ಸೋಮವಾರ, ಏಪ್ರಿಲ್ 28, 2025
HomeCinemaಮೌನವಾಗಿದ್ಯಾಕೇ ಮೋಹಕ ತಾರೆ ! ಕೊನೆಗೂ ಅಜ್ಞಾತವಾಸಕ್ಕೆ ಕಾರಣ ಕೊಟ್ಟ ರಮ್ಯ

ಮೌನವಾಗಿದ್ಯಾಕೇ ಮೋಹಕ ತಾರೆ ! ಕೊನೆಗೂ ಅಜ್ಞಾತವಾಸಕ್ಕೆ ಕಾರಣ ಕೊಟ್ಟ ರಮ್ಯ

- Advertisement -

ಬೆಂಗಳೂರು : ಕಳೆದ ಎರಡು ದಿನಗಳಿಂದ ಕರ್ನಾಟಕದಲ್ಲಿ ರಾಜಕಾರಣಕ್ಕಿಂತ ಹೆಚ್ಚು ಬಿಸಿ ಏರಿಸಿರುವ ಚರ್ಚೆ ನಟಿ ಹಾಗೂ ಮಾಜಿ ಸಂಸದೆ ರಮ್ಯ (Actor Ramya) ಮಂಡ್ಯ ಪ್ರವಾಸ. ರಮ್ಯ ರಾಜಕೀಯಕ್ಕೆ ರ್ರೀ ಎಂಟ್ರಿ, ಅಂಬಿ ಅವಮಾನ, ಸಿನಿಮಾಕ್ಕೆ ಮತ್ತೆ ಬರ್ತಾರಾ ಈ ಹೀಗೆ ನಾನಾ ಬಗೆಯ ಉಹಾಪೋಹಗಳನ್ನು ಹುಟ್ಟಿಹಾಕಿದ ಈ ಪ್ರವಾಸದಲ್ಲಿ ರಮ್ಯ ತಮ್ಮ ಬದುಕಿನ ಕಹಿ ಸತ್ಯ ವೊಂದನ್ನು ಬಿಚ್ಚಿಟ್ಟಿದ್ದಾರೆ. ಅದೇ ಅವರ ಅನಾರೋಗ್ಯ . ಸ್ಯಾಂಡಲ್ ವುಡ್ ನ ಮೋಹಕ ತಾರೆಯ ಕನಸುಗಳನ್ನು ಅನಾರೋಗ್ಯ ಕಟ್ಟಿ ಹಾಕಿದೆ.

ಮಹತ್ವಾಕಾಂಕ್ಷಿ, ಸುಂದರಿ, ಪ್ರಬುದ್ಧೆ, ಪದವೀಧರೆ ರಮ್ಯ ರಾಜಕಾರಣಕ್ಕೆ ಕಾಲಿಟ್ಟಿದ್ದು ಆಕಸ್ಮಿಕವಾದರೂ ಸಾಧನೆಯ ಕನಸೂ ಇತ್ತು. ಮೊದಲ ಹಂತದಲ್ಲೇ ಚುನಾವಣೆ ಗೆದ್ದು ಸಂಸದೆಯಾದ ರಮ್ಯ ಇನ್ನಷ್ಟು ಕಾಲ ರಾಜ್ಯ ಹಾಗೂ ಕೇಂದ್ರ ರಾಜಕಾರಣದಲ್ಲಿ ಮಿಂಚುವ ಅವಕಾಶವೂ ಇತ್ತು. ಹೀಗಾಗಿ ರಮ್ಯ ಬಹುಕಾಲ ರಾಜಕೀಯವೊಂದನ್ನೇ ಉಳಿಸಿಕೊಂಡು ತಮಗೆ ಹೆಸರು,ಖ್ಯಾತಿ ತಂದುಕೊಟ್ಟ ಚಿತ್ರರಂಗವನ್ನು ದೂರವಿಟ್ಟಿದ್ದರು.‌ಮತ್ತೆಂದೂ ಬಣ್ಣ ಹಚ್ಚದೇ ರಾಜಕೀಯವನ್ನೇ ಮುಂದುವರೆಸಿಕೊಂಡು ಹೋಗುವ ಲೆಕ್ಕಾಚಾರದಲ್ಲಿದ್ದರು.

ಇದಕ್ಕೇ ಪೂರಕ ಎಂಬಂತೆ ಕಾಂಗ್ರೆಸ್ ನಲ್ಲಿ ನಟಿ ರಮ್ಯಗೆ ಸೋಷಿಯಲ್ ಮೀಡಿಯಾದ ದೊಡ್ಡ ಜವಾಬ್ದಾರಿ ಕೂಡ ಸಿಕ್ಕಿತ್ತು. ಆದರೆ ಎಲ್ಲವೂ ಸರಿಯಾಗಿ ನಡೆಯುತ್ತಿದೇ ಎಂದು ಕೊಳ್ಳುತ್ತಿರುವಾಗಲೇ ರಮ್ಯ ರಾಜಕೀಯದಿಂದಲೂ ಹೊರನಡೆದರು. ಅಂದಾಜು ಎರಡು ವರ್ಷಗಳ ಕಾಲ ರಮ್ಯ ಬೆಂಗಳೂರು ಹಾಗೂ ರಾಜ್ಯದಿಂದಲೂ ಒಡನಾಟ ಕಳೆದುಕೊಂಡು ಅಜ್ಞಾತವಾಗಿದ್ದರು. ಈಗ ಮಂಡ್ಯ ಪ್ರವಾಸದ ಹೊತ್ತಿನಲ್ಲಿ ನಟಿ ರಮ್ಯ ತಮ್ಮ ರಾಜಕೀಯ ಸನ್ಯಾಸ, ಬೆಂಗಳೂರಿನಿಂದ ದೂರವುಳಿದಿರೋದು ಹಾಗೂ ತಮ್ಮ ಬದುಕಿನ ಆಗುಹೋಗುಗಳ ಸತ್ಯವನ್ನು ಅನಾವರಣಗೊಳಿಸಿದ್ದಾರೆ. ರಮ್ಯ ಟ್ಯೂಮರ್ ನಿಂದ ಬಳಲಿದ್ದೇ ಎಂದು ಹೇಳಿಕೊಂಡಿದ್ದಾರೆ. ಹೌದು ನಟಿ ರಮ್ಯಗೆ ಎಲುಬಿಗೆ ಸಂಬಂಧಿಸಿದ ಮಾರಕ ರೋಗವೊಂದು ತಗುಲಿದೆ ಎಂದು ಹೇಳಲಾಗಿತ್ತು. ಆದರೆ ಯಾವ ಆರೋಗ್ಯ ಸಮಸ್ಯೆ ಎಂಬುದರ ಬಗ್ಗೆ ಯಾರಿಗೂ ಸ್ಪಷ್ಟತೆ ಇರಲಿಲ್ಲ.

ರಮ್ಯ ಟ್ಯೂಮರ್ ಹಾಗೂ ಎಲುಬು ಸಂಬಂಧಿ ಗಂಭೀರ ಸಮಸ್ಯೆಯಿಂದ ಬಳಲುತ್ತಿದ್ದಾರಂತೆ. ಈ ಅರೋಗ್ಯ ಸಮಸ್ಯೆಯ ಚಿಕಿತ್ಸೆಗಾಗಿ ರಮ್ಯ (Actor Ramya) ಕೆಲ ವರ್ಷ ವಿದೇಶದಲ್ಲೇ ಉಳಿದು ಕೊಂಡಿದ್ದು ಅದೇ ಕಾರಣಕ್ಕೆ ರಮ್ಯ ಅಂಬಿ ಅಂತಿಮ ದರ್ಶನಕ್ಕೂ ಕೂಡ ಬಂದಿರಲಿಲ್ಲ. ಈಗ ಚಿಕಿತ್ಸೆ ಪೂರ್ತಿಗೊಳಿಸಿ ಚೇತರಿಸಿಕೊಂಡಿರೋ ರಮ್ಯ ಇನ್ನೂ ಪೂರ್ತಿಯಾಗಿ ಅನಾರೋಗ್ಯದ ಕಪಿ ಮುಷ್ಟಿ ಯಿಂದ ಹೊರಬಂದಿಲ್ಲ. ಹೀಗಾಗಿ ರಮ್ಯ ಮೊದಲಿನ ಮೋಹಕ,ಮಾದಕ ಮೈಮಾಟ ಕಳೆದುಕೊಂಡು ಸಾಕಷ್ಟು ತೂಕ ಏರಿಸಿಕೊಂಡಿದ್ದಾರೆ. ಇನ್ನು ನಟನೆ ಹಾಗೂ ಸಕ್ರಿಯ ರಾಜಕಾರಣ ಆರೋಗ್ಯದ ದೃಷ್ಟಿಯಿಂದ ಸಾಧ್ಯವಿಲ್ಲ ಎಂಬ ವೈದ್ಯರ ಸೂಚನೆ ಹಿನ್ನೆಲೆಯಲ್ಲಿ ರಮ್ಯ ಸಿನಿಮಾ ನಿರ್ಮಾಣ ಹಾಗೂ ಕಾಂಗ್ರೆಸ್ ಪರ ಪ್ರಚಾರಕ್ಕಷ್ಟೇ ತಮ್ಮನ್ನು ಸಿಮಿತಗೊಳಿಸಿಕೊಂಡಿದ್ದಾರಂತೆ. ಆದರೆ ರಮ್ಯ ಅನುಪಸ್ಥಿತಿ, ಗೈರುಹಾಜರಿ ಹಾಗೂ ಮೌನಕ್ಕೆ ಸಾಕಷ್ಟು ಟೀಕೆ ವ್ಯಕ್ತವಾಗಿದೆ. ಹೀಗಿದ್ದೂ ರಮ್ಯ ಯಾವುದಕ್ಕೂ ಪ್ರತಿಕ್ರಿಯಿಸದೇ ನಾನು ನನ್ನ ಬದುಕಿನಲ್ಲಿ ಯಾವುದನ್ನೂ ಹಂಚಿಕೊಳ್ಳುವುದಿಲ್ಲ ಮತ್ತು ಯಾರನ್ನೂ ಹಚ್ಚಿಕೊಳ್ಳುವುದಿಲ್ಲ ಎನ್ನುವ ಮೂಲಕ ಎಲ್ಲದರಿಂದ ವಿಮುಖವಾಗಿ ಉಳಿಯುವ ಮುನ್ಸೂಚನೆ ನೀಡಿದ್ದಾರೆ.

ಇದನ್ನೂ ಓದಿ : ಸದ್ದಿಲ್ಲದೇ ಹೊಸ ಸಿನಿಮಾಗೆ ಸಜ್ಜಾದ ನಟಿ: ಮೇಘನಾ ನ್ಯೂ ಲುಕ್ ರಿವೀಲ್

ಇದನ್ನೂ ಓದಿ : ಬಜರಂಗದಳ ನಿಷೇಧದಿಂದ ಹಿಂದುತ್ವಕ್ಕೆ ಧಕ್ಕೆ, ಕಾಂಗ್ರೆಸ್‌ಗೆ ಪ್ರಣಾಳಿಕೆ ತಂತು ಪ್ರಾಣಸಂಕಟ

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular