ಡ್ರಗ್ಸ್ ಪ್ರಕರಣ : ಕಿಶೋರ್ ಶೆಟ್ಟಿ ಹೆಸರು ಕೈಬಿಡಲು ಶಾಸಕನಿಂದ ಭಾರೀ ಒತ್ತಡ

0

ಮಂಗಳೂರು : ಕರಾವಳಿಯಲ್ಲಿ ಸಂಚಲನ ಸೃಷ್ಟಿಸಿದ್ದ ಡ್ರಗ್ಸ್ ಪ್ರಕರಣಕ್ಕೆ ಸ್ಪೋಟಕ ತಿರುವು ಪಡೆದುಕೊಂಡಿದೆ. ಅನುಶ್ರೀ ಆಪ್ತ ಕಿಶೋರ್ ಶೆಟ್ಟಿ ಹೆಸರನ್ನು ಕೈಬಿಡುವಂತೆ ಒತ್ತಡ ಹೇರಲಾಗುತ್ತಿದ್ದು, ಕರಾವಳಿಯ ಶಾಸಕರೊಬ್ಬರು ಸಿಸಿಬಿ ಪೊಲೀಸರ ಮೇಲೆ ಪ್ರಭಾವ ಬೀರಲಾಗು ತ್ತಿದೆ ಎಂಬ ಮಾತು ಕೇಳಿಬಂದಿದೆ.

ಕರಾವಳಿಯ ಡ್ಯಾನ್ಸರ್ ಕಿಶೋರ್ ಅಮನ್ ಶೆಟ್ಟಿ ಬಂಧನ ಬೆನ್ನಲ್ಲೇ ನಿರೂಪಕಿ ಅನುಶ್ರೀ ಸೇರಿದಂತೆ ಹಲವರ ಹೆಸರುಗಳು ಕೇಳಿಬಂದಿ ತ್ತು. ಮಾತ್ರವಲ್ಲ ಸ್ಯಾಂಡಲ್ ವುಡ್, ಬಾಲಿವುಡ್ ವರೆಗೂ ಲಿಂಕ್ ಪಡೆದುಕೊಂಡಿತ್ತು. ಅಲ್ಲದೇ ಕಿಶೋರ್, ತರುಣ್ ಹಾಗೂ ನೌಶೀನ್ ಎಂಬ ಡ್ರಗ್ಸ್ ಪೆಡ್ಲರ್ ಗಳನ್ನು ಬಂಧಿಸಲಾಗಿತ್ತು. ನಿರೂಪಕಿ ಅನುಶ್ರೀ ತನ್ನೊಂದಿಗೆ ಸೇರಿ ಡ್ರಗ್ಸ್ ಪಾರ್ಟಿ ಮಾಡಿದ್ದಾರೆ ಅಂತಾ ಕಿಶೋರ್ ಆಪ್ತ ತರುಣ್ ಬಾಯ್ಬಿಟ್ಟಿದ್ದಾನೆ.

ಈ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಈಗಾಗಲೇ ಅನುಶ್ರೀಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮತ್ತೋರ್ವ ಡ್ಯಾನ್ಸರ್ ಓರ್ವನನ್ನು ಬಂಧಿಸಲಾಗಿದ್ದು, ವಿಚಾರಣೆಯ ವೇಳೆಯಲ್ಲಿ ಮಹತ್ವದ ಮಾಹಿತಿಯನ್ನು ಬಾಯ್ಬಿಟ್ಟಿದ್ದಾನೆ.

ಕಿಶೋರ್ ಶೆಟ್ಟಿ ಮಂಗಳೂರಿನ ಹಲವು ಕಡೆಗಳಲ್ಲಿಯೂ ಡ್ರಗ್ಸ್ ಪಾರ್ಟಿ ಮಾಡಿದ್ದು, ಈ ಪಾರ್ಟಿಯಲ್ಲಿ ಕಿರುತೆರೆಯ ನಟ, ನಟಿಯರು, ಉದ್ಯಮಿಗಳ ಮಕ್ಕಳು ಸೇರಿದಂತೆ ಹಲವರು ಪಾರ್ಟಿಯಲ್ಲಿ ಭಾಗಿಯಾಗಿದ್ದಾರೆನ್ನುವ ಆರೋಪ ಕೇಳಿಬಂದಿದೆ.

ಕೇವಲ ಸ್ಯಾಂಡಲ್ ವುಡ್, ಕಿರುತೆರೆ ಮಾತ್ರವಲ್ಲದೇ ಇದೀಗ ಡ್ರಗ್ಸ್ ಪ್ರಕರಣ ಇದೀಗ ಬುಕ್ಕಿಗಳೊಂದಿಗೆ ಲಿಂಕ್ ಪಡೆದುಕೊಳ್ಳುತ್ತಿದ್ದು, ಕರಾವಳಿಯ ಪ್ರಭಾವಿ ಶಾಸಕರೋರ್ವರು ಡ್ರಗ್ಸ್ ಆರೋಪಿಯ ಬಿಡುಗಡೆಗೆ ಒತ್ತಡ ಹೇರಲಾಗುತ್ತಿದೆ. ಕಿಶೋರ್ ಅಮನ್ ಶೆಟ್ಟಿ ಮಂಗಳೂರಿನ ಕ್ರಿಕೆಟ್ ಬುಕ್ಕಿಯೊಂದಿಗೆ ನಂಟು ಹೊಂದಿರುವುದು ಬಯಲಾಗಿದೆ.

ಉದ್ಯಮಿಯಾಗಿ ಗುರುತಿಸಿಕೊಂಡಿರುವ ಪ್ರತಿಷ್ಠಿತ ವ್ಯಕ್ತಿಯೇ ಕ್ರಿಕೆಟ್ ಬುಕ್ಕಿಯಾಗಿದ್ದು, ಬುಕ್ಕಿಯ ಜೊತೆ ಸೇರಿ ಇತರ ಕ್ರಿಕೆಟ್ ಬುಕ್ಕಿಗಳಿಗೆ ಡ್ರಗ್ಸ್ ಪಾರ್ಟಿ ಮಾಡಿಸಿದ್ದ ಅನ್ನೋ ಮಾಹಿತಿ ಇದೀಗ ಸಿಸಿಬಿ ಪೊಲೀಸರಿಗೆ ಲಭ್ಯವಾಗಿದೆ. ಕಿಶೋರ್ ಅಮನ್ ಶೆಟ್ಟಿ ಎಲ್ಲಿ ತನ್ನ ಹೆಸರನ್ನು ಬಾಯ್ಬಿಡುತ್ತಾನೋ ಅನ್ನೋ ಭಯದಿಂದಲೇ ಬುಕ್ಕಿ ತನ್ನ ಆಪ್ತರಾಗಿರುವ ಶಾಸಕರನ್ನು ಬಳಸಿಕೊಂಡು ಸಿಸಿಬಿ ಪೊಲೀಸರ ಮೇಲೆ ಒತ್ತಡ ಹೇರಲಾಗುತ್ತಿದೆ ಎನ್ನಲಾಗುತ್ತಿದೆ.

Leave A Reply

Your email address will not be published.