ಉಡುಪಿ : 50 ಸೋಂಕಿತರಿರುವ ಗ್ರಾಮ ಸಂಪೂರ್ಣ ಬಂದ್ : ಜೂ.2ರಿಂದ ಲಾಕ್ ಆಗೋ ಗ್ರಾಮಗಳು ಯಾವುವು ಗೊತ್ತಾ ?

ಉಡುಪಿ : ಕೊರೊನಾ ವೈರಸ್ ಸೋಂಕಿನ ತಡೆಗೆ ಉಡುಪಿ‌ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಈ‌ ನಡುವಲ್ಲೇ 50ಕ್ಕೂ ಅಧಿಕ ಸೋಂಕು ಹೊಂದಿರುವ ಗ್ರಾಮಗಳನ್ನು ಸಂಪೂರ್ಣ ವಾಗಿ ಬಂದ್ ಮಾಡಲು ಜಿಲ್ಲಾಡಳಿತ ಮುಂಂದಾಗಿದೆ.

ಇಷ್ಟು ದಿನ ಕೊರೊನಾ ಸೋಂಕಿತರ ಮನೆಗಳನ್ನು ಸೀಲ್‌ಡೌನ್ ಮಾಡಲಾಗುತ್ತಿತ್ತು. ಅಲ್ಲದೇ ಬ್ಯಾಂಕಿಂಗ್ ಅವಧಿ, ಅನಗತ್ಯ ಸಂಚಾರಕ್ಕೆ‌ ಬ್ರೇಕ್ ಹಾಕಿರುವ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರು ಹೊಸ ಕಾರ್ಯಕ್ಕೆ ಮುಂದಾಗಿದ್ದಾರೆ. ಜಿಲ್ಲೆಯಲ್ಲಿ ಕಠಿಣ ನಿಯಮ ಜಾರಿಯಾದ‌ ಬೆನ್ನಲ್ಲೇ ಸೋಂಕಿನ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ.

ಸರಾಸರಿ ಸಾವಿರ ಪ್ರಕರಣ‌ ದಾಖಲಾಗುತ್ತಿದ್ದ ಉಡುಪಿ ಜಿಲ್ಲೆಯಲ್ಲೀಗ ಕೇವಲ 600 ಪ್ರಕರಣ ದಾಖಲಾಗುತ್ತಿದೆ. ಈ‌ ನಡುವಲ್ಲೇ 50ಕ್ಕೂ ಆಧಿಕ ಸೋಂಕಿತರಿದ್ರೆ ಅಂತಹ ಗ್ರಾಮಗಳನ್ನು ಸಂಪೂರ್ಣ ವಾಗಿ ಬಂದ್ ಮಾಡಲು ಜಿಲ್ಲಾಡಳಿತ ಮುಂದಾಗಿದೆ. ಜೂನ್ 2 ರಿಂದಲೇ ಹೊಸ ನಿಯಮ ಜಾರಿಗೆ ಬರಲಿದೆ. ಈ ನಿಯಮ ಜಾರಿಗೆ ಬಂದ್ರೆ ಗ್ರಾಮಗಳ ಸಂಪರ್ಕ ಸಂಪೂರ್ಣವಾಗಿ ಬಂದ್ ಆಗಲಿದೆ.

ಉಡುಪಿ ಜಿಲ್ಲೆಯಲ್ಲಿ ಜೂನ್ 2 ರಿಂದ ಕಡ್ತಲ, ನಿಟ್ಟೆ, ಮರ್ಣೆ, ಪಳ್ಳಿ, ವರಂಗ, ಮುದ್ರಾಡಿ, ಮಿಯಾರು, ಬೆಳ್ಮಣ್ಣು, ಬೆಳ್ವೆ, ಕುಕ್ಕುಂದೂರು, ಶಿರ್ಚ, ಈದು, ಮಾಳ, ಪಡುಬಿದ್ರಿ, ಬೊಮ್ಮರಬೆಟ್ಟು, ಪೆರ್ಡೂರು ತೆಂಕನಿಡಿಯೂರು, ಅಲೆವೂರು, 80 ಬಡಗಬೆಟ್ಟು, 38 ಕಳತ್ತೂರು, ಆಲೂರು, ಆಜ್ರಿ, ಕುಂಜ್ಞಾಡಿ, ಹಾಲಾಡಿ, ಇಡೂರು, ಕೋಟೇಶ್ವರ, ಹೊಂಬಾಡಿ ಮುಂಡಾಡಿ, ಕಾವ್ರಾಡಿ, ಕಂಬದಕೋಣೆ, ಶಿರೂರು, ಜಡ್ಕಲ್ ಗ್ರಾಮಗಳನ್ನು ಸಂಪೂರ್ಣವಾಗಿ ಲಾಕ್ ಡೌನ್ ಮಾಡಲು‌ ನಿರ್ಧರಿಸಿದೆ.

Comments are closed.