Kisan Drone : ನಿರ್ಮಲಾ ಸೀತಾರಾಮನ್ ಬಜೆಟ್‌ನಲ್ಲಿ ಕೃಷಿ ಕ್ಷೇತ್ರ, ಮಹಿಳೆಯರಿಗೆ ಸಿಕ್ಕಿದ್ದೇನು?

ಕೃಷಿ(Agriculture) ಮತ್ತು ಕೃಷಿ ವಲಯದಲ್ಲಿ(Agriculture Sector) ತಂತ್ರಜ್ಞಾನದ ಅಲೆಯನ್ನು ಚಾಲನೆ ಮಾಡಲು, ಬೆಳೆ ಮೌಲ್ಯಮಾಪನ, ಭೂ ದಾಖಲೆಗಳು ಮತ್ತು ಕೀಟನಾಶಕಗಳು ಮತ್ತು ಪೋಷಕಾಂಶಗಳ ಸಿಂಪರಣೆಗಾಗಿ ಸರ್ಕಾರವು ‘ಕಿಸಾನ್ ಡ್ರೋನ್(Kisan Drone )’ಗಳನ್ನು ನಿಯೋಜಿಸಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಮುಂದಿನ 2023ರ ಆರ್ಥಿಕ ವರ್ಷದಿಂದ ಬ್ಲಾಕ್‌ಚೈನ್ ಮತ್ತು ಇತರ ತಂತ್ರಜ್ಞಾನವನ್ನು ಬಳಸಿಕೊಂಡು ಡಿಜಿಟಲ್ ರೂಪಾಯಿಯನ್ನು  ಬಿಡುಗಡೆ ಮಾಡಲಿದೆ.

ಡಿಜಿಟಲ್ ಕರೆನ್ಸಿ: ಡಿಜಿಟಲ್ ಕರೆನ್ಸಿ ವಿತರಣೆಯನ್ನು ಶೀಘ್ರದಲ್ಲೇ ಮಾಡಲಾಗುತ್ತದೆ ಕೇಂದ್ರ ಸರ್ಕಾರ ತೀರ್ಮಾನ ಮಾಡಿದೆ. ಬ್ಲಾಕ್‌ಚೈನ್‌ ಟೆಕ್ನಾಲಜಿ ಮೂಲಕ ಡಿಜಿಟಲ್ ರೂಪಾಯಿ (Digital Rupee) ಬಿಡುಗಡೆ ಮಾಡಲು ನಿರ್ಧಾರ ಮಾಡಲಾಗಿದೆ. ಈ ಬಾರಿ ಬಜೆಟ್ನಲ್ಲಿ ಡಿಜಿಟಲ್ ಇಂಡಿಯಾ ಕಲ್ಪನೆಗೆ ಒತ್ತು ನೀಡಲಾಗಿದೆ. ಡಿಜಿಟಲ್ ಕರೆನ್ಸಿ, ದೇಶದ ಹಳ್ಳಿ-ಹಳ್ಳಿಯಲ್ಲೂ ಅಂಚೆ ಕಚೇರಿ ಮೂಲಕ ಡಿಜಿಟಲ್ ಬ್ಯಾಂಕಿಂಗ್ (Digital Banking), ಇ- ಪಾಸ್​ಪೋರ್ಟ್​, ಡಿಜಿಟಲ್ ಪೇಮೆಂಟ್ ಮುಂತಾದ ಯೋಜನೆಗಳನ್ನು ಈ ಬಾರಿಯ ಬಜೆಟ್ ವೇಳೆ ಘೋಷಿಸಲಾಗಿದೆ.

ಬಡ್ಡಿ ರಹಿತ ಸಾಲ:ಎಲ್ಲ ರಾಜ್ಯ ಸರಕಾರ ಗಳಿಗೂ ಮುಂದಿನ 50 ವರ್ಷಗಳ ಕಾಲ ಬಡ್ಡಿ ರಹಿತ ಸಾಲ ಘೋಷಿಸಿದ್ದಾರೆ. 1ಲಕ್ಷ ಕೋಟಿ ವರೆಗೆ ರಾಜ್ಯ ಸರಕಾರ ಗಳಿಗೆ ಸಾಲ ನೀಡಲಾಗುತ್ತದೆ.

ಇಂಧನ ಕ್ಷೇತ್ರ :ಇಂಧನ ಕ್ಷೇತ್ರದಲ್ಲಿ ಖಾಸಗಿ ವಲಯಗಳಿಗೆ ಬಂಡವಾಳ ಹೂಡಿಕೆಗೆ ಅವಕಾಶವಿದ್ದು, ಈಗಾಗಲೇ 7.5 ಲಕ್ಷ ಕೋಟಿ ಬಂಡವಾಳ ಹೂಡಿಕೆಗೆ ಕೇಂದ್ರ ಸರ್ಕಾರ ತೀರ್ಮಾನಿಸಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಹೇಳಿದ್ದಾರೆ.

ಇವಿಗಳಿಗೆ ಆದ್ಯತೆ:ಈ ಬಾರಿ ಬಜೆಟ್ನಲ್ಲಿ ಇಲೆಕ್ರ್ಟ್ರಿಕ್ ವಾಹನಗಳಿಗೆ ವಿಶೇಷ ಪ್ಯಾಕೇಜ್ ನೀಡಲಾಗಿದೆ. ಇವಿ ಚಾರ್ಜಿಂಗ್ ಸೆಂಟರ್ ಸ್ಟೇಶನ್ ಸ್ಥಾಪಿಸುವ ಕುರಿತು ತೀರ್ಮಾನಿಸಲಾಗಿದೆ.

ನಾರಿ ಶಕ್ತಿ: ‘ನಾರಿ ಶಕ್ತಿ’ಯ ಮಹತ್ವವನ್ನು ಗುರುತಿಸಿ, ಮಹಿಳೆಯರು ಮತ್ತು ಮಕ್ಕಳ ಸಮಗ್ರ ಅಭಿವೃದ್ಧಿಯನ್ನು ಒದಗಿಸಲು 3 ಯೋಜನೆಗಳನ್ನು ಪ್ರಾರಂಭಿಸಲಾಗಿದೆ. ಮಕ್ಕಳ ಆರೋಗ್ಯ ಸುಧಾರಣೆಗಾಗಿ 2 ಲಕ್ಷ ಅಂಗನವಾಡಿಗಳನ್ನು ಮೇಲ್ದರ್ಜೆಗೇರಿಸಲಾಗುವುದು ಎಂದು ಅವರು ಹೇಳಿದರು.

ಇ ಬಿಲ್ :ರೈತರ ಮಾಹಿತಿ ಸಂಗ್ರಹಣೆಗಾಗಿ ಸಚಿವಾಲಯಗಳು ಸಂಪೂರ್ಣವಾಗಿ ಕಾಗದರಹಿತ, ಇ-ಬಿಲ್ ವ್ಯವಸ್ಥೆಯನ್ನು ಪ್ರಾರಂಭಿಸುತ್ತವೆ. ಸಣ್ಣ ರೈತರು ಮತ್ತು ಎಂಎಸ್‌ಎಂಇಗಳಿಗೆ ರೈಲ್ವೆ ಹೊಸ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಲಿದೆ ಎಂದು ಸಚಿವರು ಹೇಳಿದರು.

ಡಿಜಿಟಲ್ ಆಸ್ತಿ ಮೇಲೆ ತೆರಿಗೆ: 30 ಪ್ರತಿಶತ ತೆರಿಗೆಯನ್ನು ಡಿಜಿಟಲ್ ಆಸ್ತಿ ವರ್ಗಾವಣೆ ಮೇಲೆ ವಿಧಿಸಲಾಗುತ್ತದೆ. ಇದರೊಂದಿಗೆ ಡಿಜಿಟಲ್ ಸ್ವತ್ತುಗಳ ಉಡುಗೊರೆಗಳಿಗೂ ತೆರಿಗೆ ವಿಧಿಸಲಾಗುವುದು. 

ಇದನ್ನೂ ಓದಿ: Budget 2022: ಕೇಂದ್ರ ಬಜೆಟ್ 2022: ಡಿಜಿಟಲ್ ಕರೆನ್ಸಿಗೆ ತೆರಿಗೆ; ವಿದೇಶಿ ಮೊಬೈಲ್ ದರ ಏರಿಕೆ

ಇದನ್ನೂ ಓದಿ: Budget 2022 TDS : ಕೇಂದ್ರ, ರಾಜ್ಯ ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್‌ : ತೆರಿಗೆ ವಿನಾಯಿತಿ ಕೊಟ್ಟ ಕೇಂದ್ರ

(Budget 2022 Nirmala Sitharaman announces kisan drone e bill for farmers)

Comments are closed.