ಸೋಮವಾರ, ಜೂನ್ 16, 2025
HomeCinemaGoldenstar Ganesh:ಸ್ಯಾಂಡಲ್ ವುಡ್ ಗೆ ಜ್ಯೂನಿಯರ್ ಗೋಲ್ಡನ್ ಸ್ಟಾರ್: ಮಗನ ಹುಟ್ಟುಹಬ್ಬದಂದು ಗಣೇಶ್ ಕೊಟ್ರು ಸಿಹಿಸುದ್ದಿ

Goldenstar Ganesh:ಸ್ಯಾಂಡಲ್ ವುಡ್ ಗೆ ಜ್ಯೂನಿಯರ್ ಗೋಲ್ಡನ್ ಸ್ಟಾರ್: ಮಗನ ಹುಟ್ಟುಹಬ್ಬದಂದು ಗಣೇಶ್ ಕೊಟ್ರು ಸಿಹಿಸುದ್ದಿ

- Advertisement -

ವಿಭಿನ್ನ ಕತೆಯೊಂದನ್ನು ಆಧರಿಸಿ ತೆರೆಗೆ ಬರುತ್ತಿರುವ ಸಖತ್ ಸಿನಿಮಾ ಅಡ್ಡಾದಿಂದ ಸಿಹಿಸುದ್ದಿಯೊಂದನ್ನು ನೀಡಿದ್ದಾರೆ ಗೋಲ್ಡನ್ ಸ್ಟಾರ್ ಗಣೇಶ್.  ಅಪ್ಪನ ಸಿನಿಮಾದ ಮೂಲಕ ಮಗನೂ ಸ್ಯಾಂಡಲ್ ವುಡ್ ಗೆ ಕಾಲಿರಸಲು ಸಜ್ಜಾಗಿದ್ದು, ಪುತ್ರನ ಹುಟ್ಟುಹಬ್ಬದಂದೇ ಗಣೇಶ್ ಈ ಸಿಹಿಸುದ್ದಿ ಹಂಚಿಕೊಂಡಿದ್ದಾರೆ.

ಟ್ವಿಟರ್, ಇನ್ ಸ್ಟಾಗ್ರಾಂ ಸೇರಿದಂತೆ ಎಲ್ಲ ಸೋಷಿಯಲ್ ಮೀಡಿಯಾದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ತಮ್ಮ ಮಗ ಚಿತ್ರರಂಗಕ್ಕೆ ಪ್ರವೇಶಿಸಿರುವ ಸಂಗತಿಯನ್ನು ಹಂಚಿಕೊಂಡಿದ್ದಾರೆ. ಮೊಳಕೆಯ ಬೆಳೆಯುವ ಸಿರಿಯನು ತೆರೆಯ ಮೇಲೆ ನೀವೇ ನೋಡಿ ಹರಸಿ ಹಾರೈಸಿ ಆಶೀವರ್ದಿಸಿ ಎಂದು ಗಣೇಶ್ ಪೋಸ್ಟ್ ಹಾಕಿದ್ದಾರೆ.

ವಿಹಾನ್ ವಿವಿಧ ಕಾಸ್ಟ್ಯೂಮ್ ನಲ್ಲಿ  ಕಾಣಿಸಿಕೊಂಡಿರುವ ಪೋಟೋಗಳನ್ನು ಗೋಲ್ಡನ್ ಸ್ಟಾರ್ ಗಣೇಶ್ ಹಂಚಿಕೊಂಡಿದ್ದಾರೆ. ಮೂಲಗಳ ಮಾಹಿತಿ ಪ್ರಕಾರ ಗಣೇಶ್ ರಿಯಾಲಿಟಿ ಶೋದಲ್ಲಿ ಭಾಗವಹಿಸುವ ಹುಡುಗನ ಪಾತ್ರದಲ್ಲಿ ಗಣೇಶ್ ಕಾಣಿಸಿಕೊಂಡಿದ್ದು, ಈ ಪಾತ್ರದ ಬಾಲಕ ವರ್ಸನ್ ನಲ್ಲಿ ವಿಹಾನ್ ಗಣೇಶ ಬಣ್ಣ ಹಚ್ಚಿದ್ದಾರಂತೆ.

ಗಣೇಶ್ ,ಶಿಲ್ಪಾರನ್ನು ಮದುವೆಯಾಗಿದ್ದು,  ಚಾರಿತ್ರ್ಯ ಹಾಗೂ ವಿಹಾನ್ ಎಂಬ ಎರಡು ಮಕ್ಕಳಿದ್ದಾರೆ. ಸಿಂಪಲ್ ಸುನಿ ನಿರ್ದೇಶನದಲ್ಲಿ ಸಿದ್ಧವಾಗುತ್ತಿರುವ  ಈ ಸಿನಿಮಾದಲ್ಲಿ ಗಣೇಶ್ ಗೆ ನಿಶ್ಚಿಕಾ ನಾಯ್ಡು ನಾಯಕಿಯಾಗಿ ನಟಿಸುತ್ತಿದ್ದಾರೆ. ಸಖತ್ ಸಿನಿಮಾಗೆ ಜುಡಾ ಸ್ಯಾಂಡಿ ಸಂಗೀತವಿದ್ದು, ಸಂತೋಷ ರೈ ಪಾತಾಜೆ ಛಾಯಾಗ್ರಹಣವಿದೆ.

RELATED ARTICLES

Most Popular