ಭಾನುವಾರ, ಏಪ್ರಿಲ್ 27, 2025
HomeCinemaMeghna Raj Sarja : ಅನೀರಿಕ್ಷಿತವಾದ ಅವಕಾಶವೊಂದು ಒದಗಿ ಬಂತು : ಮನದಾಳದ ಮಾತು ಹಂಚಿಕೊಂಡ...

Meghna Raj Sarja : ಅನೀರಿಕ್ಷಿತವಾದ ಅವಕಾಶವೊಂದು ಒದಗಿ ಬಂತು : ಮನದಾಳದ ಮಾತು ಹಂಚಿಕೊಂಡ ಮೇಘನಾ ಸರ್ಜಾ

- Advertisement -

ನಟಿ ಮೇಘನಾ ಸರ್ಜಾ ಕಾಲದ ಜೊತೆಗೆ ಕೊಂಚ ಬದಲಾಗಿದ್ದಾರೆ.‌ ಕಾಡುವ ಪತಿ ಅಗಲಿಕೆ ನೋವಿನ ಜೊತೆಗೆ ಕೆರಿಯರ್ ಆರಂಭಿಸಿದ್ದಾರೆ. ಮಾತ್ರವಲ್ಲ ರಿಯಾಲಿಟಿ ಶೋ ಅಂಗಳಕೂ ಕಾಲಿಟ್ಟಿರುವ ಮೇಘನಾ (Meghna Raj Sarja ) ತಮ್ಮ ನೋವು ನಲಿವುಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ ಇದೇ ರಿಯಾಲಿಟಿ ಶೋ ಲೈವ್ ನಲ್ಲಿ ತಮ್ಮ ಆಸೆಯೊಂದನ್ನು ಬಿಚ್ಚಿಟ್ಟಿದ್ದಾರೆ.

ಮೇಘನಾ ಸರ್ಜಾ, ಕಲರ್ಸ್ ಕನ್ನಡ ವಾಹಿನಿ ಮೂಲಕ ಈಗ ಪ್ರತಿವಾರಾಂತ್ಯದಲ್ಲಿ ಕನ್ನಡಿಗರ ಮನೆ ಮನೆಗೆ ನಗು-ಖುಷಿ ಹಂಚಲು ಬರುತ್ತಿದ್ದಾರೆ. ತಮ್ಮ ಈ ಕಮ್ ಬ್ಯಾಕ್ ಜರ್ನಿಯ ಬಗ್ಗೆ ಸ್ವತಃ ಮೇಘನಾ ಕೂಡಾ ಖುಷಿಯಾಗಿದ್ದಾರೆ. ಇತ್ತೀಚಿಗೆ ಕಲರ್ಸ್ ಕನ್ನಡ ವಾಹಿನಿಯ ಇನ್ ಸ್ಟಾಗ್ರಾಂ ಪೇಜ್ ಮೂಲಕ ಲೈವ್ ಬಂದಿದ್ದ ಮೇಘನಾ ಸರ್ಜಾ ತಮ್ಮ ಬದುಕು,ಕೆರಿಯರ್ ಸೇರಿದಂತೆ ಎಲ್ಲ ವಿಚಾರಗಳ ಬಗ್ಗೆಯೂ ಮುಕ್ತವಾಗಿ ಮಾತನಾಡಿದ್ದಾರೆ. ಡ್ಯಾನ್ಸಿಂಗ್ ಛಾಂಪಿಯನ್ ರಿಯಾಲಿಟಿ ಶೋಗೆ ನಾನು ಜಡ್ಜ್ ಆಗಿ ಬಂದಿದ್ದು ಅತಿ ಅನೀರಿಕ್ಷಿತವಾಗಿತ್ತು. ಕೋರಿಕೆಯ ಮೇರೆಗೆ ಓಫನಿಂಗ್ ಎಪಿಸೋಡ್ ಗೆ ನಾನು ನಿರ್ಣಾಯಕಿಯಾಗಿ ಬಂದಿದ್ದೆ. ಆದರೆ ನಿಮ್ಮೆಲ್ಲರ ಒತ್ತಾಯ ನನ್ನನ್ನು ಪರ್ಮನೆಂಟ್ ಶೋ ಜಡ್ಜ್ ಆಗುವಂತೆ ಮಾಡಿದೆ ಎಂದಿದ್ದಾರೆ.

ಅಲ್ಲದೇ ಕಲರ್ಸ್ ಕನ್ನಡ ಸೆಟ್ ನಲ್ಲಿ ಪಾಸಿಟಿವ್ ವೈಬ್ಸ್ ಇದೆ ಎಂದಿರುವ ಮೇಘನಾ ಈಗ ನಾಲ್ಕು ಎಪಿಸೋಡ್ ಮುಗಿದಿದೆ. ಈಗಾಗಲೇ ಸ್ಪರ್ಧಿಗಳ ಜೊತೆ ಒಂದು ಬಾಂಡಿಂಗ್ಸ್ ಬೆಳೆದಿದೆ. ಕಲರ್ಸ್ ಕನ್ನಡ ಸೆಟ್ ನಲ್ಲಿ ಒಂದು ಪಾಸಿಟಿವ್ ಎನರ್ಜಿ ಇದೆ. ಅದನ್ನು ನಾನು ಎಂಜಾಯ್ ಮಾಡ್ತಿದ್ದೇನೆ ಎಂದಿದ್ದಾರೆ. ಅಲ್ಲದೇ ತಮ್ಮ ಆಸೆಯನ್ನು ಲೈವ್ ನಲ್ಲಿ ಹೇಳಿಕೊಂಡ ಮೇಘನಾ, ವೇದಿಕೆಯಲ್ಲಿ ಡ್ಯಾನ್ಸ್ ನೋಡಿ ಎಂಜಾಯ್ ಮಾಡದೇ ವರ್ಷಗಳೇ ಕಳೆದಿತ್ತು. ಈಗ ಅದನ್ನು ಎಂಜಾಯ್ ಮಾಡ್ತಿದ್ದೇನೆ.‌ಮಾತ್ರವಲ್ಲ ಡ್ಯಾನ್ಸ್ ಮಾಡಬೇಕೆಂಬ ನನ್ನ ಆಸೆಯನ್ನು ಕಷ್ಟಪಟ್ಟು ಹಿಡಿದಿಟ್ಟುಕೊಂಡಿದ್ದೇನೆ ಎಂದಿದ್ದಾರೆ.

ಅಲ್ಲದೇ ಈ ರಿಯಾಲಿಟಿ ಶೋ ಶೂಟಿಂಗ್ ಗಾಗಿ ರಾಯನ್ ನನ್ನು ಬಿಟ್ಟು ಬರೋದು ಹಾಗೂ ಅವನ ಕಣ್ತಪ್ಪಿಸಿ ಬರೋದು ಕೂಡ ಒಂದು ದೊಡ್ಡ ಸಾಹಸ ಎಂದಿದ್ದಾರೆ.
ಸದ್ಯ ಕಿರುತೆರೆಯಲ್ಲಿ ರಿಯಾಲಿಟಿ ಶೋ ಜಡ್ಜ್ ಆಗಿರೋ ಮೇಘನಾ ರಾಜ್, ಸ್ನೇಹಿತ ಪನ್ನಗಾಭರಣ ನಿರ್ದೇಶನದ ಸಿನಿಮಾಗಾಗಿ ಬಣ್ಣ ಹಚ್ಚಿ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾರೆ. ಮಾತ್ರವಲ್ಲ ಶಬ್ದ ಎಂಬ ಹೆಸರಿನ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಒಟ್ಟಿನಲ್ಲಿ ಪತಿ ಅಗಲಿಕೆಯ ನೋವಿನಿಂದ ನಿಧಾನಕ್ಕೆ ಹೊರಬರ್ತಿರೋ ಮೇಘನಾ ಸರ್ಜಾ ರಿಯಾಲಿಟಿ ಶೋ ಮೂಲಕ ಕನ್ನಡಿಗರ ಮನೆ ಮನೆಗೆ ಬರ್ತಿದ್ದಾರೆ.

ಇದನ್ನೂ ಓದಿ : ತಾಯವ್ವನಿಂದ ವಿಕ್ರಾಂತ್ ರೋಣದವರೆಗೆ, ಸುದೀಪ್ ಸಿನಿ ಜರ್ನಿಗೆ 26 ರ ಸಂಭ್ರಮ : ಹೃದಯಸ್ಪರ್ಶಿ ಮೆಸೆಜ್ ನೀಡಿದ ಪ್ರಿಯಾ

ಇದನ್ನೂ ಓದಿ : ಜೇಮ್ಸ್’ಗೆ ದಾರಿ ಮಾಡಿಕೊಟ್ಟ ರಾಜಮೌಳಿ : ಮಾರ್ಚ್ 18 ಅಲ್ಲ ಮಾರ್ಚ್ 25ಕ್ಕೆ ಆರ್‌ಆರ್‌ಆರ್ ಸಿನಿಮಾ ರಿಲೀಸ್

( An unexpected opportunity came up: Meghna Raj Sarja Talking about reality show and next movie)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular