ಮಂಗಳವಾರ, ಏಪ್ರಿಲ್ 29, 2025
HomeCinemaSamyuktha Hegde : ಕನಸು‌ ನನಸಾದ ಖುಷಿಯಲ್ಲಿ ಕಿರಿಕ್ ಹುಡುಗಿ : ಪ್ರಭುದೇವಾ ಜೊತೆ ಹೆಜ್ಜೆ...

Samyuktha Hegde : ಕನಸು‌ ನನಸಾದ ಖುಷಿಯಲ್ಲಿ ಕಿರಿಕ್ ಹುಡುಗಿ : ಪ್ರಭುದೇವಾ ಜೊತೆ ಹೆಜ್ಜೆ ಹಾಕಿದ ಸಂಯುಕ್ತಾ ಹೆಗ್ಡೆ

- Advertisement -

ನಟನೆಯ ಮೊದಲ ಸಿನಿಮಾದಲ್ಲೇ ಭರವಸೆ ಮೂಡಿಸಿದ ನಟಿ ಸಂಯುಕ್ತಾ ಹೆಗ್ಡೆ ( Samyuktha Hegde ) ಅದ್ಯಾಕೋ ಗೊತ್ತಿಲ್ಲ ಅಂದುಕೊಂಡಷ್ಟು ಅವಕಾಶಗಳನ್ನು ಪಡೆದುಕೊಳ್ಳಲೇ ಇಲ್ಲ. ಆದರೂ ಸಖತ್ ಹಾಟ್ ಡ್ಯಾನ್ಸ್, ಪೋಸ್ ಹಾಗೂ ಬಿಕನಿ ಅವತಾರದಿಂದಲೇ ಫೇಮಸ್ ಆದ ನಟಿ ಸಂಯುಕ್ತಾ ಸದ್ಯ ತಮ್ಮ ಬಾಲ್ಯದ ಕನಸೊಂದನ್ನು ಈಡೇರಿಸಿಕೊಂಡ ಸಂಭ್ರಮದಲ್ಲಿದ್ದಾರಂತೆ. ಅದ್ಯಾವ ಕನಸು ಈಡೇರಿದ್ದು ( Prabhudeva ) ಅನ್ನೋ ಕುತೂಹಲ‌ ನಿಮಗಿದ್ದರೇ ಈ ಸ್ಟೋರಿ ಓದಿ.

ಕಿರಿಕ್ ಪಾರ್ಟಿ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟ ಸಂಯುಕ್ತಾ ಹೆಗ್ಡೆ ಬಳಿಕ ಕಾಲೇಜ್ ಕುಮಾರ ಸಿನಿಮಾದಲ್ಲಿ ನಟಿಸಿದ್ದರು. ಆದರೆ ನಟನೆ ಗಿಂತ ಕಿರಿಕ್ ಮಾಡೋದ್ರಲ್ಲೇ ಹೆಚ್ಚು ಆಸಕ್ತಿ ತೋರುತ್ತಿದ್ದ ಸಂಯುಕ್ತಾ ಕ್ರಮೇಣ ಕನ್ನಡ ಸಿನಿಮಾದಿಂದಲೇ ನಾಪತ್ತೆಯಾಗಿದ್ದು ಈಗ ಹಳೆಯ ಬೆಳವಣಿಗೆ. ಆದರೆ ನಟನೆಯಿಂದ ಮರೆಯಾದ್ರೂ ಸೋಷಿಯಲ್ ಮೀಡಿಯಾದಲ್ಲಿ ಹಾಟ್ ಹಾಟ್ ಪೋಟೋಗಳ ಮೂಲಕ ಮತ್ತೇರಿಸುತ್ತಲೇ ಇದ್ದರು. ಈಗ ತೆಲುಗು ಹಾಗೂ ತಮಿಳಿನಲ್ಲಿ ಬ್ಯುಸಿಯಾಗಿರೋ ಸಂಯುಕ್ತ ಹೆಗ್ಡೆ ನಟನೆಯ ಥೀಲ್‌ಸಿನಿಮಾ ಸಂಕ್ರಾಂತಿಯಂದು ತೆರೆಗೆ ಬಂದಿದೆ.

ಈ ಸಿನಿಮಾ ಒಳ್ಳೆ ಪ್ರದರ್ಶನ ಕಾಣುತ್ತಿದ್ದು, ಇದರ ವಿಡಿಯೋ ಸಾಂಗ್ ವೊಂದು ಯೂಟ್ಯೂಬ್ ನಲ್ಲಿ ರಿಲೀಸ್ ಆಗಲಿದೆ. ಈ ಸಿನಿಮಾದಲ್ಲಿ ನಟಿ ಸಂಯುಕ್ತಾ ಹಿರಿಯ ನಟ ಹಾಗೂ ಡ್ಯಾನ್ಸ್ ದಂತಕತೆ ಪ್ರಭುದೇವ್ ಜೊತೆ ಹೆಜ್ಜೆ ಹಾಕಿದ್ದಾರೆ. ತಮಿಳಿನಲ್ಲೂ ನಟಿಸುತ್ತಿರುವ ಸಂಯುಕ್ತಾ, ಇಂಡಿಯನ್ ಮೈಕಲ್ ಜಾಕ್ಸನ್ ಖ್ಯಾತಿಯ ಪ್ರಭು ದೇವಾಜೊತೆ ಡ್ಯಾನ್ಸ್ ಮಾಡೋ ಮೂಲಕ ತಮ್ಮ ಬಾಲ್ಯದ ಕನಸನ್ನು ನನಸು ಮಾಡಿಕೊಂಡಿದ್ದಾರಂತೆ.

ಈ ಬಗ್ಗೆ ಸಂಯುಕ್ತಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ. ವಾಟುರ ಥೀಟುರ ಹಾಡಿನಲ್ಲಿ ಸಂಯುಕ್ತಾ ಹೆಗ್ಡೆ, ಪ್ರಭುದೇವಾ ಜೊತೆ‌ಡ್ಯಾನ್ಸ್ ಮಾಡಿದ್ದಾರೆ. ಈ ಬಗ್ಗೆ ಇನ್ ಸ್ಟಾಗ್ರಾಂನಲ್ಲಿ ‌ಬರೆದಿರುವ ಸಂಯುಕ್ತಾ, ಚಿಕ್ಕ ವಯಸ್ಸಿನಲ್ಲೇ ನನ್ನದೊಂದು ಕನಸಿತ್ತು. ಪ್ರಭುದೇವ ಅವರ ಜೊತೆ ಡ್ಯಾನ್ಸ್ ಮಾಡಬೇಕೆಂಬುದು. ಅದು ಈಗ ಈಡೇರಿದೆ.

ನಾನು ಪ್ರಭುದೇವ ಅವರೊಂದಿಗೆ ನಟನೆ ಮಾತ್ರವಲ್ಲ ಡ್ಯಾನ್ಸ್ ಮಾಡೋಕೆ ಕೂಡ ಅವಕಾಶ ಸಿಕ್ಕಿತು. ಸಿನಿಮಾ‌ಗೆ ಕಾಲಿಟ್ಟಾಗಲೂ ನನಗೆ ಪ್ರಭುದೇವ ಅದರೊಂದಿಗೆ ನಟಿಸುವ, ಡ್ಯಾನ್ಸ್ ಮಾಡುವ ಆಸೆ ಇತ್ತು. ಈಗ ಅದು ಈಡೇರಿದೆ. ನನಗೆ ಪ್ರಭುದೇವ್ ಅವರನ್ನು ನೋಡಿಯೇ ಡ್ಯಾನ್ಸ್ ನಲ್ಲಿ ಆಸಕ್ತಿ ಹುಟ್ಟಿದ್ದು. ಹೀಗಾಗಿ ನನಗೆ ನನ್ನ ಕನಸು‌ ನನಸಾದ ಗಳಿಗೆಯ ಬಗ್ಗೆ ಹೆಮ್ಮೆ ಇದೆ ಎಂದು ಸಂಯುಕ್ತಾ ಬರೆದಿದ್ದಾರೆ.

ಇದನ್ನೂ ಓದಿ : ಅನೌನ್ಸ್ ಆಯ್ತು ಡಾಲಿ 25ನೇ ಚಿತ್ರ : ಖಡಕ್ ಖಾಕಿಯಾಗಿ ತೆರೆಗೆ ಬರ್ತಿದ್ದಾರೆ ಧನಂಜಯ್

ಇದನ್ನೂ ಓದಿ : ಮಡಿದ ಮಗಳಿಗಾಗಿ ಮಿಡಿದ ಅಮೃತಾ ನಾಯ್ಡು: ಮತ್ತೆ ನನ್ನ ಹೊಟ್ಟೆಯಲ್ಲಿ ಸಮನ್ವಿಯೇ ಹುಟ್ಟಿ ಬರಲಿ ಎಂದ ನಟಿ

( Samyuktha Hegde is Dancing with Prabhudeva was a dream come true)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular