Amulya twins video viral : ಸದ್ಯ ಸ್ಯಾಂಡಲ್ ವುಡ್ ನಲ್ಲಿ ಪೇರೆಂಟಿಂಗ್ ಪರ್ವ ನಡೆಯುತ್ತಿದೆ. ರಾಕಿಂಗ್ ಸ್ಟಾರ್ ಯಶ್ ರಿಂದ ಆರಂಭಿಸಿ ಧ್ರುವ್ ಸರ್ಜಾವರೆಗೆ ಬಹುತೇಕ ನಟರು ಪೋಷಕರಾಗಿದ್ದು ಪುಟ್ಟ ಮಕ್ಕಳ ಪೋಷಣೆಯಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಸ್ಯಾಂಡಲ್ ವುಡ್ ಐಶೂ ಖ್ಯಾತಿಯ ನಟಿ ಅಮೂಲ್ಯ ಕೂಡ ತಾಯ್ತನದ ಸಂಭ್ರಮದಲ್ಲಿದ್ದು ಅವಳಿ ತುಂಟ ಮಕ್ಕಳ ಜೊತೆ ಅಮೂಲ್ಯ ತಮ್ಮ ಪಾಡೇನು ಅನ್ನೋದನ್ನು ವಿಡಿಯೋ ಶೇರ್ ಮಾಡೋ ಮೂಲಕ ಹಂಚಿಕೊಂಡಿದ್ದಾರೆ.

ಗಂಡು ಮಕ್ಕಳು ಅಂದ್ರೆನೇ ತುಂಟರು ಅಂತ ಅರ್ಥ. ಅದರಲ್ಲೂ ನಟಿ ಅಮೂಲ್ಯ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದರು. ಸದ್ಯ ಆರೇಳು ತಿಂಗಳು ತುಂಬಿರೋ ಅಮೂಲ್ಯ ಮಕ್ಕಳು ತುಂಟಾಟ ಆರಂಭಿಸಿದ್ದಾರಂತೆ. ಈ ಬಗ್ಗೆ ನಟಿ ಅಮೂಲ್ಯ ಈಗಾಗಲೇ ಒಂದೊಂದು ವಿಡಿಯೋ ಪೋಟೋ ಮೂಲಕ ತಮ್ಮ ಮಕ್ಕಳ ತುಂಟಾಟ ಹಂಚಿಕೊಳ್ಳುತ್ತಲೇ ಇದ್ದಾರೆ. ಅದರಲ್ಲೂ ಒಬ್ಬ ಮಗ ಸ್ವಲ್ಪ ಸೈಲೆಂಟ್ ಹಾಗೂ ಇನ್ನೊಬ್ಬ ಮಗ ತುಂಟ ಅನ್ನೋದನ್ನು ಈಗಾಗಲೇ ತಮ್ಮ ತಾಯ್ತತನದ ಅನುಭವ ಶೇರ್ ಮಾಡೋ ವೇಳೆ ಹೇಳಿಕೊಂಡಿದ್ದರು.

ಈಗ ಅದಕ್ಕೆ ಮತ್ತೊಂದು ವಿಡಿಯೋ ಸಾಕ್ಷಿ ಸಿಕ್ಕಿದೆ. ಹೌದು ನಟಿ ಅಮೂಲ್ಯ ಇತ್ತೀಚಿಗೆ ಕಾರಿನಲ್ಲಿ ಇಬ್ಬರು ಮಕ್ಕಳೊಂದಿಗೆ ಶಾಪಿಂಗ್ ಹೋಗಿದ್ದಾರೆ. ಈ ವೇಳೆ ತಾವೊಬ್ಬರೇ ಮಕ್ಕಳೊಂದಿಗೆ ಹೇಗೆ ಸರ್ಕಸ್ ಮಾಡಿದೆ ಅನ್ನೋದನ್ನು ಅಮೂಲ್ಯ ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ. ಒಬ್ಬ ಮಗನನ್ನು ನಟಿ ಅಮೂಲ್ಯ ಹಿಂದಿನ ಸೀಟ್ ನಲ್ಲಿ ಕೂರಿಸಿದ್ದರೇ, ಇನ್ನೊಂದು ಸೀಟ್ ನಲ್ಲಿ ಮತ್ತೊಬ್ಬ ಮಗನನ್ನು ಕೂರಿಸಿದ್ದಾರೆ. ಈ ಪೈಕಿ ಒಬ್ಬ ಮಗ ತನ್ನದೇ ಕಾಲನ್ನು ಬಾಯಲ್ಲಿಟ್ಟುಕೊಂಡು ಶಬ್ದ ಹೊರಡಿಸುತ್ತಾ ಆಟ ಆಡ್ತಿದ್ದರೇ, ಇನ್ನೊಬ್ಬ ಮಗ ಅಮೂಲ್ಯ ನ ಕೈಯಲ್ಲಿರೋ ಪ್ಯಾಕೇಟ್ ಎಳೆಯುತ್ತಾ ತಾಯಿಗೆ ಕಾಟ ನೀಡ್ತಿದ್ದಾನೆ.
ಅಮೂಲ್ಯ ಒಮ್ಮೇ ಆ ಮಗನನ್ನು ನೋಡುತ್ತಾ ಇನ್ನೊಮ್ಮೆ ಈ ಮಗನನ್ನು ಸುಧಾರಿಸುತ್ತಾ ಹೈರಾಣಾಗಿದ್ದಾರೆ. ಅಮೂಲ್ಯ ಶೇರ್ ಮಾಡಿರೋ ಈ ಕ್ಯೂಟ್ ವಿಡಿಯೋ ಸಖತ್ ವೈರಲ್ ಆಗಿದ್ದು ಅಮೂಲ್ ಬೇಬಿ ಐಶೂ ಅಮೂಲ್ಯ ಮಕ್ಕಳ ಜೊತೆಗಿನ ಈ ವಿಡಿಯೋ ನೋಡಿದ ಸ್ಯಾಂಡಲ್ ವುಡ್ ಮಂದಿ ಕೂಡ ವಾವ್ ಎಂದು ಕಮೆಂಟ್ ಮಾಡ್ತಿದ್ದಾರೆ. ಒಟ್ನಲ್ಲಿ ಸದ್ಯ ಸ್ಯಾಂಡಲ್ ವುಡ್ ನಲ್ಲಿ ನಟ-,ನಟಿಯರ ಮಕ್ಕಳ ಕಾಲ ಸನ್ನಿಹಿತವಾಗಿದ್ದು, ಐರಾ,ಅಥರ್ವ,ರಾಯನ್ ರಾಜ್ ಸರ್ಜಾ ಜೊತೆ ಈಗ ಅಮೂಲ್ಯ ಅವಳಿ ಮಕ್ಕಳು ಕೂಡ ಅಭಿಮಾನಿಗಳ ಖುಷಿ ಹೆಚ್ಚಿಸಿದ್ದಾರೆ.
ಇದನ್ನೂ ಓದಿ : Amulya : ನೀರ ನಡುವೆ ಹೂವು ಉಯ್ಯಾಲೆಯಲ್ಲಿ ಚಿತ್ತಾರದ ಬೆಡಗಿ : ಮನಸೆಳೆದ ಅಮೂಲ್ಯ ಬೇಬಿ ಬಂಪ್ ಪೋಟೋಶೂಟ್
sandalwood actress Amulya with twins cute video viral