ಅರ್ಜುನ್ ಸರ್ಜಾ ವಿರುದ್ಧದ ಮೀಟೂ ( MeToo ) ಪ್ರಕರಣದಲ್ಲಿ ಸೂಕ್ತ ಸಾಕ್ಷ್ಯಾಧಾರಗಳ ಕೊರತೆ ಕಾರಣ ನೀಡಿ ಪೊಲೀಸ್ ಇಲಾಖೆ ಬಿ ರಿಪೋರ್ಟ್ ಸಲ್ಲಿಸಿದೆ. ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಸಲ್ಲಿಕೆಯಾದ ದೂರಿನ ವಿಚಾರಣೆ ನಡೆಸಿದ ಬಳಿಕ ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿದ್ದಾರೆ. ಅರುಣ ವೈದ್ಯನಾಥನ್ ನಿರ್ದೇಶನದ ವಿಸ್ಮಯ ಸಿನಿಮಾದಲ್ಲಿ ಹಿರಿಯ ನಟ ಅರ್ಜುನ್ ಸರ್ಜಾ ಹಾಗೂ ನಟಿ ಶೃತಿ ಹರಿಹರನ್ ಪತಿ ಪತ್ನಿ ಪಾತ್ರದಲ್ಲಿ ನಟಿಸಿದ್ದರು. ಈ ವೇಳೆ ಶೂಟಿಂಗ್ ನಲ್ಲಿ ನನ್ನ ಮೇಲೆ ಅರ್ಜುನ್ ಸರ್ಜಾ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದಿ ನಟಿ ಶೃತಿ ಹರಿಹರನ್ ಮೀಟೂ ಆರೋಪ ಹೊರಿಸಿದ್ದರು.
ಸ್ಯಾಂಡಲ್ ವುಡ್ ಸಂಚಲನ ಮೂಡಿಸಿದ್ದ ಈ ಪ್ರಕರಣದಿಂದ ಕೋಲಾಹಲವೇ ಸೃಷ್ಟಿಯಾಗಿತ್ತು.ಹಲವರು ಅರ್ಜುನ್ ಸರ್ಜಾ ಬೆಂಬಲಿಸಿದ್ದರೇ ಇನ್ನು ಕೆಲವರು ಶೃತಿ ಹರಿಹರನ್ ಪರ ನಿಂತಿದ್ದರು. ಈ ವೇಳೆ ಹಿರಿಯ ನಟ ಅಂಬರೀಶ್ ನೇತೃತ್ವದಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿ ಅರ್ಜುನ್ ಸರ್ಜಾ ಹಾಗೂ ಶೃತಿ ಹರಿಹರನ್ ನಡುವಿನ ಈ ಪ್ರಕರಣವನ್ನು ಮಾತುಕತೆ ಮೂಲಕ ಬಗೆಹರಿಸುವ ಪ್ರಯತ್ನ ನಡೆಸಿತ್ತು. ಆದರೆ ಅಂಬರೀಶ್ ಮಧ್ಯಸ್ಥಿಕೆಯಲ್ಲಿ ನಡೆದ ಈ ಸಭೆಯಿಂದ ಹೊರ ನಡೆದಿದ್ದ ಶೃತಿ ಹರಿಹರನ್ ತಾವು ಪೊಲೀಸ್ ಠಾಣೆಗೆ ದೂರು ನೀಡಿ ಕಾನೂನಿನ ಮೂಲಕ ನ್ಯಾಯ ಪಡೆಯಲಿಚ್ಛಿಸುವುದಾಗಿ ಹೇಳಿದ್ದರು.

ಅರ್ಜುನ್ ಸರ್ಜಾ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ಯಲ್ಲಿ ಲೈಂಗಿಕ ದೌರ್ಜನ್ಯ, ಜೀವ ಬೆದರಿಕೆ ಹಾಗೂ ಮಹಿಳೆಯರ ಗೌರವಕ್ಕೆ ಧಕ್ಕೆ ತಂದ ಆರೋಪದಡಿ ಪ್ರಕರಣ ದಾಖಲಾಗಿತ್ತು. ಆದರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲು ವಿಫಲವಾದ ಹಿನ್ನೆಲೆಯಲ್ಲಿ ಅರ್ಜುನ್ ಸರ್ಜಾ ವಿರುದ್ಧ ಬಿ ರಿಪೋರ್ಟ್ ಸಲ್ಲಿಕೆಯಾಗಿದೆ. ಈ ವಿಚಾರವನ್ನು ಸರ್ಜಾ ಕುಟುಂಬ ಸಂಭ್ರಮಿಸಿದ್ದು, ನಟಿ ಹಾಗೂ ಸರ್ಜಾ ಕುಟುಂಬದ ಸೊಸೆ ಮೇಘನಾರಾಜ್ ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಹಾಕಿರುವ ಪೋಸ್ಟ್ ಗಮನ ಸೆಳೆದಿದೆ.

ಯಾವುದನ್ನು ಉಲ್ಲೇಖಿಸದೇ ಮೇಘನಾ ರಾಜ್ , ಅರ್ಜುನ್ ಸರ್ಜಾ ಯಾವಾಗಲೂ ಜಂಟಲ್ ಮ್ಯಾನ್ ಎಂದಿದ್ದಾರೆ. ಇನ್ನೊಂದೆಡೆ ಧ್ರುವ್ ಸರ್ಜಾ ಧರ್ಮೋ ರಕ್ಷತಿ ರಕ್ಷಿತಃ ಎಂದಿದ್ದಾರೆ. ಅಲ್ಲದೇ ಸೊಳ್ಳೆ ಕ್ರಿಮಿ ಕೀಟಗಳನ್ನು ಸೊಳ್ಳೆಬ್ಯಾಟ್ ನಿಂದ ಹೊಡೆಯುತ್ತಿರುವ ದೃಶ್ಯವನ್ನು ಪರೋಕ್ಷವಾಗಿ ಟಾಂಟ್‌ನೀಡುವ ರೀತಿ ಶೇರ್ ಮಾಡಿದ್ದಾರೆ.

ಒಟ್ಟಿನಲ್ಲಿ ಸ್ಯಾಂಡಲ್ ವುಡ್ ಸೇರಿದಂತೆ ಸಿನಿಮಾ ರಂಗ ದಲ್ಲೇ ಚರ್ಚೆಗೆ ಗ್ರಾಸವಾಗಿದ್ದ ಮೀಟೂ ಪ್ರಕರಣ ಅಂತ್ಯ ಕಂಡಿದ್ದು ನಟಿ ಶೃತಿ ಹರಿಹರನ್ ಗೆ ಹಿನ್ನಡೆಯಾಗಿದೆ.
ಇದನ್ನೂ ಓದಿ : KGF -2 RECORD : ಬಿಡುಗಡೆಗೂ ಮುನ್ನ ಮತ್ತೊಂದು ದಾಖಲೆ ಬರೆದ ಕೆಜಿಎಫ್-2: ಟೀಸರ್ ವೀವ್ಸ್ ಎಷ್ಟು ಗೊತ್ತಾ?
ಇದನ್ನೂ ಓದಿ : ಕತ್ರಿನಾ ಮದುವೆಗೆ ಒಮಿಕ್ರಾನ್ ಆತಂಕ: ಅದ್ದೂರಿ ವಿವಾಹಕ್ಕೆ ಅಡ್ಡಿಯಾಗುತ್ತಾ ವೈರಸ್
( B Report to the Arjun Sarja MeToo case: about Meghna Raj , Dhruv Sarja reaction)