Nnimhans recruitment 2022 : ನಿಮ್ಹಾನ್ಸ್‌ ಸಂಸ್ಥೆಯಲ್ಲಿ ಅಟೆಂಡರ್‌ ಹುದ್ದೆಗೆ ಅರ್ಜಿ ಆಹ್ವಾನ; ಜವಾಬ್ದಾರಿ, ಕೆಲಸದ ವಿವರ ಇಲ್ಲಿದೆ

ರಾಷ್ಟ್ರೀಯ ಮಾನಸಿಕ ಹಾಗೂ ನರ ವಿಜ್ಞಾನ ಸಂಸ್ಥೆ ಬೆಂಗಳೂರು (National Institute of Mental Health and Neuro Science, nimhans recruitment 2022 )ನಲ್ಲಿ ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಪ್ರಸ್ತುತ ಸಂಸ್ಥೆಯಲ್ಲಿ1 ಅಟೆಂಡರ್ ಹುದ್ದೆ ಖಾಲಿ ಇದೆ. ಈಗಾಗಲೇ ಜನವರಿ1ರಂದು ಅರ್ಜಿ ಸಲ್ಲಿಕೆ ಆರಂಭವಾಗಿದೆ.ಅಭ್ಯರ್ಥಿಗಳು ಆನ್ಲೈನ್ ಮೂಲಕ ತಮ್ಮ ಅರ್ಜಿ ಸಲ್ಲಿಸಬೇಕು. ಆಯ್ಕೆ ಆದಲ್ಲಿ ಮುಂದೆ ಲಿಖಿತ ರೂಪದಲ್ಲಿ ಪರೀಕ್ಷೆ ಇರಲಿದೆ. ಅದರಲ್ಲಿ ಆಯ್ಕೆ ಆದರೆ ಇಂಟರ್ವ್ಯೂ ಕೂಡ ಇರಲಿದೆ.

ಇದರ ಸಂದರ್ಶನ ಜನವರಿ 22ರಂದು ಬೆಳಗ್ಗೆ 10.30ಕ್ಕೆ ನಡೆಯಲಿದೆ. ಹೆಚ್ಚಿನ ವಿವರಗಳಿಗೆ http://nimhans.ac.in/ ಸೈಟ್ ವಿಸಿಟ್ ಮಾಡಬಹುದ.
ಈಗ ನಿಮ್ಹಾನ್ಸ್ ಖಾಲಿ ಇರುವ ಒಂದು ಅಟೆಂಡರ್ ಹುದ್ದೆಗೆ ಅರ್ಜಿ ಆಹ್ವಾನಿಸಿದೆ.

ವಿದ್ಯಾರ್ಹತೆ: ರಾಷ್ಟ್ರೀಯ ಮಾನಸಿಕ ಹಾಗೂ ನರ ವಿಜ್ಞಾನ ಸಂಸ್ಥೆ ಬೆಂಗಳೂರು ಸೂಚನೆಯ ಪ್ರಕಾರ, ಮಾನ್ಯತೆ ಪಡೆದ ವಿಶ್ವ ವಿದ್ಯಾಲಯದಿಂದ 10ನೆ ತರಗತಿ ಪೂರ್ಣಗೊಳಿಸಿರಬೇಕು.

ವಯೋಮಿತಿ: ರಾಷ್ಟ್ರೀಯ ಮಾನಸಿಕ ಹಾಗೂ ನರ ವಿಜ್ಞಾನ ಸಂಸ್ಥೆ ಬೆಂಗಳೂರು ಸೂಚನೆಯ ಪ್ರಕಾರ, ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ವಯಸ್ಸು 35 ಮೀರಬಾರದು. ಒಂದು ವೇಳೆ ವಯಸ್ಸು ಮೀರಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದರೆ ಅಂತಹವರನ್ನು ನೇಮಕಾತಿ ಮಾಡಲಾಗದು.

ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳಿಗೆ ಲಿಖಿತ ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಕೆ ಆರಂಭ ದಿನಾಂಕ 01/01/2022. ಅರ್ಜಿ ಸಲ್ಲಿಸುವ ಸಂದರ್ಭ ಎಲ್ಲ ವಿವರಗಳನ್ನು ಸರಿಯಾಗಿ ನೀಡಬೇಕು. ತಪ್ಪಾದ ಮಾಹಿತಿ ನೀಡಿ ಕೆಲಸಕ್ಕೆ ಸೇರುವ ಪ್ರಯತ್ನ ಮಾಡಬಾರದು.

ಸಂದರ್ಶನ ನಡೆಯುವ ದಿನಾಂಕ: 21/01/2022.

ವೇತನ: ಮಾಸಿಕ 10000 ರೂ ಸಿಗಲಿದೆ. ಕೆಲಸದ ಅನುಭವ ಲಭಿಸಿದ ಬಳಿಕ ಸಂಬಳ ಹೆಚ್ಚುವ ಸಾಧ್ಯತೆ ಇದೆ.

ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಸೂಕ್ತ ದಾಖಲೆಗಳನ್ನು ತಮ್ಮೊಂದಿಗೆ ಕೊಂಡೊಯ್ಯಬೇಕು. ( ಎಸ್ ಎಸ್ ಎಲ್ ಸಿ ಮಾರ್ಕ್ ಕಾರ್ಡ್, ಆಧಾರ್ ಕಾರ್ಡ್ ಇತ್ಯಾದಿ). ಈ ಹಿಂದೆ ಎಲ್ಲಾದರೂ ಕೆಲಸ ಮಾಡಿದ್ದರೆ, ಅದರ ದಾಖಲೆಗಳನ್ನು ಸಹ ಸೇರಿಸಬಹುದು.

ಸಂದರ್ಶನ ನಡೆಯುವ ಸ್ಥಳ
ಸಮಿತಿ ಕೊಠಡಿ
ಅಡ್ಮಿನಿಸ್ಟ್ರೇಟಿವ್​ ಬ್ಲಾಕ್​ ಡಿಜಿಸ್ಟ್ರಾರ್​​ ಕಚೇರಿ
ನಿಮ್ಹಾನ್ಸ್ -ಬೆಂಗಳೂರು
ಕರ್ನಾಟಕ.

ಇದನ್ನೂ ಓದಿ: Army School Recruitment 2022: ಮಿಲಿಟರಿ ಶಾಲೆಗಳಲ್ಲಿ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನ

(nimhans recruitment 2022 for attender post apply in Bengaluru)

Comments are closed.