ಕತ್ರಿನಾ ಮದುವೆಗೆ ಒಮಿಕ್ರಾನ್ ಆತಂಕ: ಅದ್ದೂರಿ ವಿವಾಹಕ್ಕೆ ಅಡ್ಡಿಯಾಗುತ್ತಾ ವೈರಸ್

ಬಾಲಿವುಡ್ ಸುಂದರಿ ಕತ್ರಿನಾಕೈಫ್ ಕೊನೆಗೂ ತಮ್ಮ ಬಹುಕಾಲದ ಪ್ರೀತಿಗೆ ಮದುವೆಯ ಅಧಿಕೃತ ಮುದ್ರೆ ಒತ್ತಲು ಸಿದ್ಧವಾಗಿದ್ದಾರೆ. ಡಿಸೆಂಬರ್ ನಲ್ಲಿ ನಡೆಯಲಿರೋ ಅದ್ದೂರಿ ಟ್ರೆಡಿಷನಲ್ ವೆಡ್ಡಿಂಗ್ ಗೆ ಎಲ್ಲವೂ ಸಿದ್ಧವಾಗುತ್ತಿದೆ. ಆದರೆ ಈ ಖುಷಿಗೆ ಕರೋನಾ ರೂಪಾಂತರಿ ವೈರಸ್ ಒಮಿಕ್ರಾನ್ ಭೀತಿ ಅಡ್ಡಿಯಾಗಿದ್ದು ಅತಿಥಿಗಳ ಪಟ್ಟಿ ಸೇರಿದಂತೆ ಮದುವೆಯ ಮೇಲೆ ಒಮಿಕ್ರಾನ್ ಎಫೆಕ್ಟ್ ಬೀಳೋ ಮುನ್ಸೂಚನೆ ಸಿಕ್ಕಿದೆ.

ಪಡ್ಡೆ ಹೈಕಳ ನಿದ್ದೆಗೆಡಿಸುವ ಸುಂದರಿ ಕತ್ರಿನಾ ಕೈಫ್ ಕೊನೆಗೂ ಸಪ್ತಪದಿ ತುಳಿಯಲು ಸಿದ್ಧವಾಗಿದ್ದಾರೆ. ಚಿಕಣಿ ಛಮೇಲಿ ಎಂದು ಮೈಬಳುಕಿಸಿದ್ದ ಕತ್ರಿನಾ ಪ್ರೀತಿಸಿದ್ದ ವಿಕ್ಕಿ ಕೌಶಲ್ ಜೊತೆಗೆ ಹೊಸಬದುಕಿಗೆ ಅಡಿ ಇಡಲು ಸಿದ್ಧವಾಗಿದ್ದು ಅದ್ದೂರಿ ವೆಡ್ಡಿಂಗ್ ಗೆ ಎಲ್ಲವೂ ಸಿದ್ಧವಾಗುತ್ತಿದೆ.

ಆದರೆ ಬಾಲಿವುಡ್ ಬೆಡಗಿ ಮದುವೆಗೆ ಕೊರೋನಾ ಶತ್ರುವಾಗೋ ಲಕ್ಷಣವಿದ್ದು ಭಾರತಕ್ಕೆ ಎದುರಾಗಿರುವ ಒಮಿಕ್ರಾನ್ ರೂಪಾಂತರಿ ವೈರಸ್ ಭೀತಿಯಿಂದ ಕತ್ರಿನಾ ಮದುವೆ ಕಳೆಗುಂದುವ ಸಾಧ್ಯತೆ ಇದೆ.

ಈಗಾಗಲೇ ಈ ಜೋಡಿ ಸಖತ್ ಪ್ಲ್ಯಾನ್ಸ್ ಜೊತೆ ವೆಡ್ಡಿಂಗ್ ಡೇಟ್ ಕೂಡ ಫೈನಲ್ ಮಾಡಿದ್ದು ಡಿಸೆಂಬರ್  ೭ ರಿಂದ ೯ ರವರೆಗೆ ಮದುವೆ ರಾಜಸ್ಥಾನದ ಐಷಾರಾಮಿ ಹೊಟೇಲ್ ನಲ್ಲಿ ನಡೆಯಲಿದೆ.

ಇದಕ್ಕಾಗಿ ಮೇನ್ ವೆನ್ಯುನಲ್ಲಿ ಭರದ ಸಿದ್ಧತೆ ನಡೆದಿದ್ದು ಅದ್ದೂರಿ ಸೆಟ್ ಸೇರಿದಂತೆ ಅಲಂಕಾರದ ಸಿದ್ಧತೆ ನಡೆದಿದೆ.ಮಾತ್ರವಲ್ಲ ರಾಜಸ್ಥಾನದ ಒಟ್ಟು ೪೫ ಹೊಟೇಲ್ ಗಳನ್ನು ಕತ್ರಿನಾ ಹಾಗೂ ವಿಕ್ಕಿ ಕೌಶಲ್ ಮದುವೆ ಗೆ ಬರೋ ಅತಿಥಿಗಳಿಗಾಗಿ ಬುಕ್ ಮಾಡಲಾಗಿದೆಯಂತೆ.

ಆದರೆ ಕೆಲ ದಿನಗಳಿಂದ ಮತ್ತೆ ದೇಶಕ್ಕೆ ಕೊರೋನಾ ರೂಪಾಂತರಿ ಸೋಂಕಿನ ಆತಂಕ ಎದುರಾಗಿದ್ದು ವಿಮಾನಯಾನ,ಏರ್ಪೋರ್ಟ್ ಸೇರಿದಂತೆ ಎಲ್ಲ ಜನಸಂದಣಿಯ ಸ್ಥಳಗಳ ಮೇಲೆ ನಿರ್ಬಂಧ ಹೇರುವ ಸಿದ್ಧತೆ ನಡೆದಿದೆ.

ಮಾತ್ರವಲ್ಲ ಮದುವೆ ಸೇರಿದಂತೆ ಸಮಾರಂಭಗಳ ಮೇಲೂ ನಿಯಂತ್ರಣ ಹೇರುವ ಸಾಧ್ಯತೆ ಇದೆ. ಹೀಗಾಗಿ ಕತ್ರಿನಾ ಹಾಗೂ ವಿಕ್ಕಿ ಕೌಶಲ್ ಮದುವೆ ಮೇಲೆ ಈ ಕೊರೋನಾ ಎಫೆಕ್ಟ್ ಕರಿನೆರಳಿನಂತಾಗೋ ಸಾಧ್ಯತೆ ಇದೆ.

ಬಾಲಿವುಡ್ ಹಾಲಿವುಡ್ ಸೇರಿದಂತೆ ದೇಶ ವಿದೇಶದಿಂದ ಕತ್ರಿನಾ ಮದುವೆಗೆ ಗಣ್ಯರು ಆಗಮಿಸುವ ನೀರಿಕ್ಷೆ ಇತ್ತು. ಆದರೆ ಈಗ ಒಮಿಕ್ರಾನ್ ಆತಂಕದಿಂದ ಕತ್ರಿನಾ ಮದುವೆಯಲ್ಲಿ ಗಣ್ಯರ ಪಾಲ್ಗೊಳ್ಳುವಿಕೆಯೇ ಅನುಮಾನ ಎಂಬಂತಾಗಿದೆ. ಹೀಗಾಗಿ ಬಾಲಿವುಡ್ ಬೆಡಗಿ ಕತ್ರಿನಾ ಮದುವೆ ಸರಳವಾಗಿ ನಡೆಯುತ್ತಾ ಅನ್ನೋ ಅನುಮಾನ ಕೂಡ ವ್ಯಕ್ತವಾಗಿದೆ.

ತನಗಿಂತ ಐದು ವರ್ಷ ಸಣ್ಣವರಾದ ವಿಕ್ಕಿ ಕೌಶಲ್ ರನ್ನು ಕತ್ರಿನಾ ಹಲವು ವರ್ಷದಿಂದ ಪ್ರೀತಿಸುತ್ತಿದ್ದು ಪರಸ್ಪರ ಕುಟುಂಬದ ಅನುಮತಿ ಪಡೆದು ಈ ಜೋಡಿ ಹೊಸಬದುಕಿಗೆ ಕಾಲಿಡಲು ನಿರ್ಧರಿಸಿತ್ತು.

Comments are closed.