ಬುಧವಾರ, ಏಪ್ರಿಲ್ 30, 2025
HomeCinemaDhananjay 25th film : ಅನೌನ್ಸ್ ಆಯ್ತು ಡಾಲಿ 25ನೇ ಚಿತ್ರ : ಖಡಕ್...

Dhananjay 25th film : ಅನೌನ್ಸ್ ಆಯ್ತು ಡಾಲಿ 25ನೇ ಚಿತ್ರ : ಖಡಕ್ ಖಾಕಿಯಾಗಿ ತೆರೆಗೆ ಬರ್ತಿದ್ದಾರೆ ಧನಂಜಯ್

- Advertisement -

ಸ್ಯಾಂಡಲ್ ವುಡ್ ಹೊಸ ಪ್ರತಿಭೆಗಳ ಪೈಕಿ ಸದ್ದು ಮಾಡ್ತಿರೋ ನಾಯಕ ಹಾಗೂ ಖಳನಟ ಡಾಲಿ ಧನಂಜಯ್. 2021 ರಲ್ಲಿ ಬಡವ್ ರ್ಯಾಸ್ಕಲ್ ಹಾಗೂ ಪುಷ್ಪ ಸಿನಿಮಾದ ಮೂಲಕ ಸಿನಿ ಪ್ರೇಕ್ಷಕರ ಮನಗೆದ್ದ ಡಾಲಿ ಧನಂಜಯ್ ಕರುನಾಡಿನ‌ ಜಿಲ್ಲೆ ಜಿಲ್ಲೆಯಲ್ಲೂ ಬಡವ ರ್ಯಾಸ್ಕಲ್ ಸಕ್ಸಸ್ ಯಾತ್ರೆ ಮಾಡಿದ್ದರು. ಈ ಯಾತ್ರೆಗೆ ಕೊರೋನಾ ನಡುವೆಯೂ ಅದ್ಭುತ ರೆಸ್ಪಾನ್ಸ್‌ ಸಿಕ್ಕಿದೆ. ಇದೇ ಖುಷಿಯಲ್ಲಿ ಡಾಲಿ ಧನಂಜಯ್ (Dali Dhananjay 25th film) ತಮ್ಮ 25ನೇ ಸಿನಿಮಾ ಅನೌನ್ಸ್ ಮಾಡಿದ್ದಾರೆ.

ಡಾಲಿ ಧನಂಜಯ್ ಕೈಲಿದ್ದ ಕೈತುಂಬ ಸಂಬಳ ಬರೋ ಕೆಲಸ‌ ಬಿಟ್ಟು ನಟನಾಗಲೇಬೇಕೆಂಬ ಹಂಬಲದಿಂದ ಸಿನಿಮಾ‌ ಇಂಡಸ್ಟ್ರಿಗೆ ಬಂದವರು. ಸತತ ಪರಿಶ್ರಮದಿಂದ ಸ್ಯಾಂಡಲ್ ವುಡ್ ನಲ್ಲಿ ಬಹುಬೇಡಿಕೆಯ ಖಳನಾಯಕನಾಗಿ ಹಾಗೂ ನಾಯಕನಾಗಿ ಮಿಂಚುತ್ತಿರುವ ಡಾಲಿ ಧನಂಜಯ್‌ ಮಕರ ಸಂಕ್ರಮಣದ ಶುಭದಿನದಂದು ತಮ್ಮ 25 ನೇ ಸಿನಿಮಾ ಅನೌನ್ಸ್ ಮಾಡಿಕೊಂಡಿದ್ದು ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ‌ ನೀಡಿದ್ದಾರೆ.

ಡಾಲಿ ಧನಂಜಯ್ ಬಹುನೀರಿಕ್ಷಿತ ಮುಂದಿನ ಚಿತ್ರಕ್ಕೆ ಹೊಯ್ಸಳ ಎಂದು ಹೆಸರಿಡಲಾಗಿದೆ. ವಿಜಯ್ ಎನ್ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಸಿನಿಮಾವನ್ನು ನಿರ್ಮಿಸುತ್ತಿದ್ದು, ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ಬಂಡವಾಳ ಹೂಡಿದ್ದಾರೆ. ಈ ಸಿನಿಮಾಗೆ ಟಾಲಿವುಡ್ ನ ಖ್ಯಾತ ಮ್ಯೂಸಿಕ್ ಡೈರೈಕ್ಟರ್ ಥಮನ್ ಎಸ್ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಹೊಯ್ಸಳ ಸಿನಿಮಾ ಡಾಲಿ ಧನಂಜಯ್ ಅಭಿನಯದ 25 ನೇ ಸಿನಿಮಾವಾಗಿದ್ದು ಈ ಸಿನಿಮಾದ ಮೇಲೆ ಸ್ವತಃ ಡಾಲಿ ಧನಂಜಯ್ ಗೂ ಅಪಾರವಾದ ನೀರಿಕ್ಷೆಗಳಿವೆಯಂತೆ. ಹೊಯ್ಸಳ ಸಿನಿಮಾ ಟೈಟಲ್ ಹಾಗೂ ಸಿನಿಮಾದ ಪೋಸ್ಟರ್ ಹೇಳುವಂತೆ ಇದೊಂದು ಪೊಲೀಸ್ ವಿಕ್ಟರಿ ಕತೆಯಾಗಿದ್ದು ಡಾಲಿ ಧನಂಜಯ್ ಖಡಕ್ ಪೊಲೀಸ್ ಆಧಿಕಾರಿಯಾಗಿ ಕಾಣಿಸಿ ಕೊಳ್ಳಲಿದ್ದಾರಂತೆ.

ಇನ್ನು ಸಿನಿಮಾದ ಪೋಸ್ಟರ್ ಹಂಚಿಕೊಂಡಿರೋ ಡಾಲಿ ಧನಂಜಯ್ ಇದೇ ಪೋಸ್ಟ್ ನಲ್ಲಿ ಸೂಕ್ಷ್ಮವಾಗಿ ಸಿನಿಮಾ ರಿಲೀಸ್ ಮುಹೂರ್ತವನ್ನು ರಿವೀಲ್ ಮಾಡಿದ್ದು, ಇದೇ ವರ್ಷದ ನವೆಂಬರ್ 1 ಕನ್ನಡ ರಾಜ್ಯೋತ್ಸವದ ದಿನ ಹೊಯ್ಸಳ ಸಿನಿಮಾ ತೆರೆಗೆ ಬರಲಿದೆಯಂತೆ. ಹೊಯ್ಸಳ ಮಾತ್ರವಲ್ಲದೇ ಡಾಲಿ ಧನಂಜಯ್ ಈ ವರ್ಷ ಟಾಲಿವುಡ್ ನ ಬಹುನೀರಿಕ್ಷಿತ ಪುಷ್ಪ 2 ಸಿನಿಮಾದಲ್ಲೂ ನಟಿಸಲಿದ್ದು, ಇದಲ್ಲದೇ ಹೆಡ್ ಬುಷ್ ಸಿನಿಮಾವನ್ನು ತಾವೇ ನಿರ್ಮಿಸಿ ನಾಯಕರಾಗಿ ನಟಿಸುತ್ತಿದ್ದಾರೆ.

ಇದನ್ನೂ ಓದಿ : ಲಾಲಿ ಹಾಡಲು ಸಜ್ಜಾದ್ರು ಚೆಲುವಿನ ಚಿತ್ತಾರದ ಬೆಡಗಿ : ನಟಿ ಅಮೂಲ್ಯ ಬೇಬಿ ಬಂಪ್ ಪೋಟೋಸ್ ವೈರಲ್

ಇದನ್ನೂ ಓದಿ : ಯೋಗ ಯೋಗಾ ಅಂದ್ರು ಜಾಹ್ನವಿ ಕಪೂರ್ : ಹಾಟ್ ಪೋಟೋಗೆ ಲೈಕ್ಸ್ ಒತ್ತಿದ ಅಭಿಮಾನಿಗಳು

( sandalwood actor Dali Dhananjay announce 25th film)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular