New Covid-19 cases : ದೇಶದಲ್ಲಿ ಒಂದೇ ದಿನ 2.58 ಲಕ್ಷ ಕೊರೊನಾ ಪ್ರಕರಣಗಳು ಧೃಡ

New Covid-19 cases :ಭಾರತದಲ್ಲಿ ಕೊರೊನಾ ಮೂರನೇ ಅಲೆಯ ಭಯದ ನಡುವೆಯೆ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳಲ್ಲಿ ವ್ಯಾಪಕ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ. ಕಳೆದ 24 ಗಂಟೆಗಳಲ್ಲಿ 2,58,089 ಕೋವಿಡ್​ ಹೊಸ ಪ್ರಕರಣಗಳು ವರದಿಯಾಗಿವೆ. ದೇಶದಲ್ಲಿ ಪ್ರಸ್ತುತ 16,56,341 ಹೊಸ ಕೋವಿಡ್​ ಪ್ರಕರಣಗಳು ಇವೆ.

ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 1,51,740 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ದೇಶದಲ್ಲಿ ಕೊರೊನಾದಿಂದ (New Covid-19 cases) ಗುಣಮುಖರಾದವರ ಒಟ್ಟು ಸಂಖ್ಯೆ 3,52,37,461 ಆಗಿದೆ. ಇನ್ನು ದೇಶದಲ್ಲಿ ಓಮಿಕ್ರಾನ್​ ರೂಪಾಂತರಿ ಪ್ರಕರಣಗಳ ಸಂಖ್ಯೆ 8209ಕ್ಕೆ ಏರಿಕೆ ಕಂಡಿದೆ. ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು ಅಂದರೆ 1738 ಓಮಿಕ್ರಾನ್​ ಪ್ರಕರಣಗಳು ವರದಿಯಾಗಿವೆ. ನಂತರದ ಸ್ಥಾನದಲ್ಲಿರುವ ಪಶ್ಚಿಮ ಬಂಗಾಳದಲ್ಲಿ 1672, ರಾಜಸ್ಥಾನದಲ್ಲಿ 1276, ದೆಹಲಿಯಲ್ಲಿ 549 ಹಾಗೂ ಕರ್ನಾಟಕದಲ್ಲಿ 536 ಓಮಿಕ್ರಾನ್ ಪ್ರಕರಣಗಳು ವರದಿಯಾಗಿವೆ.

ತಜ್ಞರ ಪ್ರಕಾರ, ಪ್ರತಿಯೊಂದು ಮಾದರಿಯ ಜೀನೋಮ್ ಅನುಕ್ರಮವನ್ನು ಕೈಗೊಳ್ಳಲು ಸಾಧ್ಯವಿಲ್ಲ ಆದರೆ ಈ ಪ್ರಸ್ತುತ ತರಂಗವು ಹೆಚ್ಚಾಗಿ ಓಮಿಕ್ರಾನ್​ ರೂಪಾಂತರಿಯನ್ನು ಒಳಗೊಂಡಿದೆ ಎಂದು ತಿಳಿದುಬಂದಿದೆ.ದೈನಂದಿನ ಪ್ರಕರಣಗಳನ್ನು ನೋಡಿದಾಗ ದೆಹಲಿ ಹಾಗೂ ಮುಂಬೈನಲ್ಲಿ ಕೊರೊನಾ ಪ್ರಕರಣಗಳಲ್ಲಿ ಇಳಿಕೆ ಕಂಡುಬಂದಿದೆ ಎಂದು ತಿಳಿದುಬಂದಿದೆ. ಆದರೆ ಪಾಸಿಟಿವಿಟಿ ದರದಲ್ಲಿ ಯಾವುದೇ ಬದಲಾವಣೆಗಳು ಕಂಡುಬಾರದೇ ಇರೋದನ್ನು ನೋಡಿದರೆ ಕೊರೊನಾ ಮೂರನೇ ಅಲೆಯು ಈ ಎರಡು ನಗರಳಗಳ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂದು ಅಂದಾಜಿಸಬಹುದಾಗಿದೆ. ದೇಶದಲ್ಲಿ ಕೊರೊನಾ ಲಸಿಕೆ ಅಭಿಯಾನ 1 ವರ್ಷ ಪೂರೈಸಿದ್ದು ಇಲ್ಲಿಯವರೆಗೆ 157 ಕೋಟಿಗೂ ಅಧಿಕ ಡೋಸ್​ಗಳನ್ನು ನೀಡಲಾಗಿದೆ.

ಇದನ್ನು ಓದಿ : CM Meeting : ಕೊರೋನಾ ತಡೆಗೆ ಮಾರ್ಗಸೂಚಿ : ಸಿಎಂ ಸಭೆಗೆ ತಾಂತ್ರಿಕ ಸಮಿತಿ ಶಿಫಾರಸ್ಸುಗಳ ವಿವರ ಇಲ್ಲಿದೆ

ಇದನ್ನೂ ಓದಿ : omicron and corona : ಕೊರೊನಾ ಹಾಗೂ ಓಮೈಕ್ರಾನ್ ಹೆಚ್ಚಳದ ನಡುವೆ ಹೊರಬಿತ್ತು ಸಮಾಧಾನದ ಸಂಗತಿ

ಇದನ್ನೂ ಓದಿ : ಕೊರೋನಾ ತಡೆಗೆ ಮಾರ್ಗಸೂಚಿ : ಸಿಎಂ ಸಭೆಗೆ ತಾಂತ್ರಿಕ ಸಮಿತಿ ಶಿಫಾರಸ್ಸುಗಳ ವಿವರ ಇಲ್ಲಿದೆ

( Coronavirus pandemic Updates: India logs 2.58 lakh new Covid-19 cases, 385 deaths in a day )

Comments are closed.