ಸೋಮವಾರ, ಏಪ್ರಿಲ್ 28, 2025
HomeCinemaSudeep : ಸುದೀಪ್ ಗಾಗಿ ಅಭಿಮಾನಿಗಳ ಉರುಳುಸೇವೆ : ಕಿಚ್ಚನಿಗೆ ಅಂತಹದ್ದೇನಾಯ್ತು ಗೊತ್ತಾ?!

Sudeep : ಸುದೀಪ್ ಗಾಗಿ ಅಭಿಮಾನಿಗಳ ಉರುಳುಸೇವೆ : ಕಿಚ್ಚನಿಗೆ ಅಂತಹದ್ದೇನಾಯ್ತು ಗೊತ್ತಾ?!

- Advertisement -

ಸ್ಯಾಂಡಲ್ ವುಡ್ ನ ಅಭಿನಯ ಚಕ್ರವರ್ತಿ ಸುದೀಪ್ ಗೆ ವಿಶ್ವದಾದ್ಯಂತ ಅಭಿಮಾನಿಗಳಿದ್ದಾರೆ. ಸುದೀಪ್‌ (Sudeep) ಅವರಿಗೆ ಒಂದು ಸಣ್ಣ ಅನಾರೋಗ್ಯವಾದರೂ ಅಭಿಮಾನಿಗಳ ಹೃದಯ ಕಂಪಿಸುತ್ತದೆ. ಇಂತಹುದೇ ಅನಾರೋಗ್ಯದ ಹೊತ್ತಿನಲ್ಲಿ ಸುದೀಪ್ ಅಭಿಮಾನಿಗಳು ಹರಕೆ ಹೊತ್ತಿಲ್ಲದೇ ಉರುಳುಸೇವೆ ಮಾಡಿ ತಮ್ಮ ಪ್ರೀತಿ ತೋರಿದ್ದಾರೆ. ಸುದೀಪ್ ಅಭಿಮಾನಿಗಳು ನವೆಂಬರ್ 9 ರಂದು ಮಲೆ‌ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿದ್ದಾರೆ. ಮಾತ್ರವಲ್ಲ ಸಾಲಾಗಿ ಉರುಳುಸೇವೆ ಮಾಡಿ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

Sudeep-sandalwood actor-biography

ಇಷ್ಟಕ್ಕೂ ಸುದೀಪ್ ಫ್ಯಾನ್ಸ್ ಹೀಗೆ ಉರುಳುಸೇವೆ ಮಾಡಿದ್ಸ್ಯಾಕೆ ಅಂದ್ರೆ ಅಲ್ಲೊಂದು ಅಭಿಮಾನದ ಕತೆ ತೆರೆದುಕೊಳ್ಳುತ್ತದೆ. ಕೊರೋನಾ ಉಲ್ಬಣಿಸಿದ ಕಾಲದಲ್ಲೇ ನಟ ಸುದೀಪ್ ಕೊರೋನಾ ಸೋಂಕಿಗೆ ತುತ್ತಾಗಿದ್ದರು.‌ಕುಟುಂಬ ವರ್ಗ ಮುಚ್ಚಿಡಲು ಪ್ರಯತ್ನಿಸಿದರೂ ಈ ಸಂಗತಿ ಅಭಿಮಾನಿಗಳನ್ನು ತಲುಪಿತ್ತು. ಹೀಗಾಗಿ ಹಲವೆಡೆ ಸುದೀಪ್ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನಿಗಾಗಿ ಪ್ರಾರ್ಥಿಸಿದ್ದರು. ಈ ವೇಳೆ ಟಿ.ನರಸಿಪುರದ ಅಭಿಮಾನಿಗಳು ಸುದೀಪ್ ಅರೋಗ್ಯ ಕ್ಕಾಗಿ ಉರುಳುಸೇವೆಯ ಹರಕೆ ಹೊತ್ತಿದ್ದರು. ಬಳಿಕ ಸುದೀಪ್ ಅನಾರೋಗ್ಯದಿಂದ ಚೇತರಿಸಿಕೊಂಡಿದ್ದರು.

ಈಗ ಸುದೀಪ್ ಅನಾರೋಗ್ಯ ಮರೆತೇ ಹೋಗುವಷ್ಟು fine and fit ಆಗಿದ್ದು ವಿಕ್ರಾಂತ್ ರೋಣ ಶೂಟಿಂಗ್ ಕೂಡ ಮುಗಿಸಿ ಡಬ್ಬಿಂಗ್ ಪೂರ್ತಿಗೊಳಿಸಿದ್ದಾರೆ. ಹೀಗಾಗಿ ಅಭಿಮಾನಿಗಳು ಈಗ ಮಲೆ‌ಮಹದೇಶ್ವರ ಬೆಟ್ಟಕ್ಕೆ ತೆರಳಿ ತಮ್ಮ ಹರಕೆ ಪೊರೈಸಿದ್ದಾರೆ. ಚಳಿ ಚಳಿ ವಾತಾವರಣದಲ್ಲೂ ಮಲೆ ಮಹದೇಶ್ವರ ಬೆಟ್ಟದಲ್ಲಿ ಉರುಳುಸೇವೆ ಸಲ್ಲಿಸಿ ತಮ್ಮ ನೆಚ್ಚಿನ ನಟ ಸುದೀಪ್ ಆರೋಗ್ಯಕ್ಕೆ ಪ್ರಾರ್ಥಿಸಿದ್ದಾರೆ. ಅಷ್ಟೇ ಅಲ್ಲ ಈ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ :‌ KOTIGOBBA 3 : ಸಿನಿಮಾ ರಿಲೀಸ್‌ ಬೆನ್ನಲ್ಲೇ ಕಿಚ್ಚನ ಆ ಒಂದು ಟ್ವೀಟ್‌ಗೆ ಅಭಿಮಾನಿಗಳು ಫಿದಾ

ಈ ವಿಡಿಯೋವನ್ನು ಟ್ವೀಟರ್ ನಲ್ಲಿ ಶೇರ್ ಮಾಡಿರೋ ಸುದೀಪ್ ಅಭಿಮಾನಿಗಳ ಅಭಿಮಾನಕ್ಕೆ ತಮ್ಮ ನಮನ ತಿಳಿಸಿದ್ದಾರೆ. ಸುದೀಪ್ ಅಭಿಮಾನಿಗಳ ಈ ಅಭಿಮಾನದ ಪರಾಕಾಷ್ಠೆಗೆ ಲಕ್ಷಾಂತರ ಅಭಿಮಾನಿಗಳು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಸದ್ಯ ಕೋಟಿಗೊಬ್ಬ-೩ ಸಿನಿಮಾ ಯಶಸ್ಸಿನ ಸಂಭ್ರಮದಲ್ಲಿರೋ ಸುದೀಪ್ ಮುಂದಿನ ಚಿತ್ರ ವಿಕ್ರಾಂತ ರೋಣ ಬಿಡುಗಡೆಗೆ ಸಿದ್ಧವಾಗಿದೆ. ಆದರೆ ಬಿಡುಗಡೆಯ ದಿನಾಂಕ ನಿಗದಿಯಾಗಿಲ್ಲ. ಕನ್ನಡ ಸೇರಿದಂತೆ ಐದು ಭಾಷೆಯಲ್ಲಿ ಏಕಕಾಲಕ್ಕೆ ವಿಕ್ರಾಂತ ರೋಣ ಸಿನಿಮಾ ತೆರೆಗೆ ಬರಲಿದೆ.

ಇದನ್ನೂ ಓದಿ : ಮತ್ತೊಮ್ಮೆ ತೆರೆಗೆ ಬರಲಿ ಯುವರತ್ನ: ಪವರ್ ಸ್ಟಾರ್ ಅಭಿಮಾನಿಗಳ ಭಾವುಕ ಬೇಡಿಕೆ

(Fan rolls for Sudeep: Do you know what happened to Kicchaa?)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular