ಸೋಮವಾರ, ಏಪ್ರಿಲ್ 28, 2025
HomeCinemaek love ya movie : ರಚಿತಾ ರಾಮ್ ಬಹುನೀರಿಕ್ಷಿತ ಸಿನಿಮಾಗೆ ಶಾಕ್ : ರಿಲೀಸ್...

ek love ya movie : ರಚಿತಾ ರಾಮ್ ಬಹುನೀರಿಕ್ಷಿತ ಸಿನಿಮಾಗೆ ಶಾಕ್ : ರಿಲೀಸ್ ಡೇಟ್ ಮುಂದೂಡಿದ ಜೋಗಿ ಪ್ರೇಮ್

- Advertisement -

ರಾಜ್ಯದಲ್ಲಿ ಕೊರೋನಾ ಹಾಗೂ ಓಮೈಕ್ರಾನ್ ಪ್ರಕರಣಗಳಲ್ಲಿ ಗಣನೀಯ ಏರಿಕೆಯಾಗುತ್ತಿದ್ದು ರಾಜ್ಯ ಸರ್ಕಾರ ತುರ್ತು ಅಗತ್ಯ ಸೇವೆ ಹೊರತುಪಡಿಸಿ ಉಳಿದ ರಂಗಗಳ‌ ಮೇಲೆ ನಿರ್ಬಂಧ ಹೇರಿದೆ. ರಾಜ್ಯದಲ್ಲಿ ಸಿನಿಮಾ ಥಿಯೇಟರ್ ಗಳಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಶೇಕಡಾ 50 ರಷ್ಟು ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ಶುಕ್ರವಾರ ರಾತ್ರಿಯಿಂದ ಸೋಮವಾರ ಮುಂಜಾನೆಯವರೆಗೆ ಥಿಯೇಟರ್ ಗಳ ಬಾಗಿಲು ಮುಚ್ಚಲಿದೆ. ಸರ್ಕಾರ ಏರುತ್ತಿರುವ ಕೊರೋನಾ ನಿಯಂತ್ರಣಕ್ಕೆ ಈ ಕ್ರಮ ಕೈಗೊಂಡಿದ್ದರೂ ಚಲನಚಿತ್ರರಂಗ ಸಂಕಷ್ಟಕ್ಕೆ ಸಿಲುಕಿದ್ದು, ರಿಲೀಸ್ ಆಗಿರೋ ಸಿನಿಮಾಗಳ ಪ್ರದರ್ಶನಕ್ಕೆ ಅಡ್ಡಿ ಉಂಟಾಗಿದೆ.‌ ಮಾತ್ರವಲ್ಲ ಹೊಸ ಸಿನಿಮಾಗಳ ಬಿಡುಗಡೆಗೂ ಆತಂಕ ಎದುರಾಗಿದೆ. ಈ ಮಧ್ಯೆ ಜನವರಿ 21 ರಂದು ತೆರೆಗೆ ಬರಬೇಕಿದ್ದ ಜೋಗಿ ಪ್ರೇಮ್ ನಿರ್ದೇಶನದ ಏಕ್ ಲವ್ ಯಾ (ek love ya movie) ಸಿನಿಮಾ ರಿಲೀಸ್ ಮುಂದೂಡಲು ನಿರ್ದೇಶಕ ಪ್ರೇಮ್ ನಿರ್ಧರಿಸಿದ್ದಾರೆ‌

ಜನವರಿ 21 ರಂದು ಸಿನಿಮಾ ರಾಜ್ಯದಾದ್ಯಂತ ಅದ್ದೂರಿ ಪ್ರದರ್ಶನ ಕಾಣಬೇಕಿತ್ತು. ಆದರೆ ಜನವರಿ 19 ರ ವರೆಗೆ ರಾಜ್ಯ ಸರ್ಕಾರದ ಕರ್ಪ್ಯೂ ಸೇರಿದಂತೆ ವಿವಿಧ ನಿಯಮಗಳನ್ನು ಜಾರಿಗೊಳಿಸಲಾಗಿದೆ.ಹೀಗಾಗಿ‌ಜನರು ಥಿಯೇಟರ್ ಗಸ ಬರೋದು ಡೌಟ್. ಇನ್ನು ಸದ್ಯದ ಕೊರೋನಾ ಹಾಗೂ ಓಮೈಕ್ರಾನ್ ಪ್ರಕರಣಗಳ ಸಂಖ್ಯೆಯನ್ನು ಗಮನಿಸಿದ್ರೇ ಜನವರಿ ಅಂತ್ಯದ ವೇಳೆಗೆ ಪ್ರಕರಣಗಳು ಇನ್ನಷ್ಟು ಹೆಚ್ಚಲಿದ್ದು, ಹೀಗಾಗಿ ನಿಯಮಗಳು ಮತ್ತಷ್ಟು ಕಠಿಣವಾಗುವ ಸಾಧ್ಯತೆ ಇದೆ. ಹೀಗಾಗಿ ನಿಯಮಗಳನ್ನು ನೋಡಿಕೊಂಡು ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಮಾಡಲು ಪ್ರೇಮ್ ತೀರ್ಮಾನಿಸಿದ್ದಾರಂತೆ.

ಈಗಾಗಲೇ ಚಿತ್ರರಂಗ, ನಿರ್ಮಾಪಕರು ಸಂಕಷ್ಟದಲ್ಲಿದ್ದು, ಇತ್ತೀಚಿಗಷ್ಟೇ ಕೆಲ ಚಿತ್ರಗಳು ರಿಲೀಸ್ ಆಗಿ ಯಶಸ್ವಿ ಪ್ರದರ್ಶನಕಂಡು ಚೇತರಿಸಿಕೊಳ್ಳಲಾರಂಭಿಸಿತ್ತು. ಇದರ ಮಧ್ಯೆಯೇ ಮತ್ತೆ ಶಾಕ್ ಎದುರಾಗಿದೆ. ಈಗಾಗಲೇ ಹಾಡುಗಳಿಂದ ಸಖತ್ ಹಿಟ್ ಎನ್ನಿಸಿರುವ ಎಕ್ ಲವ್ ಯಾ ಸಿನಿಮಾದ ಮೇಲೆ ಸಹಜವಾಗಿಯೇ ಪ್ರೇಕ್ಷಕರ ನೀರಿಕ್ಷೆ ದುಪ್ಪಟ್ಟಾಗಿದೆ. ಈ ಸಿನಿಮಾದಲ್ಲಿ ನಟಿ ರಚಿತಾ ರಾಮ್ ಸಖತ್ ಹಾಟ್ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಎಣ್ಣೆ ಬಾಟಲಿ ಹಿಡಿದು ಹೆಜ್ಜೆ ಹಾಕಿದ್ದಾರೆ.

ತೆಲುಗು ಪ್ರಸಿದ್ಧ ಗಾಯಕಿ‌ ಮಂಗ್ಲಿ ಕೂಡ ಈ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಸಿಂಗಿಂಗ್ ಲೋಕಕ್ಕೆ ಕಾಲಿಟ್ಟಿದ್ದಾರೆ. ಕ್ರೇಜಿ ಕ್ವೀನ್ ರಕ್ಷಿತಾ ತಮ್ಮ ಸಹೋದರ ರಾಣಾ ಗಾಗಿ ನಿರ್ಮಿಸಿರೋ ಸಿನಿಮಾದಲ್ಲಿ ರಾಣಾ ಅದೃಷ್ಟ ಪರೀಕ್ಷೆ ನಡೆಯಲಿದ್ದು ಸಿನಿಮಾದ ಹಾಡುಗಳು ನಾಯಕನ ಮೇಲೆ ನೀರಿಕ್ಷೆ ಹುಟ್ಟಿಸಿದೆ.

(ek love ya movie postpone, bad news for rachitha ram fans)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular