Uddhab Bharali : ಪದ್ಮಶ್ರೀ ಪುರಸ್ಕೃತ ಉದ್ಧಬ್​ ಭಾರಾಲಿ ವಿರುದ್ಧ ಅತ್ಯಾಚಾರ ಆರೋಪ

Uddhab Bharali :ಆಸ್ಸಾಂನ ಪದ್ಮಶ್ರೀ ಪುರಸ್ಕೃತ ಉದ್ಧಭ್​ ಭಾರಾಲಿ ವಿರುದ್ಧ ಅತ್ಯಾಚಾರ ಆರೋಪ ಎದುರಾಗಿದ್ದು ಈ ಸಂಬಂಧ ಉತ್ತರ ಲಖೀಂಪುರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉದ್ದಭ್​​ ಭಾರಾಲಿ ತಮ್ಮದೇ ಪೋಷಣೆಯಲ್ಲಿದ್ದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ.


ಉದ್ದಭ್​ ಭಾರಾಲಿ ವಿರುದ್ಧ ಪೋಸ್ಕೋ ಕಾಯ್ದೆ ಹಾಗೂ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್​ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಎಫ್​ಐಆರ್​ ದಾಖಲಾದ ಬಳಿಕ ಉದ್ಧಭ್​ ಭಾರಾಲಿ ತಮ್ಮ ಬಂಧನಕ್ಕೂ ಮುನ್ನವೇ ಜಾಮೀನು ಕೋರಿ ಗುವಾಹಟಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದರು. ನ್ಯಾಯಮೂರ್ತಿ ಅರುಣ್​ ದೇವ್​ ಚೌಧರಿ ಅವರಿದ್ದ ಗುವಾಹಟಿ ಹೈಕೋರ್ಟ್​ನ ನ್ಯಾಯಪೀಠವು ವಿವಿಧ ಷರತ್ತುಗಳನ್ನು ನೀಡಿದ ನಿರೀಕ್ಷಣಾ ಜಾಮೀನು ನೀಡಿದೆ.
ನಿರೀಕ್ಷಣಾ ಜಾಮೀನು ನೀಡಿದ ಗುವಾಹಟಿ ಹೈಕೋರ್ಟ್​ 25 ಸಾವಿರ ರೂಪಾಯಿಗಳ ಜಾಮೀನು ಬಾಂಡ್​ ಒದಗಿಸುವಂತೆ ಹೇಳಿದೆ. ಅಲ್ಲದೇ ಲಿಖಿತ ಅನುಮತಿಯಿಲ್ಲದೇ ಪೊಲೀಸ್​ ಠಾಣೆ ವ್ಯಾಪ್ತಿಯಿಂದ ಯಾವುದೇ ಕಾರಣಕ್ಕೂ ಹೊರಗೆ ಹೋಗುವಂತಿಲ್ಲ ಎಂದು ಭಾರಾಲಿಗೆ ಷರತ್ತು ವಿಧಿಸಲಾಗಿದೆ.


ಆಸ್ಸಾಂನ ನವೋದ್ಯಮಿಯಾಗಿರುವ ಉದ್ಧಬ್​ ಬಾರಾಲಿ 460 ಯಂತ್ರೋಪಕರಣಗಳ ಪೇಟೆಂಟ್​ ಹೊಂದಿದ್ದಾರೆ. ಭತ್ತ ಒಕ್ಕಣೆ, ದಾಳಿಂಬೆ ಡಿ – ಸಿಡರ್​, ಕಬ್ಬು ತೆಗೆಯುವ ಯಂತ್ರ ಸೇರಿದಂತೆ ವಿವಿಧ ಆವಿಷ್ಕಾರಗಳನ್ನು ಮಾಡಿದ್ದರು. ಇಂಜಿನಿಯರಿಂಗ್​ ಕ್ಷೇತ್ರದಲ್ಲಿ ಉದ್ದಬ್​ ಬಾರಾಲಿ ಸಾಧನೆ ಗಮನಿಸಿದ ಕೇಂದ್ರ ಸರ್ಕಾರ 2019ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು.ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ನವ ಉದ್ಯಮಿ ಉದ್ಧಭ್​ ಬಾರಾಲಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದ್ದರು.

Padma awardee Uddhab Bharali booked for rape of minor in Assam

ಇದನ್ನು ಓದಿ : Sindhutai Sapkal : ಅನಾಥ ಮಕ್ಕಳ ತಾಯಿ , ಪದ್ಮಶ್ರೀ ಪುರಸ್ಕೃತೆ ಸಿಂಧುತಾಯಿ ಸಪ್ಕಾಲ್​ ನಿಧನ

ಇದನ್ನೂ ಓದಿ : Omicron cases : ಹೊಸ ರೂಪಾಂತರಿಯ ಹುಟ್ಟಿಗೆ ಕಾರಣವಾಗಲಿದೆ ಓಮಿಕ್ರಾನ್​ : ಡಬ್ಲುಹೆಚ್​ಓ ಎಚ್ಚರಿಕೆ

Comments are closed.