ಭಾನುವಾರ, ಏಪ್ರಿಲ್ 27, 2025
HomeCinemaಕೊನೆಗೂ ಈಡೇರುತ್ತಾ ಚಿರು ಸರ್ಜಾ ಕನಸು !

ಕೊನೆಗೂ ಈಡೇರುತ್ತಾ ಚಿರು ಸರ್ಜಾ ಕನಸು !

- Advertisement -

ಸ್ಯಾಂಡಲ್ ವುಡ್ ನಟ ಚಿರಂಜೀವಿ ಸರ್ಜಾ ಬಾರದ ಲೋಕಕ್ಕೆ ಪಯಣಿಸಿ ಸರಿ ಸುಮಾರು 4 ತಿಂಗಳು ಕಳೆದಿದೆ. ಆದರೆ ಚಿರು ಸರ್ಜಾ ನಟನೆಯ ಹಲವು ಸಿನಿಮಾಗಳು ತೆರೆಗೆ ಬರೋದಕ್ಕೆ ಬಾಕಿ ಉಳಿದಿದೆ. ಅದ್ರಲ್ಲೂ ಚಿರು ಸರ್ಜಾ ಕನಸಿನ ಸಿನಿಮಾವಾಗಿದ್ದ ಶಿವಾರ್ಜುನ ಇದೀಗ ಮತ್ತೆ ಬಿಡುಗಡೆಯಾಗುತ್ತಿದೆ.

ವಾಯುಪುತ್ರ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಸರ್ಜಾ ವಂಶದ ಕುಡಿ ಚಿರಂಜೀವಿ ಸರ್ಜಾ ಚಿತ್ರರಂಗದ ಸ್ಟಾರ್ ನಟರಾಗಿ ಮೆರೆದಿದ್ದಾರೆ. ಮಾತ್ರವಲ್ಲ ಮೊದಲ ಸಿನಿಮಾದಲ್ಲಿಯೇ ಹಿರಿಯ ನಟ ಅಂಬರೀಷ್ ಅವರ ಜೊತೆಗೆ ತೆರೆ ಹಂಚಿಕೊಂಡಿದ್ದ ಚಿರಂಜೀವಿ ಸರ್ಜಾ ಕನ್ನಡ ಚಿತ್ರರಂಗದಲ್ಲಿಯೂ ಒಳ್ಳೆಯ ಹೆಸರು ಮಾಡಿದ್ದರು.

ಇದನ್ನೂ ಓದಿ : ಮೇಘನಾ ಸರ್ಜಾ ಗೆ ಬೇಸರ ಮೂಡಿಸಿದೆ ಮಗುವಿನ ವಿಚಾರ : ಅಭಿಮಾನಿಗಳಲ್ಲಿ ಮನವಿ ಮಾಡಿದ್ಯಾಕೆ ಚಿರು ಪತ್ನಿ

ಮುದ್ದಿನ ಮಾವ ಅರ್ಜುನ್ ಸರ್ಜಾ ಚಿರಂಜೀವಿಗೆ ಬೆಂಬಲವಾಗಿ ನಿಂತಿದ್ದರು. ಸಾಲು ಸಾಲು ಸಿನಿಮಾ ಆಫರ್ ಗಳು ಚಿರಂಜೀವಿ ಸರ್ಜಾಗಾಗಿಯೇ ಕಾಯುತ್ತಿದ್ದವು. ಅದ್ರಲ್ಲೂ ಚಿರು ಸೇರಿದಂತೆ ಹಲವು ಸಿನಿಮಾಗಳು ಚಿರಂಜೀವಿ ಸರ್ಜಾಗೆ ಒಳ್ಳೆಯ ಹೆಸರು ತಂದುಕೊಟ್ಟಿತ್ತು. ನಟ, ನೃತ್ಯ, ಫೈಟ್ ಮೂಲಕ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದವರು ಚಿರಂಜೀವಿ ಸರ್ಜಾ.

ವರ್ಷಾರಂಭದಲ್ಲಿಯೇ ಚಿರು ಸರ್ಜಾ ನಟನೆಯ ‘ಖಾಕಿ’ ಸಿನಿಮಾ ತೆರೆ ಕಂಡಿತ್ತು. ನವೀನ್‌ ರೆಡ್ಡಿ ನಿರ್ದೇಶನದ ಸಿನಿಮಾದಕ್ಕೆ ತರುಣ್ ಶಿವಪ್ಪ ಮತ್ತು ಮಾನಸಾ ತರುಣ್‌ ಬಂಡವಾಳ ಹೂಡಿದ್ದರು. ಯಜಮಾನ ಖ್ಯಾತಿಯ ತಾನ್ಯಾ ಹೋಪ್‌ ನಾಯಕಿಯಾಗಿ ಚಿರು ಜೊತೆಗೆ ತೆರೆ ಹಂಚಿಕೊಂಡಿದ್ದರು. ಸಿನಿಮಾದ ಹಾಡುಗಳು ಅದ್ಬುತವಾಗಿ ಮೂಡಿಬಂದಿದ್ದು, ಸಿನಿಮಾದ ಸಾಕಷ್ಟು ಕುತೂಹಲವನ್ನು ಹುಟ್ಟುಹಾಕಿತ್ತು.

ಆದರೆ ಸಿನಿಮಾ ಹೇಳಿಕೊಳ್ಳುವಷ್ಟರ ಮಟ್ಟಿಗೆ ಯಶಸ್ಸನ್ನು ಕಂಡಿರಲಿಲ್ಲ. ಆದರೆ ಮಾರ್ಚ್ ನಲ್ಲಿ ಚಿರಂಜೀವಿ ಕನಸಿನ ಸಿನಿಮಾ ಶಿವಾರ್ಜುನ ಬಿಡುಗಡೆಯಾಗಿತ್ತು. ಚಿರು ಸರ್ಜಾ ಶಿವಾರ್ಜುನ ಸಿನಿಮಾದ ಬಗ್ಗೆಯೂ ಸಾಕಷ್ಟು ಕನಸು ಕಂಡಿದ್ದರು. ಚಿರು ಕುಟುಂಬದ ಆಪ್ತರಾಗಿದ್ದ ಶಿವಾರ್ಜುನ್ ಸಿನಿಮಾಕ್ಕೆ ಬಂಡವಾಳ ಹೂಡಿದ್ದರು.

ಪಕ್ಕಾ ಮಾಸ್ ಕಮರ್ಷಿಯಲ್ ಸಿನಿಮಾಕ್ಕೆ ಧೈರ್ಯಂ ಖ್ಯಾತಿಯ ಶಿವ ತೇಜಸ್ ನಿರ್ದೇಶನ ಮಾಡಿದ್ದರು. ಅಲ್ಲದೇ ಅಮೃತಾ ಅಯ್ಯಂಗಾರ್ ಚಿರು ಜೊತೆಗೆ ತೆರೆ ಹಂಚಿಕೊಂಡಿದ್ದರು. ಸಿನಿಮಾದ ಸಾಕಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿತ್ತು. ಮಾರ್ಚ್ 12ರಂದು ಸಿನಿಮಾ ತೆರೆಗೆ ಬರುತ್ತಿದ್ದಂತೆಯೇ ಹೌಸ್ ಪುಲ್ ಪ್ರದರ್ಶನವನ್ನೂ ಕಂಡಿತ್ತು.

ಆದರೆ ದುರಾದೃಷ್ಟವಶಾತ್ ಸಿನಿಮಾದ ಬಿಡುಗಡೆಯಾದ ಎರಡೇ ದಿನಕ್ಕೆ ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಚಿತ್ರಮಂದಿರಗಳನ್ನು ಬಂದ್ ಮಾಡಲಾಗಿತ್ತು. ಹೀಗಾಗಿ ಶಿವಾರ್ಜುನ ಸಿನಿಮಾ ಎರಡೇ ದಿನಕ್ಕೆ ಪ್ರದರ್ಶನವನ್ನು ನಿಲ್ಲಿಸಲಾಯ್ತು.

ಲಾಕ್ ಡೌನ್ ವೇಳೆಯಲ್ಲಿ ಮನೆಯವರೊಂದಿಗೆ ಸಂತಸದಿಂದಲೇ ಇರುತ್ತಿದ್ದ ಚಿರಂಜೀವಿ ಸರ್ಜಾಗೆ ಶಿವಾರ್ಜನ ಸಿನಿಮಾ ಪ್ರದರ್ಶನ ರದ್ದಾಗಿರೋದು ಸಾಕಷ್ಟು ಬೇಸರವನ್ನು ಮೂಡಿಸಿತ್ತು. ಅದೇ ಕೊರಗು ಚಿರಂಜೀವಿ ಸರ್ಜಾ ಅವರನ್ನು ಕಾಡುತ್ತಲೇ ಇತ್ತು. ತನ್ನ ಆಪ್ತರ ಸಿನಿಮಾ ಗೆಲ್ಲಲಿಲ್ಲ ಅನ್ನೋ ಕೊರಗನ್ನು ಕುಟುಂಬಸ್ಥರು ಹಾಗೂ ಮೇಘನಾ ಸರ್ಜಾ ಅವರ ಬಳಿಯಲ್ಲಿಯೂ ಹೇಳಿಕೊಂಡಿದ್ದರು. ದುರಂತವೆಂದ್ರೆ ಜೂನ್ 7ರಂದು ಚಿರಂಜೀವಿ ಸರ್ಜಾ ಹೃದಯಾಘಾತದಿಂದ ಬಾರದ ಲೋಕಕ್ಕೆ ಪಯಣಿಸಿದ್ದಾರೆ.

10 ವರ್ಷಗಳ ಕಾಲ ಪ್ರೀತಿಸಿ ಮದುವೆಯಾಗಿದ್ದ ಮೇಘನಾ ಸರ್ಜಾ ಅವರನ್ನು ಒಬ್ಬಂಟಿಯನ್ನಾಗಿಸಿ ಚಿರು ಹೊರಟು ಹೋಗುತ್ತಿದ್ದಂತೆಯೇ ಕುಟುಂಬಸ್ಥರು ಸೇರಿದಂತೆ ಅಪಾರ ಅಭಿಮಾನಿಗಳು ಕಣ್ಣೀರು ಸುರಿಸಿದ್ದಾರೆ. ಮುದ್ದಿನ ತಮ್ಮ, ಮಡದಿ, ಮಾವ, ಕುಟುಂಬಸ್ಥರು ಹಾಗೂ ಅಪಾರ ಅಭಿಮಾನಿಗಳನ್ನು ಪ್ರೀತಿಯಿಂದ ಕಾಣುತ್ತಿದ್ದ ಚಿರು ಅಗಲಿಕೆಯನ್ನು ಇಂದಿಗೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಆದ್ರೀಗ ಚಿರಂಜೀವಿ ಸರ್ಜಾ ನಟನೆಯ ಶಿವಾರ್ಜುನ ಸಿನಿಮಾ ಮತ್ತೆ ಬಿಡುಗಡೆಯಾಗುವುದು ಖಚಿತವಾಗಿದೆ. ಈಗಾಗಲೇ ಚಲನಚಿತ್ರ ವಾಣಿಜ್ಯ ಮಂಡಳಿಯೂ ಕೂಡ ಶಿವಾರ್ಜುನ ಸಿನಿಮಾವನ್ನು ಮತ್ತೆ ಬಿಡುಗಡೆ ಮಾಡುವುದಾಗಿಯೂ ಘೋಷಣೆಯನ್ನು ಮಾಡಿದ್ದರು. ಉತ್ತಮ ಕಥೆ, ಚಿರು ನಟನೆಯ ಶಿವಾರ್ಜುನ ಕನ್ನಡದ ಮಟ್ಟಿಗೊಂದು ವಿಭಿನ್ನ ಪ್ರಯತ್ನ. ನೆಚ್ಚಿನ ನಟ ಶಿವಾರ್ಜುನ ಸಿನಿಮಾವನ್ನು ನೋಡೋದಕ್ಕೆ ಅಭಿಮಾನಿಗಳು ಕೂಡ ಕಾತರರಾಗಿದ್ದಾರೆ.

ಶಿವಾರ್ಜುನ ಸಿನಿಮಾವನ್ನು ಗೆಲ್ಲಿಸುವ ಮೂಲಕ ನೆಚ್ಚಿನ ನಟನಿಗೆ ತಮ್ಮ ಪ್ರೀತಿಯನ್ನು ತೋರಿಸಲು ಅಭಿಮಾನಿಗಳು ಸಜ್ಜಾಗಿದ್ದಾರೆ. ಚಿರು ಸರ್ಜಾ ಇಂದು ನಮ್ಮೊಂದಿಗಿಲ್ಲ. ಆದರೆ ಚಿರು ಕನಸಾದ್ರೂ ನನಸಾಗಲಿ ಅನ್ನೋದು ನಮ್ಮ ಆಶಯ.

ಇದನ್ನೂ ಓದಿ : ಮತ್ತೆ ಸಿನಿಮಾ ರಂಗಕ್ಕೆ ಮರಳುತ್ತಾರಾ ಮೇಘನಾ ರಾಜ್ ಸರ್ಜಾ

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular