ಡ್ರಗ್ಸ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ : ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಯ ಹೆಸರು !

0

ಬೆಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಇಡೀ ದಂಧೆಯನ್ನೇ ಮಟ್ಟ ಹಾಕೋದಕ್ಕೆ ಪಣತೊಟ್ಟಿ ರುವ ಸಿಸಿಬಿ ಅಧಿಕಾರಿಗಳಿಗೆ ಇದೀಗ ಶಾಕ್ ಎದುರಾಗಿದೆ. ತಮ್ಮ ಇಲಾಖೆಯ ಅಧಿಕಾರಿಯೋರ್ವರು ತನಿಖೆಯ ಮಾಹಿತಿಯನ್ನು ಆರೋಪಿಗಳ ಜೊತೆಗೆ ಹಂಚಿಕೆ ಮಾಡಿರುವುದು ಬಯಲಾಗಿದೆ.

ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ, ಸಂಜನಾ ಜೊತೆಗೆ ಹಲವು ಮಂದಿ ಡ್ರಗ್ಸ್ ಪೆಡ್ಲರ್ ಗಳನ್ನು ಬಂಧಿಸಲಾಗಿದೆ. ಹಲವು ಮಂದಿ ನಟ, ನಟಿಯರನ್ನು ಸಿಸಿಬಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ರಾಜಕಾರಣಿಗಳ ಮಕ್ಕಳ ಹೆಸರು ಪ್ರಕರಣದಲ್ಲಿ ತಳಕು ಹಾಕಿಕೊಳ್ಳುತ್ತಿದೆ. ಈ ನಡುವಲ್ಲೇ ಆರೋಪಿಗಳ ಜೊತೆಗೆ ಪೊಲೀಸ್ ಅಧಿಕಾರಿಯೋರ್ವರು ನಿಂತಿರುವುದು ಸಿಸಿಬಿ ಅಧಿಕಾರಿಗಳ ತನಿಖೆ ತೊಡಕಾಗಿದೆ.

ಆರೋಪಿಗಳ ಬೆನ್ನಿಗೆ ನಿಂತಿದ್ದ ಪೊಲೀಸ್ ಅಧಿಕಾರಿಯನ್ನು ಸಿಸಿಬಿ ಪೊಲೀಸರು ತನಿಖೆಯ ವೇಳೆ ಪತ್ತೆ ಹಚ್ಚಿದ್ದಾರೆ. ಡ್ರಗ್ಸ್ ಪ್ರಕರಣದ ಆರೋಪಿಗಳಾದಂತ ವಿರೇನ್ ಖನ್ನಾ, ಶೇಖ್ ಫಾಜಿಲ್ ಜೊತೆಗೆ ಎಸಿಪಿ ಅಧಿಕಾರಿ ತನಿಖೆಯ ಮಾಹಿತಿ ಹಂಚಿಕೊಳ್ಳುತ್ತಿರುವುದಾಗಿ ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲೀಗ ಪೊಲೀಸ್ ಅಧಿಕಾರಿಯನ್ನು ಅಮಾನತುಗೊಳಿಸುವಂತೆ ಸರ್ಕಾರಕ್ಕೆ ಸಿಸಿಬಿ ಮುಖ್ಯಸ್ಥರು ಪತ್ರ ಬರೆದಿದ್ದಾರೆ ಎನ್ನಲಾಗಿದೆ.

ಖುದ್ದು ಸಿಸಿಬಿ ಮುಖ್ಯಸ್ಥ ಸಂದೀಪ್ ಪಾಟೀಲ್ ಅವರೇ ಆರೋಪಿಗಳ ಜೊತೆಗೆ ಅಧಿಕಾರಿಯೋರ್ವರು ಮಾಹಿತಿ ಹಂಚಿಕೊಂಡಿರುವ ಕುರಿತು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಡ್ರಗ್ಸ್ ಪ್ರಕರಣದಲ್ಲಿ ತನಿಖೆಯ ಮಾಹಿತಿ ಹಂಚಿಕೊಳ್ಳುತ್ತಿದ್ದ, ಆರೋಪಿಗಳಿ ನೆರವಾದಂತ ಎಸಿಪಿ ಅಧಿಕಾರಿಯನ್ನು ಅಮಾನತು ಗೊಳಿಸುವಂತೆ ವರದಿ ಸಲ್ಲಿಸಿದ್ದಾರೆನ್ನಲಾಗಿದೆ.

ಒಂದೊಮ್ಮೆ ಅಧಿಕಾರಿ ಆರೋಪಿಗಳ ಜೊತೆಗೆ ಮಾಹಿತಿ ಹಂಚಿಕೊಂಡಿರುವುದು ಖಚಿತವಾದ್ರೆ ಅಧಿಕಾರಿಯನ್ನೂ ಕೂಡ ಬಂಧನಕ್ಕೆ ಒಳಪಡಿಸುವ ಸಾಧ್ಯತೆಯಿದೆ.

Leave A Reply

Your email address will not be published.