ಸೋಮವಾರ, ಏಪ್ರಿಲ್ 28, 2025
HomeCinemaSruthi Hariharan : ನಟನೆ ಆಯ್ತು ನಿರ್ದೇಶನಕ್ಕೆ ರಾಟೆ ಸುಂದರಿ : ಡೈರೈಕ್ಟರ್ ಆಗ್ತಿದ್ದಾರೆ ಶೃತಿ ಹರಿಹರನ್

Sruthi Hariharan : ನಟನೆ ಆಯ್ತು ನಿರ್ದೇಶನಕ್ಕೆ ರಾಟೆ ಸುಂದರಿ : ಡೈರೈಕ್ಟರ್ ಆಗ್ತಿದ್ದಾರೆ ಶೃತಿ ಹರಿಹರನ್

- Advertisement -

ಕನ್ನಡದಲ್ಲಿ ಮೀಟೂ ಮೂಲಕವೇ ಸದ್ದು ಮಾಡಿದ ನಟಿಮಣಿ ಶೃತಿ ಹರಿಹರನ್ (Sruthi Hariharan director). ಮೀಟೂ ಆರೋಪ ತನಿಖೆ ಬಳಿಕ ಬಹುತೇಕ ಕನ್ನಡ ಸಿನಿಮಾ ಲೋಕದಿಂದಲೇ ಕಣ್ಮರೆಯಾಗಿದ್ದರು. ಇತ್ತೀಚಿಗೆ ಮತ್ತೇ ರೀ ಎಂಟ್ರಿಕೊಟ್ಟ ಶೃತಿ ಹರಿಹರನ್ ಈಗ ಅಭಿಮಾನಿಗಳಿಗೆ ಮತ್ತೊಂದು ಸಿಹಿಸುದ್ದಿ ನೀಡಿದ್ದಾರೆ. ಇಷ್ಟು ದಿನಗಳ ಕಾಲ ಮುಖಕ್ಕೆ ಬಣ್ಣ ಹಚ್ಚಿದ ನಟಿ ಇದರ ಜೊತೆಗೆ ಡೈರೈಕ್ಟರ್ ಕ್ಯಾಪ್ ತೊಡಲು ಸಿದ್ಧವಾಗಿದ್ದಾರೆ.

ಹೌದು ಮಲೆಯಾಳಂ ಭಾಷೆಯ ಕಂಪನಿ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಕೊಟ್ಟ ನಟಿ ಶೃತಿ ಹರಿಹರನ್, ಮೀಟೂ ಅಭಿಯಾನದ ಮೂಲಕ ಹೆಚ್ಚು ಚರ್ಚೆಗೆ ಗ್ರಾಸವಾದರು. ರಂಗಭೂಮಿ ಹಿನ್ನೆಲೆ ಹೊಂದಿದ ಶೃತಿ, ಇದುವರೆಗೂ ಹಲವು ಭಾಷೆಯಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಹೆಚ್ಚು ಸಿನಿಮಾಗಳನ್ನು ಮಾಡಿದ ನಟಿ ಶೃತಿ ಹರಿಹರನ್, ನಾತಿಚರಾಮಿ ಸಿನಿಮಾಗಾಗಿ 66 ನೇ ರಾಷ್ಟ್ರೀಯ ಚಲನಚಿತ್ರ ಪ್ರದರ್ಶನದಲ್ಲಿ ವಿಶೇಷ ಪ್ರಶಸ್ತಿ ಪಡೆದಿದ್ದಾರೆ.

ತಮ್ಮದೇ ಆದ ಕಲಾತ್ಮಕ ಎಂಬ ನಿರ್ಮಾಣ ಸಂಸ್ಥೆಯನ್ನು ಹೊಂದಿರೋ ಶೃತಿ ಕೆಲವು ವರ್ಷಗಳ ಕಾಲ‌ ಮದುವೆ ಹಾಗೂ ತಾಯ್ತನದ ಕಾರಣಕ್ಕೆ ಚಿತ್ರರಂಗದಿಂದ ದೂರವುಳಿದಿದ್ದರು. ಈಗ ತಾಯ್ತನದ ಬ್ರೇಕ್ ಬಳಿಕ ಶೃತಿ ಮತ್ತೆ ಚಿತ್ರರಂಗಕ್ಕೆ ಮರಳಿದ್ದಾರೆ. ಆದರೆ ಈಗ ಚಿತ್ರರಂಗದಲ್ಲಿ ನಟನೆ ನಡುವೆ ಡೈರೈಕ್ಷನ್ ಕಡೆಗೂ ಮನಸ್ಸು ಹರಿಸಿದ್ದಾರಂತೆ.

ಇತ್ತೀಚಿಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ನಟಿ ಶೃತಿ ನಟಿಯಾಗಿ ಕೆಲಸ ನಿಲ್ಲಿಸಲು ಬಯಸುವುದಿಲ್ಲ‌. ಆದರೆ ನಿರ್ದೇಶಕಿಯಾಗಿ ಕೆಲಸ ಮಾಡಲು ಅವಕಾಶ ಸಿಕ್ಕರೇ ಖಂಡಿತಾ ಬಿಡೋದಿಲ್ಲ ಎಂದಿದ್ದಾರೆ. ನನಗೂ ನಿರ್ದೇಶಕಿಯಾಗಿ ಕೆಲಸ ಮಾಡಬೇಕೆಂಬ ಆಸೆ ಇದೆ. ಅದರ ಮೊದಲ ಹೆಜ್ಜೆಯಾಗಿ ನಾನು ಒಂದು ಮ್ಯೂಸಿಕ್ ವಿಡಿಯೋ ನಿರ್ದೇಶಿಸಿ ನಿರ್ಮಾಣ ಮಾಡಿದ್ದೇನೆ. ಸದ್ಯದಲ್ಲೇ ಈ ವಿಡಿಯೋ ತೆರೆ ಕಾಣಲಿದೆ ಎಂದಿದ್ದಾರೆ.

ಕೇವಲ ನಟಿಯಾಗಿ ಮಾತ್ರವಲ್ಲದೇ ಭರತನಾಟ್ಯ ಕಲಾವಿದೆಯಾಗಿಯೂ ಹೆಸರು ಗಳಿಸಿರುವ ಶೃತಿ ಹರಿಹರನ್, ಬಹುಭಾಷಾ ನಟ ಅರ್ಜುನ್ ಸರ್ಜಾ ವಿರುದ್ಧ ಮೀಟೂ ಆರೋಪ ಮಾಡಿದ್ದರು. ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇತ್ತೀಚಿಗಷ್ಟೇ ತನಿಖೆ ಪೂರ್ಣಗೊಂಡಿದ್ದು ಸೂಕ್ತ ಸಾಕ್ಷ್ಯಾಧಾರಗಳ ಕೊರತೆ ಕಾರಣಕ್ಕೆ ಪ್ರಕರಣದ ವಿರುದ್ಧ ಬಿ ರಿಪೋರ್ಟ್ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿದೆ. ಸದ್ಯ ಶೃತಿ ಹರಿಹರನ್ ನಿರ್ದೇಶನಕ್ಕೆ ಬರೋ ಮೂಲಕ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ.

ಇದನ್ನೂ ಓದಿ : ಹೋಟೆಲ್ ಕೆಲಸ, ಬಿಸ್ಲೆರಿ ಮಾರಾಟ, ಕೈ ಕೊಟ್ಟ ಸಿನಿಮಾ : ಇದು ಕಾಂತಾರ ರಿಷಬ್ ಶೆಟ್ಟಿ ಜೀವನ ಸಾಧನೆ

ಇದನ್ನೂ ಓದಿ : Appu Ambulance : ಪುನೀತ್ ರಾಜ್ ಕುಮಾರ್ ನೆನಪು ಅಮರವಾಗಿಸಲು ಮುಂದಾದ ನಟ ಯಶ್ : ರಾಜ್ಯದ ಪ್ರತಿ ಜಿಲ್ಲೆಗೂ ಅಪ್ಪು ಅಂಬುಲೆನ್ಸ್

Sandalwood actress Sruthi Hariharan is the director

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular