ಬೆಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದೆ. ಒಂದಡೆ ಸಿಸಿಬಿ ಪೊಲೀಸರು ಡ್ರಗ್ಸ್ ಪೆಡ್ಲರ್ ಗಳನ್ನು ಜಾಲಾಡುತ್ತಿದ್ರೆ, ಇನ್ನೊಂದೆಡೆ ಆಂತರಿಕ ಭದ್ರತಾ ದಳದ ಕೂಡ ಅಖಾಡಕ್ಕೆ ಧುಮುಕಿದೆ. ಇದೀಗ ಗಟ್ಟಿಮೇಳ ಧಾರಾವಾಹಿಯ ನಟಿ ಹಾಗೂ ನಟನಿಗೆ ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ಜಾರಿ ಮಾಡಿದೆ.

ಆಂತರಿಕ ಭದ್ರತಾ ದಳದದ ಪೊಲೀಸರು ಈಗಾಗಲೇ ನಟ ಯೋಗಿ, ಕ್ರಿಕೆಟಿಗ ಅಯ್ಯಪ್ಪ ಸೇರಿದಂತೆ ಹಲವರನ್ನು ವಿಚಾರಣೆಗೆ ಒಳಪಡಿಸಿದೆ. ಇದೀಗ ಗಟ್ಟಿಮೇಳ ಧಾರವಾಗಿಯ ಗೀತಾ ಭಾರತಿ ಭಟ್ ಹಾಗೂ ವಿಕ್ರಾಂತ್ ಖ್ಯಾತಯ ಅಭಿಷೇಕ್ ದಾಸ್ ಅವರನ್ನು ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ಜಾರಿ ಮಾಡಿದೆ.

ಈ ಕುರಿತು ಗೀತಾ ಭಾರತಿ ಭಟ್ ಪ್ರತಿಕ್ರೀಯೆ ನೀಡಿದ್ದಾರೆ. ಡ್ರಗ್ ಕೇಸ್ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ಬಂದಿರುವುದು ನಿಜ. ನಾನು ಈ ವಿಚಾರವಾಗಿ ಪ್ಯಾನಿಕ್ ಆಗಿದ್ದೇನೆ.

ವಿಚಾರಣೆಗೆ ಕರೆದಿದ್ದಾರೆ ಎಂದರೆ ನಾವು ತಪ್ಪು ಮಾಡಿದ್ದೇವೆ ಎಂದಲ್ಲ. ನಮಗೆ ಆಗದವರು ನನ್ನ ಹೆಸರು ಹೇಳಿರಬಹುದು. ವಿಚಾರಣೆಗೆ ಹಾಜರಾಗೋದಾಗಿ ಹೇಳಿದ್ದಾರೆ.

ಇಷ್ಟುದಿನ ಸ್ಯಾಂಡಲ್ ವುಡ್ ಸುತ್ತುತ್ತಿದ್ದ ಡ್ರಗ್ಸ್ ದಂಧೆ ಪ್ರಕರಣ ಇದೀಗ ಕಿರುತೆರೆಗೂ ಕಾಲಿಟ್ಟಿದ್ದು, ಒಂದೊಂದೆ ನಟ, ನಟಿಯರು ವಿಚಾರಣೆಗೆ ಹಾಜರಾಗುತ್ತಿದ್ದಾರೆ.