ಬಜರಂಗದಳ ನಿಷೇಧದಿಂದ ಹಿಂದುತ್ವಕ್ಕೆ ಧಕ್ಕೆ, ಕಾಂಗ್ರೆಸ್‌ಗೆ ಪ್ರಣಾಳಿಕೆ ತಂತು ಪ್ರಾಣಸಂಕಟ

ಬೆಂಗಳೂರು : Bajrang dal Ban : ರಾಜ್ಯ ರಾಜಕಾರಣದಲ್ಲಿ ಸದ್ಯ ವಿಧಾನಸಭಾ ಚುನಾವಣೆ ಸದ್ದು ಮಾಡುತ್ತಿದೆ. ಸದ್ಯದ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದರೇ ರಾಜ್ಯದಲ್ಲಿ ಸ್ಪಷ್ಟ ಬಹುಮತದ ಸರ್ಕಾರ ರಚನೆ ಕಷ್ಟ ಸಾಧ್ಯ ಎಂಬ ಸ್ಥಿತಿ ನಿರ್ಮಾಣವಾಗಿದೆಯಾದರೂ ಬಿಜೆಪಿ,ಕಾಂಗ್ರೆಸ್,ಜೆಡಿಎಸ್ ಗೆಲುವಿಗಾಗಿ ಶತಪ್ರಯತ್ನ ಆರಂಭಿಸಿವೆ. ಪ್ರಣಾಳಿಕೆಯಲ್ಲಿ ಉಚಿತ ಯೋಜನೆಗಳ ಸುರಿಮಳೆ ಸುರಿಸಿ ಜನರ ಮನಗೆಲ್ಲಲು ಹೊರಟಿದ್ದ ಕಾಂಗ್ರೆಸ್ ಗೆ ಈಗ ಪ್ರಣಾಳಿಕೆಯೇ ಮುಳುವಾಗುವ ಸಾಧ್ಯತೆ ಇದೆ.

ರಾಜ್ಯದಲ್ಲಿ ಚುನಾವಣೆ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆಯಲ್ಲ ಹಿಂದೂತ್ವ ಹಾಗೂ ಕಾಂಗ್ರೆಸ್ ನಡುವೆ ಎಂಬ ಮಾತು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ದುರಂತ ಎಂಬಂತೆ ಈ ಮಾತಿಗೆ ಸೂಕ್ತವಾಗುವ ವಿವಾದವೊಂದನ್ನು ಕಾಂಗ್ರೆಸ್ ಪ್ರಣಾಳಿಕೆ ಹುಟ್ಟುಹಾಕಿದೆ. ನಾವು ಅಧಿಕಾರಕ್ಕೆ ಬಂದರೇ ಭಜರಂಗದಳವನ್ನು ಬ್ಯಾನ್ (Bajrang dal Ban) ಮಾಡೋದಾಗಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಘೋಷಿಸಿದೆ. ಈ ಘೋಷಣೆ ವಿವಾದ ಸೃಷ್ಟಿಸಿದೆ. ಭಜರಂಗ ಸಂಘಟನೆ ನಿಷೇಧಿಸಲು ಹೊರಟಿರುವ ಕಾಂಗ್ರೆಸ್ ಹಿಂದುತ್ವ ವಿರೋಧಿ ಹಾಗೂ ಹನುಮಂತನ ವಿರೋಧಿ ಎಂದು ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳು ಆರೋಪಿಸುತ್ತಿವೆ.

ಕಾಂಗ್ರೆಸ್ ನ ಭಜರಂಗದಳ ನಿಷೇಧ ವಿಚಾರ ಬಿಜೆಪಿಗೆ ಚುನಾವಣಾ ಹೊತ್ತಲ್ಲಿ ಅತಿದೊಡ್ಡ ರಾಜಕೀಯ ಅಸ್ತ್ರ ಒದಗಿಸಿದೆ. ಭಜರಂಗದಳ ನಿಷೇಧ ಬದಲು ಹನುಮನ ಭಕ್ತರಿಗೆ, ಆರಾಧಕರಿಗೆ ಕಾಂಗ್ರೆಸ್ ಅವಮಾನ ಮಾಡಿದೆ.ಹಿಂದೂ ವಿರೋಧಿ ಕಾಂಗ್ರೆಸ್ ಎಂದು ಬಿಜೆಪಿ ಚುನಾವಣಾ ಪ್ರಚಾರ ಮಾಡಲಾರಂಭಿಸಿದೆ. ಸ್ವತಃ ಪಿಎಂ ಮೋದಿಯವರೂ ಕೂಡ ಭಜರಂಗದಳ ನಿಷೇಧ ವಿಚಾರಕ್ಕೆ ಕೈ ನಾಯಕರ ಮೇಲೆ ಅಸಮಾಧಾನ ಹಂಚಿಕೊಂಡಿದ್ದಾರೆ. ಮೂಲಗಳ ಮಾಹಿತಿ ಪ್ರಕಾರ ರಾಹುಲ್ ಗಾಂಧಿ ಸೂಚನೆ ಮೇರೆಗೆ ಸುರ್ಜೇವಾಲ ನಿಷೇಧ ವಿಚಾರ ಸೇರಿಸಲು ಕಾರಣ ಎನ್ನಲಾಗ್ತಿದೆ.

ರಾಜ್ಯ ಕೈ ನಾಯಕರಿಗೆ ಈ ವಿಚಾರ ಗೊತ್ತೆ ಇರಲಿಲ್ಲವಂತೆ ಇದರಿಂದ ಕೈ ಅಭ್ಯರ್ಥಿಗಳಿಗೆ ಅನೇಕ ಕಡೆ ಹಿನ್ನಡೆ ಭೀತಿ ಎದುರಾಗಿದ್ದು, ತಮ್ಮ ತಮ್ಮ ಕ್ಷೇತ್ರಗಳ ಹಿಂದೂ ಮತಗಳು ಬಿಜೆಪಿ ಪರ ವಾಲೋ ಆತಂಕದಲ್ಲಿ ಅಭ್ಯರ್ಥಿಗಳು ಅಸಮಧಾನಗೊಂಡಿದ್ದಾರಂತೆ. ಇದೇ ಕಾರಣಕ್ಕೆ ಕೈ ನಿಷೇಧ ಪ್ರಣಾಳಿಕೆ ಬಗ್ಗೆ ಅಸಮಾಧಾನ ಸ್ವತಃ ಕಾಂಗ್ರೆಸ್ಸಿಗರಿಂದಲೇ ವ್ಯಕ್ತವಾಗಿದೆ. ಚುನಾವಣೆ ಹೊತ್ತಲ್ಲೆ ಇದೆಲ್ಲ ಬೇಕಿತ್ತ ಎಂದು ಹಲವು ನಾಯಕರು, ಅಭ್ಯರ್ಥಿಗಳು ಪ್ರಣಾಳಿಕೆ ಸಮಿತಿ ಸಂಚಾಲಕ ಜಿ ಪರಮೇಶ್ವರ್ ಗೆ ಕರೆಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದಾರಂತೆ.

ಸ್ವಪಕ್ಷೀಯ ನಾಯಕರ ಅಸಮಾಧಾನ ಹಿನ್ನೆಲೆಯಲ್ಲಿ ಕಂಗಾಲಾಗಿರೋ ಜಿ.ಪರಮೇಶ್ವರ್ ನಿಷೇಧ ಪ್ರಸ್ತಾಪ ನಂದಲ್ಲ, ಸುರ್ಜೇವಾಲ ಐಡಿಯಾ. ಸುರ್ಜೆವಾಲರನ್ನೆ ಕೇಳಿ ಎಂದು ಜಾರಿಕೊಳ್ಳುವ ಪ್ರಯತ್ನದಲ್ಲಿದ್ದಾರಂತೆ. ಈ ಬಗ್ಗೆ ಸ್ವತಃ ಕಾಂಗ್ರೆಸ್ ಹಿರಿಯ ನಾಯಕ ಮೊಯ್ಲಿ ಕೂಡ ಡ್ಯಾಮೇಜ್ ಕಂಟ್ರೋಲ್ ಸರ್ಕಸ್ ನಡೆಸಿದ್ದು, ಭಜರಂಗ ದಳ‌ನಿಷೇಧದಂತ ಪ್ರಸ್ತಾಪವೇ ಕಾಂಗ್ರೆಸ್ ಮುಂದಿಲ್ಲ. ಕಾನೂನಾತ್ಮಕವಾಗಿ ಕೂಡ ಇದು ಸಾಧ್ಯವಿಲ್ಲ ಎಂದಿದ್ದಾರೆ. ಆದರೆ ಬಿಜೆಪಿ ಮಾತ್ರ ಕಾಂಗ್ರೆಸ್ ಗೆ ಭಜರಂಗದಳವೇ ಮುಳ್ಳಾಗುವಂತೆ ಮಾಸ್ಟರ್ ಪ್ಲ್ಯಾನ್ ಆರಂಭಿಸಿದೆ.

ಇದನ್ನೂ ಓದಿ : Karkala ಕಾಂಗ್ರೆಸ್‌ ಅಭ್ಯರ್ಥಿ ಉದಯಕುಮಾರ್‌ ಶೆಟ್ಟಿ ವಿರುದ್ದ ಪ್ರಕರಣ ದಾಖಲಿಸಲು ಬಿಜೆಪಿ ಒತ್ತಾಯ

ಇದನ್ನೂ ಓದಿ : ಮಗನನ್ನು ಲಾಯರ್ ಮಾಡ್ತಿರೋದ್ಯಾಕೆ ಡಿಕೆ ಶಿವಕುಮಾರ್ ? ಇಲ್ಲಿದೆ Exclusive Story

Comments are closed.