ಜಮೀರ್ ಅಹ್ಮದ್‌ಗೆ ಇಡಿ ಶಾಕ್….! ಸ್ಯಾಂಡಲ್ ವುಡ್ ನಲ್ಲಿ ನಡುಕ…!!

ಬೆಂಗಳೂರು : ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಮನೆ ಮೇಲೆ ದಾಳಿ ನಡೆಸಿದ ಇಡಿ ಪರಿಶೀಲನೆ ಮುಂದುವರೆಸಿದ್ದರೇ, ಇಡಿ ನೀಡಿದ ಶಾಕ್ ಗೆ ಸ್ಯಾಂಡಲ್ ವುಡ್ ನಲ್ಲಿ ನಡುಕ ಮೂಡಿದೆ.

ಕೆಲದಿನಗಳ ಹಿಂದೆಯಷ್ಟೇ ಶಾಸಕ ಜಮೀರ್ ಅಹ್ಮದ್ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಈ ವೇಳೆ ಜಮೀರ್ ಅಹ್ಮದ್ ತಮ್ಮ ತೋಟದ ಮನೆಯಲ್ಲಿ ಹುಟ್ಟುಹಬ್ಬ ದ ಪಾರ್ಟಿ ಆಯೋಜಿಸಿದ್ದರು.

ಈ ವೇಳೆ ಸ್ಯಾಂಡಲ್ ವುಡ್ ನಟ ದರ್ಶನ್ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು. ಜಮೀರ್ ನೂತನ ನಿವಾಸಕ್ಕೆ ಭೇಟಿ ನೀಡಿದ್ದ ದರ್ಶನ್ ಬಳಿಕ ಪಾರ್ಟಿಯಲ್ಲಿ ಪಾಲ್ಗೊಂಡು ಬೆಳಗ್ಗೆ ವರೆಗೂ ತೋಟದ ಮನೆಯಲ್ಲೇ ತಂಗಿದ್ದರು ಎನ್ನಲಾಗಿದೆ.

ಹೀಗಾಗಿ ಇಡಿ ದಾಳಿಯಿಂದ ದಚ್ಚುಗೆ ಟೆನ್ಸನ್ ಶುರುವಾಗಿದೆ. ಒಂದೊಮ್ಮೆ ಇಡಿ ಅಧಿಕಾರಿಗಳು ಜಮೀರ್ ಬರ್ತಡೇ ಸೆಲಿಬ್ರೇಶನ್ ವಿಡಿಯೋ ಪರಿಶೀಲಿಸಿ ತನ್ನನ್ನು ವಿಚಾರಣೆಗೆ ಕರೆದರೇ ಎಂಬ ಆತಂಕ ದರ್ಶನ್‌ ಅವರನ್ನು ಕಾಡುತ್ತಿದೆಯಂತೆ.

ಈಗಾಗಲೇ ಜಮೀರ್ ಕಚೇರಿ, ಮನೆ, ಫ್ಲ್ಯಾಟ್ ಪರಿಶೀಲನೆ ನಡೆಸಿ ಜಮೀರ್ ಆಪ್ತರನ್ನು ವಶಕ್ಕೆ ಪಡೆದಿರುವ ಇಡಿ ಅಧಿಕಾರಿಗಳು ಸ್ಯಾಂಡಲ್ ವುಡ್ ನಟನ ಬಾಗಿಲು ಬಡಿತಾರಾ ಅನ್ನೋದನ್ನು ಕಾದುನೋಡಬೇಕಿದೆ.

Comments are closed.