ಬೆಂಗಳೂರು : ಖ್ಯಾತ ನಟಿ ಪ್ರಣೀತಾ ಸುಭಾಷ್ ಮದುವೆ ಪೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಬೆನ್ನಲ್ಲೆ ಮದುವೆ ವಿಚಾರದ ಕುರಿತು ಸ್ವತಃ ನಟಿ ಪ್ರಣೀತಾ ಸ್ಪಷ್ಟನೆಯನ್ನು ನೀಡಿ, ಕ್ಷಮೆ ಯಾಚಿಸಿದ್ದಾರೆ.

ತನ್ನ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಪತ್ರವೊಂದನ್ನು ಅಪ್ಲೋಡ್ ಮಾಡಿರುವ ನಟಿ ಪ್ರಣೀತಾ, ಮೇ 30ರ ಮದುವೆಯ ವಿಚಾರವನ್ನು ಒಪ್ಪಿಕೊಂಡಿದ್ದಾರೆ. ಅತ್ಯಾಪ್ತರ ಸಮ್ಮುಖದಲ್ಲಿ ಸಪ್ತಪದಿ ನಾವಿಬ್ಬರೂ ಸಪ್ತಪದಿ ತುಳಿದಿದ್ದೇವೆ. ಈ ಸಂತಸವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿ ದ್ದೇನೆ ಅಂತಾ ಪತ್ರವನ್ನು ಆರಂಭಿಸಿದ್ದಾರೆ.

ನಾನು ಎಲ್ಲರನ್ನೂ ಮದುವೆಗೆ ಆಹ್ವಾನಿಸಬೇಕು ಅಂದುಕೊಂಡಿದ್ದೆ. ಆದರೆ ಅಂತಿಮ ಹಂತದಲ್ಲಿ ಮದುವೆ ದಿನಾಂಕ ನಿಗದಿಯಾಗಿತ್ತು. ಕೊರೊನಾ ವೈರಸ್ ಸೋಂಕಿನಿಂದಾಗಿ ಕೆಲವೊಂದು ನಿಯಮ ಗಳನ್ನು ಪಾಲನೆ ಮಾಡಬೇಕಾದ ಹಿನ್ನೆಲೆಯಲ್ಲಿ ಕರೆಯಲು ಸಾಧ್ಯವಾಗಿಲ್ಲ ಎಂದಿದ್ದಾರೆ.

ಪ್ರಣೀತಾ ಸುಭಾಷ್ ಉದ್ಯಮಿ ನಿತಿನ್ ರಾಜು ಆವರನ್ನು ಮದುವೆ ಯಾಗಿದ್ದಾರೆ ಅನ್ನೋ ಸುದ್ದಿ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ನಟಿ ಪತ್ರದ ಮೂಲಕ ಮದುವೆಯ ಕುರಿತು ಸ್ಪಷ್ಟನೆ ಕೊಟ್ಟಿದ್ದಾರೆ.