ಸ್ಯಾಂಡಲ್‌ವುಡ್ ನಟಿ ರಾಧಿಕಾ ಪಂಡಿತ್ ತಮ್ಮ ಮಕ್ಕಳ ಫೋಟೊ, ವಿಡಿಯೋ ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ತಾಯಿರ್ತರೆ. ಇದೀಗ ತಮ್ಮ ಮಗ ಯಥರ್ವ ವಿಡಿಯೋ ಒಂದನ್ನ ಶೇರ್ ಮಾಡಿದ್ದು, ಸಖತ್ ವೈರಲ್ ಆಗಿದೆ.

ಸದಾ ಸೋಷಿಯಲ್ ಮೀಡಿಯಾದಲ್ಲಿ ಬ್ಯುಸಿ ಇರುವ ರಾಧಿಕಾ ಪಂಡಿತ್ ಮಗ ಯಥರ್ವ ವಿಡಿಯೋ ಹಂಚಿಕೊಂಡಿದ್ದು, ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಯಥರ್ವ ಅಪ್ಪ ಯಶ್ ಹಾಗು ಅಮ್ಮ ರಾಧಿಕಾ ಫೋಟೊ ಮುಂದೆ ಕುಳಿತಿದ್ದು, ಗುರುತಿಸುವ ಪ್ರಯತ್ನ ಮಾಡುತ್ತಿದ್ದಾನೆ. ಈ ಮಧ್ಯೆ ಅಕ್ಕ ಐರಾ ತಮ್ಮನಿಗಡ ರಾಧಿಕಾ ಫೋಟೊ ತೊರಿಸಿ ಅಮ್ಮ ಎಂದು ಹೇಳಿಕೊಟ್ಟಿದ್ದಾಳೆ.

ಸದ್ಯ ಈ ವಿಡಿಯೋವನ್ನ ನಟಿ ರಾಧಿಕಾ ಪಂಡಿತ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ, ವಿದ್ಯಾರ್ಥಿ ಟೀಚರ್ ಆದಾಗ, ನನ್ನ ಕೆಲಸ ಮುಗಿದಿದೆ” ಎಂದು ಬರೆದುಕೊಂಡಿದ್ದಾರೆ.