ಮಂಗಳವಾರ, ಏಪ್ರಿಲ್ 29, 2025
HomeBreakingRakshith Shetty : ನಾಟಿಗೂ ಸೈ,ನಟನೆಗೂ ಜೈ….! ಸಿಂಪಲ್ ಸ್ಟಾರ್ ಸೂಪರ್ ಟ್ಯಾಲೆಂಟ್….!!

Rakshith Shetty : ನಾಟಿಗೂ ಸೈ,ನಟನೆಗೂ ಜೈ….! ಸಿಂಪಲ್ ಸ್ಟಾರ್ ಸೂಪರ್ ಟ್ಯಾಲೆಂಟ್….!!

- Advertisement -

ಇತ್ತೀಚೆಗಷ್ಟೇ ಬಿಗ್ ಬ್ಯಾನರ್ ಅಡಿಯಲ್ಲಿ ಸಿನಿಮಾ ಘೋಷಿಸಿದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ, ಯಾವು ಹಮ್ಮು ಬಿಮ್ಮು ತಲೆಗೇರಿಸಿಕೊಳ್ಳದೇ ಹುಟ್ಟೂರಿನ ಭತ್ತದ ಗದ್ದೆಗಿಳಿದು ನೇಜಿ‌ನಾಟಿ‌ ಮಾಡಿ ನಾಟಿಗೂ, ನಟನೆಗೂ ಸೈ ಎಂದು ತೋರಿಸಿಕೊಂಡಿದ್ದಾರೆ.

ಉಡುಪಿಯ ಭಿರ್ತಿಯಲ್ಲಿ ಹಡಿಲು ಬಿದ್ದ ಭೂಮಿಯನ್ನು ಮತ್ತೆ ಕೃಷಿ ಚಟುವಟಿಕೆಗೆ ಬಳಸಿಕೊಳ್ಳುವ ಕಾರ್ಯಕ್ರಮವನ್ನು ಸ್ಥಳೀಯ ಶಾಸಕ ರಘುಪತಿ ಭಟ್ ಹಮ್ಮಿಕೊಂಡಿದ್ದರು. ಈ ಕಾರ್ಯವನ್ನು ಭತ್ತದ ನೇಜಿ‌ನಾಟಿ‌ ಮಾಡುವ ಮೂಲಕ ಚಾಲನೆ ನೀಡಿದ್ರು ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ.

ಕಪ್ಪು ಶರ್ಟ್, ಬಿಳಿ ಪಂಜೆ ತೊಟ್ಟು ತಲೆಗೆ ಹಾಳೆಯ‌ ಮುಟ್ಟಾಳೆ ತೊಟ್ಟು ಕೆಸರು ಗದ್ದೆಗೆ ಇಳಿದ ರಕ್ಷಿತ್ ಶೆಟ್ಟಿ ಯಾವ ಕೃಷಿ ಕಾರ್ಮಿಕನಿಗೂ ಕಡಿಮೆ ಇಲ್ಲದೇ ಸರ ಸರನೇ ನಾಟಿ ಮಾಡಿ ಸಂಭ್ರಮಿಸಿದರು. ಇನ್ನು ಗದ್ದೆಗಿಳಿದ ಸಿಂಪಲ್ ಸ್ಟಾರ್ ನೋಡೋಕೆ ಸುತ್ತಮುತ್ತಲಿನ ನೂರಾರು ಹೈಕಳು ಆಗಮಿಸಿದ್ದು ರಕ್ಷಿತ್ ಶೆಟ್ಟಿ ಜೊತೆ ಪೋಟೋ ತೆಗೆಸಿಕೊಂಡು ಸಂಭ್ರಮಿಸಿದರು.

ನಾಟಿ‌ಮಾಡಿದ ಬಳಿಕ‌ ಮಾತನಾಡಿದ ರಕ್ಷಿತ್ ಶೆಟ್ಟಿ ಅಜ್ಜಿ ಮನೆಯಲ್ಲಿ ಕಳೆದ ಬಾಲ್ಯ, ಕೃಷಿ ಕಾರ್ಯವನ್ನು ನೆನಪಿಸಿಕೊಂಡರು. ಅಷ್ಟೇ ಅಲ್ಲ ಶ್ರೀಮನ್ನಾರಾಯಣದಂತೆ ಮತ್ತೆ ಊರಿಗೆ ಮರಳಿ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಯುವಕರನ್ನು ಪ್ರೋತ್ಸಾಹಿಸಲು ಹಡೀಲು ಬಿದ್ದ ಭೂಮಿಯಲ್ಲಿ ಕೃಷಿ ಆರಂಭಿಸುತ್ತಿ ರುವ ಶಾಸಕರು ಹಾಗೂ ಗ್ರಾಮಸ್ಥರ ಪ್ರಯತ್ನವನ್ನು ಶ್ಲಾಘಿಸಿದರು.

ಅಷ್ಟೇ ಅಲ್ಲ ಅಗತ್ಯ ಬಿದ್ದರೆ ಕರಾವಳಿಯ ಸಾಂಪ್ರದಾಯಿಕ ಕುಚಲಕ್ಕಿಗೆ ಬ್ರ್ಯಾಂಡ್ ಅಂಬಾಸಿಡರ್ ಆಗಲು ಸಿದ್ಧ ಎಂದು ರಕ್ಷಿತ್ ಶೆಟ್ಟಿ ಹೇಳಿದ್ದಾರೆ. ಒಟ್ಟಿನಲ್ಲಿ ಕೃಷಿ ಗದ್ದೆಯಲ್ಲಿ, ಕೆಸರು ತುಳಿದು ನೇಜಿ‌ನಾಟಿ‌ ಮಾಡಿದ ಸಿಂಪಲ್ ಸ್ಟಾರ್ ಅಭಿಮಾನಿಗಳ ಮನಸ್ಸು ಗೆದ್ದಿದ್ದು ಪೋಟೋಸ್, ವಿಡಿಯೋಸ್ ಸಖತ್ ವೈರಲ್ ಆಗಿದೆ.

RELATED ARTICLES

Most Popular