ಕಣ್ಣೇ ಅದಿರಿಂದಿ ಗಾಯಕಿಗೆ ಸಂಕಷ್ಟ….! ಮೈಸಮ್ಮ ಭಕ್ತರ ಆಕ್ರೋಶಕ್ಕೆ ಗುರಿಯಾದ ಮಂಗ್ಲಿ…!!

ತೆಲುಗು ಗಾಯಕಿಯಾಗಿ ಹಲವು ವರ್ಷಗಳಿಂದ ಗಾಯನ ಕ್ಷೇತ್ರದಲ್ಲಿದ್ದರೂ ಗಾಯಕಿ ಮಂಗ್ಲಿಗೇ ಇನ್ನಿಲ್ಲದ ಪಬ್ಲಿಸಿಟಿ ತಂದುಕೊಟ್ಟಿದ್ದು, ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ. ಕಣ್ಣೇ ಅದಿರಿಂದಿ ಎನ್ನುತ್ತ ಮಿಂಚಿದ್ದ ಗಾಯಕಿ ಮಂಗ್ಲಿ ಇದೀಗ ವಿವಾದಕ್ಕೆ ಸಿಲುಕಿದ್ದಾರೆ. ಅವರ ಹಾಡಿದ ಜನಪದ ಗೀತೆಯೊಂದು ದೇವತೆ ಮೈಸಮ್ಮ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.

ಚಲನಚಿತ್ರ ಗೀತೆಗಳ ಜೊತೆಗೆ ಜಾನಪದ ಗೀತೆಗಳ ಗಾಯನದಲ್ಲೂ ಹೆಸರು ಮಾಡಿದ ನಟಿ ಮಂಗ್ಲಿ,  ತಮ್ಮದೇ ಆದ ಯೂಟ್ಯೂಬ್ ಚಾನೆಲ್ ಹೊಂದಿದ್ದಾರೆ. ತೆಲುಗು ಸಂಸ್ಕೃತಿಯ ಎಲ್ಲ ರೀತಿಯ ಜಾನಪದ ಹಾಡುಗಳಿಗೆ ಜೀವ ತುಂಬುವ ಮಂಗ್ಲಿ ಒಂದೊಂದು ಹಬ್ಬಹರಿದಿನ ಬಂದಾಗಲೂ ಅದಕ್ಕೆ ಸಂಬಂಧಿಸಿದ ಜಾನಪದ ಹಾಡು ಹಾಡಿ ಮನಗೆಲ್ಲುತ್ತಾರೆ.

ತೆಲುಗಿನ ಬೋನಾಲು ಪಡುಂಗ ಆಚರಣೆಯ ಸಂಬಂಧ ಮಂಗ್ಲಿ ಜಾನಪದ ಹಾಡೊಂದನ್ನು ಹಾಡಿದ್ದು, ಯೂಟ್ಯೂಬ್ ನಲ್ಲಿ ಹಾಡನ್ನು ಹಂಚಿಕೊಂಡಿದ್ದಾರೆ. ಆದರೆ ಈ ಹಾಡಿಗೆ ತೆಲುಗು ಸಮುದಾಯದ  ಮೈಸಮ್ಮ ದೇವತೆ ಭಕ್ತರ ಆಕ್ಷೇಪ ವ್ಯಕ್ತವಾಗಿದೆ.

ಬೋನಾಲು ಹಾಡಿನಲ್ಲಿ  ಕೆಲವು ಸಾಲುಗಳ ಬಗ್ಗೆ ಭಕ್ತರ ಆಕ್ಷೇಪ ವ್ಯಕ್ತವಾಗಿದ್ದು, ಮೈಸಮ್ಮ ದೇವಿಯ ಶಕ್ತಿಯನ್ನು ವಿಮರ್ಶೆ ಮಾಡುತ್ತ ಬೈಯ್ಯುವ ರೀತಿಯಲ್ಲಿ ಸಾಲುಗಳನ್ನು ಹಾಡಿನಲ್ಲಿ ಬಳಸಲಾಗಿದೆ ಎಂದು ಭಕ್ತರು ಆರೋಪಿಸಿದ್ದಾರೆ.

ಆದರೆ ಬೋನಾಲು 2021 ಹಾಡು ಸಖತ್ ಹಿಟ್ ಆಗಿದ್ದು ಸುಂದರವಾಗಿ ಹಾಡಿರೋದರ ಜೊತೆಗೆ ಸಖತ್ತಾಗಿ ಡ್ಯಾನ್ಸ್ ಮಾಡಿರೋ ಮಂಗ್ಲಿ ಡ್ರೆಡಿಶನ್ ಔಟ್ ಫಿಟ್, ಡ್ಯಾನ್ಸ್ ಹಾಗೂ ಹಾಡಿನ ಮೂಲಕ ಗಮನ ಸೆಳೆದಿದ್ದಾರೆ.

ಮರದ ಕೆಳಗೆ  ಸಂಬಂಧಿಗಳಂತೆ ಕೂತುಬಿಟ್ಟಿದ್ದೀಯ, ಬೊಂಬೆಯಂತೆ ಅಲುಗದಂತೆ ಇದ್ದೀಯಾ ಎಂಬಿತ್ಯಾದಿ ಸಾಲುಗಳನ್ನು ಹಾಡಿನಲ್ಲಿ ಬಳಸಲಾಗಿದ್ದು, ಇದಕ್ಕೆ ಭಕ್ತರ ಆಕ್ಷೇಪ ವ್ಯಕ್ತವಾಗಿದೆ. ಇದರಿಂದ ಕೇಳುಗರಿಗೆ ಮೈಸಮ್ಮ ದೇವಿ ಭಕ್ತರನ್ನು  ಕಾಯೋದನ್ನು ಮರೆತಿದ್ದಾಳೆ ಎಂಬ ಭಾವನೆ ಬರುತ್ತದೆ ಎಂಬ ಆತಂಕ ಭಕ್ತರದ್ದು.

https://www.youtube.com/watch?v=kGfkL50mz5A

ಆದರೆ ಸಾಮಾನ್ಯವಾಗಿ ಜಾನಪದ ಶೈಲಿಯಲ್ಲಿ ದೇವರೊಂದಿಗೆ ಜಗಳವಾಡುವ ಅಥವಾ ದೇವರನ್ನು ಬೈಯ್ಯುವ ಸಾಕಷ್ಟು ಹಾಡುಗಳು ಎಲ್ಲ ಭಾಷೆಯಲ್ಲೂ ಬಳಕೆಯಲ್ಲಿದೆ. ಈಗ ಮಂಗ್ಲಿ ಯೂಟ್ಯೂಬ್ ವಿವಾದಕ್ಕೆ ಏನಂತ ಉತ್ತರಿಸುತ್ತಾರೆ ಕಾದು ನೋಡಬೇಕಿದೆ.

Comments are closed.