Musty-smelling Clothes : ಮಳೆಗಾಲದಲ್ಲಿ ಬಟ್ಟೆಗಳಿಂದ ಕೆಟ್ಟ ವಾಸನೆ ಬರುತ್ತಿದೆ ಎಂಬ ಚಿಂತೆಯೇ? ಅದಕ್ಕೆ ಹೀಗೆ ಮಾಡಿ…

ಮಳೆಗಾಲ(Monsoon) ಪ್ರಾರಂಭವಾಗಿದೆ. ಬೇಸಿಗೆಯ ಬಿಸಿಲಿಗೆ ದಣಿದ ಜೀವಗಳಿಗೆ ತಂಪೆರೆಯುತ್ತದೆ. ಆದರೂ ಈ ಕಾಲದ ಅತಿ ಬೇಸರದ ವಿಷಯವೆಂದರೆ ಬಟ್ಟೆಗಳಿಂದ ಬರುವ ಕೆಟ್ಟ ವಾಸನೆ(Musty-smelling Clothes). ಮೋಡ ಕವಿದ ವಾತಾವರಣ, ಅತಿ ಹೆಚ್ಚಿನ ಮಳೆ, ಅಥವಾ ಸ್ವಲ್ಪ ಬಿಸಿಲು, ಇದರಿಂದ ಒಣಗಿಸಿ, ಕಪಾಟುಗಳಲ್ಲಿ ಇರಿಸಿದ ಬಟ್ಟೆಗಳಿಂದ ಸಹ ಕೆಟ್ಟ ವಾಸನೆ ಬರುತ್ತದೆ. ಬಟ್ಟೆಗಳನ್ನು ತೊಳೆಯುವಾಗ ಅಥವಾ ಒಣಗಿಸುವಾಗ ವಾಸನೆಯನ್ನು ತೊಡೆದುಹಾಕಲು ನಾವು ಹೇಳಿದ ಟಿಪ್ಸ್‌ಗಳು ನಿಮಗೆ ಸಹಾಯ ಮಾಡಬಲ್ಲದು.

ಮಳೆಗಾಲದಲ್ಲಿ ಬಟ್ಟೆಗಳಿಂದ ಬರುವ ಕೆಟ್ಟ ವಾಸನೆಗಳನ್ನು ಕೆಲವು ಮನೆಯಲ್ಲಿಯೇ ಸಿಗುವ ವಸ್ತುಗಳನ್ನು ಉಪಯೋಗಿಸಿ ಈ ಸಮಸ್ಯೆಯಿಂದ ಪಾರಾಗಬಹುದು.

ವೊಡ್ಕಾ :
ಮಾನ್ಸೂನ್‌ ನಲ್ಲಿ ತೇವಾಂಶದಿಂದ ಬಟ್ಟೆಗಳಿಂದ ಬರುವ ವಾಸನೆಯನ್ನು ದೂರಮಾಡಲು ವೊಡ್ಕಾವನ್ನು ಬಳಸಬಹುದು. ಸ್ವಲ್ಪ ವೊಡ್ಕಾ ಹನಿಯನ್ನು ಒಂದು ಸ್ಪ್ರೇ ಬಾಟಲ್‌ಗೆ ಹಾಕಿ ಅದಕ್ಕೇ ನೀರು ಸೇರಿಸಿ. ಇದರಿಂದ ಅದು ಡೈಲ್ಯೂಟ್‌ ಆಗುತ್ತದೆ. ಚೆನ್ನಾಗಿ ಮಿಕ್ಸ್‌ ಮಾಡಿ. ಬಟ್ಟೆಗಳ ಮೇಲೆ ನೇರವಾಗಿ ಸ್ಪ್ರೇ ಮಾಡಿ. ಹೀಗೆ ಮಾಡುವುದರಿಂದ ಕ್ಷಣಾರ್ಧದಲ್ಲಿ ವಾಸನೆ ದೂರವಾಗುವುದು.

ಬೇಕಿಂಗ್‌ ಸೊಡಾ ಮತ್ತು ವಿನೆಗಾರ್‌ :
ಬೇಕಿಂಗ್‌ ಸೇಡಾ ಹಲವಾರು ಸಮಸ್ಯೆಗಳನ್ನು ದೂರವಾಗಿಸಬಲ್ಲದು. ನಾವು ಬಳಸುವ ವಾಷಿಂಗ್‌ ಪೌಡರ್‌ಗಳು ಕೆಲವೊಮ್ಮೆ ಬಟ್ಟೆಗಳನ್ನು ಸರಿಯಾಗಿ ಸ್ವಚ್ಚಗೊಳಿಸಲಾರದು. ಆದರೆ ವಾಷಿಂಗ್‌ ಪೌಡರ್‌ ಜೊತೆ ಸೇರಿಸುವ ಸೋಡಾ, ಬಟ್ಟೆಗಳಿಗೆ ಒಳ್ಳೆಯ ವಾಸನೆ ನೀಡಬಲ್ಲದು. ಸೋಡಾದ ಜೊತೆ ಮಿಕ್ಸ್‌ ಮಡಿದ ವಿನೆಗಾರ್‌ ಬಟ್ಟೆಗಳಿಗೆ ತಾಜಾತನವನ್ನು ನೀಡಬಲ್ಲದು. ಅದಕ್ಕಾಗಿ ನೀವು ಬಟ್ಟೆ ತೊಳೆಯಲು ಉಪಯೋಗಿಸುವ ಡಿಟರ್ಜಂಟ್‌ಗೆ ಸೋಡಾ ಮತ್ತು ವಿನೆಗಾರ್‌ ದ್ರಾವಣ ಸೇರಿಸಿ ಬಟ್ಟೆ ತೊಳೆಯಿರಿ. ಆಗ ಬಹಳ ಕಾಲದವರೆಗೆ ಬಟ್ಟೆಗಳಲ್ಲಿ ತಾಜಾತನ ಇರುವುದು.

ಲಿಂಬು ರಸ:
ಮತ್ತೊಂದು ಒಳ್ಳೆಯ ಉಪಾಯವೆಂದರೆ ಲಿಂಬು ರಸ. ಲಿಂಬುವಿನಲ್ಲಿರುವ ಎಸಿಡಿಕ್‌ ಅಂಶವು ಫಂಗಸ್‌ಗಳಿಂದ ಉಂಟಾಗುವ ಕೆಟ್ಟ ವಾಸನೆಯನ್ನು ತೊಡೆದುಹಾಕಬಲ್ಲದು.ನೀವು ಉಪಯೋಗಿಸುವ ಡಿಟರ್ಜಂಟ್‌ಗೆ ಲಿಂಬು ರಸ ಸೇರಿಸಿ ತೊಳೆಯಿರಿ. ನೀವು ಅದಕ್ಕೆ ರೋಸ್‌ ವಾಟರ್‌ ಸಹ ಸೇರಿಸಬಹುದು. ಇದು ನಿಮ್ಮ ಬಟ್ಟೆಗಳಿಗೆ ತಾಜಾತನವನ್ನಷ್ಟೇ ನೀಡುವುದಿಲ್ಲ ಬದಲಿಗೆ ನಿಮಗೂ ಆನಂದವನ್ನು ನೀಡುತ್ತದೆ.

ಇದನ್ನೂ ಓದಿ : PM Free Silai Machine Yojana : ಗುಡ್‌ ನ್ಯೂಸ್‌! ಮಹಿಳೆಯರಿಗಾಗಿ ಪ್ರಧಾನಮಂತ್ರಿ ಉಚಿತ ಹೊಲಿಗೆ ಯಂತ್ರ ಯೋಜನೆ!

ಇದನ್ನೂ ಓದಿ : Healthy Monsoon Diet : ಮಳೆಗಾಲದಲ್ಲಿ ಏನು ತಿಂದರೆ ಒಳ್ಳೆಯದು? ಬೆಸ್ಟ್‌ ಟಿಪ್ಸ್ ಹೇಳಿದ್ದಾರೆ ಫೇಮಸ್‌ ನ್ಯುಟ್ರಿಷನಿಸ್ಟ್‌!

(Musty-smelling Clothes in monsoon how to get rid of it)

Comments are closed.