖವಾಗಿರಲಿ ಅನ್ನೋದು ಕರುನಾಡಿನ ಜನರ ಹಾರೈಕೆ.

ಇದನ್ನೂ ಓದಿ : ದೆಹಲಿಯ ಗುರುದ್ವಾರದಲ್ಲಿ ಮಲಗುತ್ತಿದ್ದ ಹುಡುಗ.. ಈಗ ಕ್ರಿಕೆಟ್ ಜಗತ್ತಿನ ಟಾಕ್ ಆಫ್ ದಿ ಟೌನ್ !

ಇದನ್ನೂ ಓದಿ : Sudha Rani : ಕಿರುತೆರೆಗೆ ಆನಂದ ಸುಂದರಿ : ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ ಸುಧಾರಾಣಿ

Samanvi Mother Amrutha Roopesh ( Amrutha Naidu) Give birth Baby Boy

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular