Kantara Hindi Box Office : ಬಾಕ್ಸಾಫೀಸ್ ಕಲೆಕ್ಷನ್ ನಲ್ಲಿ ಹೊಸ ದಾಖಲೆ ಬರೆದ ಕಾಂತಾರ ಹಿಂದಿ

Kantara Hindi Box Office : ಕಾಂತಾರ… ಸದ್ಯ ಭಾರತೀಯ ಚಿತ್ರರಂಗದಲ್ಲಿ ಕೇಳಿಬರುತ್ತಿರುವ ಹೆಸರು. ಕರಾವಳಿಯ ದೈವಾರಾಧನೆ, ಕಲೆ ಸಂಸ್ಕೃತಿಯನ್ನೇ ಇಟ್ಟುಕೊಂಡು ನಟ ನಿರ್ದೇಶಕ ರಿಷಭ್ ಶೆಟ್ಟಿ ಹೊಸ ಲೋಕವನ್ನೇ ಸೃಷ್ಟಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಬಿಡುಗಡೆಯಾದ ಕಾಂತಾರ ಎಲ್ಲಾ ದಾಖಲೆಗಳನ್ನು ಅಳಿಸಿ ಹಾಕುತ್ತಿದೆ. ಒಂದೆಡೆ ಕೆಜಿಎಫ್ ದಾಖಲೆಯನ್ನು ಅಳಿಸಿರುವ ಕಾಂತಾರ, ಇದೀಗ ಹಿಂದಿ ಅವತರಿಣಿಕೆ ಕೂಡ ಬಾಕ್ಸ್ ಆಫೀಸ್ ಕೆಲೆಕ್ಷನ್ಸ್ ನಲ್ಲಿ ಹೊಸ ದಾಖಲೆಯನ್ನು ಬರೆದಿದೆ.

ಭಾರತೀಯ ಚಿತ್ರರಂಗದಲ್ಲಿಯೇ ಕಾಂತಾರ ಹೊಸ ಇತಿಹಾಸವನ್ನು ಸೃಷ್ಟಿಸುವತ್ತ ಮುನ್ನಡೆಯುತ್ತಿದೆ. ಕಳೆದ ಎರಡು ವಾರಗಳಿಂದಲೂ ಚಿತ್ರಮಂದಿರಗಳಲ್ಲಿ ಹೌಸ್ ಪುಲ್ ಪ್ರದರ್ಶನವನ್ನು ಕಾಣುತ್ತಿದೆ. ಕರಾವಳಿ ಮಂದಿಯೂ ಕಾಂತಾರ ನೋಡಲು ಮುಗಿಬಿದ್ದಿದ್ದಾರೆ. ಇನ್ನೊಂದೆಡೆಯಲ್ಲಿ ಅಕ್ಟೋಬರ್ 14 ರಂದು ಹಿಂದಿ ಭಾಷೆಗೆ ಡಬ್ ಬಿಡುಗಡೆ ಕಂಡಿದೆ. ಆರಂಭದ ದಿನವೇ 1.27 ಕೋಟಿ ಕಲೆಕ್ಸನ್ ಮಾಡಿದ್ದ ಕಾಂತಾರ ನಂತರದ ದಿನಗಳಲ್ಲಿ ಶೇಕಡಾ 130-140 ರಷ್ಟು ಏರಿಕೆಯನ್ನು ಕಾಣುತ್ತಿದೆ.ಇತ್ತೀಚೆಗೆ ಬಾಲಿವುಡ್ ನಲ್ಲಿ ತೆರೆಕಂಡ ಡಾಕ್ಟರ್ ಜಿ ಮತ್ತು ಕೋಡ್ ನೇಮ್ ತಿರಂಗಾ ಸಿನಿಮಾಗಳಿಗಿಂತಲೂ ಅಧಿಕ ಕೆಲಕ್ಷನ್ಸ್ ಮಾಡುತ್ತಿದೆ.

ಕಾಂತಾರ ಸಿನಿಮಾ ಮಹಾರಾಷ್ಟ್ರದಲ್ಲಿ ಹೌಸ್ ಪುಲ್ ಪ್ರದರ್ಶನವನ್ನು ಕಾಣುತ್ತಿದೆ. ಎರಡನೇ ದಿನ 2.25-2.50 ಕೋಟಿ ರೂ. ಬಾಕ್ಸ್ ಆಫೀಸ್ ಕಲೆಕ್ಷನ್ಸ್ ಕಂಡಿದೆ. ಎರಡು ದಿನದಲ್ಲಿ ಒಟ್ಟಾರೆ ಸಿನಿಮಾ 3.25-3.50 ಕೋಟಿ ರೂಪಾಯಿ ಸಂಗ್ರಹ ಮಾಡಿದೆ.ಕಾಂತಾರ ಹಿಂದಿ ಆವೃತ್ತಿಗೆ ಪರಿಣಿತಿ ಚೋಪ್ರಾ ಅವರ ಕೋಡ್ ನೇಮ್ ತಿರಂಗಕ್ಕೆ ಹೋಲಿಸಿದರೆ ಉತ್ತಮ ರೆಸ್ಪಾನ್ಸ್ ಲಭ್ಯವಾಗಿದೆ. ಕೋಡ್ ನೇಮ್ ತಿರಂಗ ಮೊದಲ ದಿನ 15 ಲಕ್ಷ ರೂಪಾಯಿ ಸಂಗ್ರಹಿಸಿತ್ತು. ಸದ್ಯ ಕಾಂತಾರ ಸಿನಿಮಾ ಭಾರತದಲ್ಲಿ ಒಟ್ಟು 1200 ಸ್ಕ್ರೀನ್ ಗಳಲ್ಲಿ ಬಿಡುಗಡೆಯಾಗಿದೆ. ಮಹಾರಾಷ್ಟ್ರ ಮಾತ್ರವಲ್ಲದೇ ದೆಹಲಿ, ಪಂಚಾಬ್, ಉತ್ತರ ಪ್ರದೇಶ, ರಾಜಸ್ಥಾನಗಳಲ್ಲಿಯೂ ಸಿನಿಮಾ ಭರ್ಜರಿ ಪ್ರದರ್ಶನವನ್ನು ಕಾಣುತ್ತಿದೆ.

ಕೆಜಿಎಫ್ ಸಿನಿಮಾ ನಿರ್ಮಾಣ ಮಾಡಿರುವ ಹೊಂಬಾಳೆ ಪ್ರೊಡಕ್ಷನ್ಸ್ ಸಂಸ್ಥೆ ನಿರ್ಮಾಣ ಮಾಡಿರುವ ಕಾಂತಾರ ಸದ್ಯ ಹಿಂದಿ ಹಾಗೂ ಕನ್ನಡ ಭಾಷೆಯಲ್ಲಿ ತೆರೆ ಕಂಡಿದೆ. ಸದ್ಯದಲ್ಲಿಯೇ ಮಲಯಾಲಂ ಭಾಷೆಯಲ್ಲಿಯೂ ಸಿನಿಮಾ ತೆರೆ ಕಾಣಲು ರೆಡಿಯಾಗುತ್ತಿದೆ. ನಟ ನಿರ್ಮಾಪಕ ಪ್ರಥ್ವಿರಾಜ್ ಸುಕುಮಾರನ್ ಅವರು ಶೀಘ್ರದಲ್ಲಿಯೇ ಕಾಂತಾರ ಮಲಯಾಲಂ ಆವೃತ್ತಿಯನ್ನು ತೆರೆಗೆ ತರಲು ಸಿದ್ದತೆ ನಡೆಸಿದ್ದಾರೆ. ರಿಷನ್ ಶೆಟ್ಟಿ ನಟನೆಯ ಜೊತೆಗೆ ಕಾಂತಾರ ಸಿನಿಮಾವನ್ನು ಅದ್ಬುತವಾಗಿ ನಿರ್ದೇಶಿಸಿದ್ದಾರೆ. ಕಿಶೋರ್ ಅರಣ್ಯಾಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ರೆ, ಸಪ್ತಮಿ ಗೌಡ, ಮಾನಸಿ ಸೇರಿದಂತೆ ಸಾಕಷ್ಟು ಹಿರಿಯ, ಕಿರಿಯ ಕಲಾವಿದರು ಸಿನಿಮಾದಲ್ಲಿ ಬಣ್ಣಹಚ್ಚಿದ್ದಾರೆ.

ಇದನ್ನೂ ಓದಿ : ಅವಳಿ‌ ಮಕ್ಕಳ ಜೊತೆ ಅಮೂಲ್ಯ ಪರದಾಟ: ವೈರಲ್ ಆಗ್ತಿದೆ ಕ್ಯೂಟ್ ವಿಡಿಯೋ

ಇದನ್ನೂ ಓದಿ : Kantara : ಕಾಂತಾರ ಸಿನಿಮಾ ನೋಡುತ್ತಿದ್ದ ಮಹಿಳೆಯ ಮೇಲೆ ದೈವ ಆವಾಹನೆ

Kantara Hindi Box Office collections New Record in Bollywood

Comments are closed.